‘ಕಳಚಿತು ಬಿಜೆಪಿ-ಹಿಂದೂ ನಾಯಕರ ಮುಖವಾಡ’- ‘ಹೊಸ ಕನ್ನಡ’ ಪತ್ರಿಕಾ ವರದಿಗೆ ಶರಣ್ ಪಂಪ್ ವೆಲ್ ಬಿಗ್ ಪ್ರತಿಕ್ರಿಯೆ ! !
‘ಸೌಜನ್ಯ ಪ್ರಕರಣದಲ್ಲಿ ರಾತ್ರೋ ರಾತ್ರಿ ಕಳಚಿತು ಬಿಜೆಪಿ ಹಿಂದೂ ನಾಯಕರ ಮುಖವಾಡ’ ಎಂಬ ಹೆಸರಿನಲ್ಲಿನಿನ್ನೆ ಸೌಜನ್ಯ ಮನೆಗೆ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಬಿಜೆಪಿ ಪರಿವಾರ ಹೋದ ನಂತರ ಆದ ಬೆಳವಣಿಗೆಗಳ ಬಗ್ಗೆ ಇಂದು ಬೆಳಿಗ್ಗೆ ಬರೆದಿದ್ದೆವು. ಅದಕ್ಕೀಗ, ಖುದ್ದು ವಿಶ್ವ ಹಿಂದೂ ಪರಿಷತ್ ನ ಪ್ರಾಂತೀಯ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಅವರು ಹೊಸ ಕನ್ನಡ ಪತ್ರಿಕೆಯ ಜತೆ ಮಾತನಾಡಿದ್ದಾರೆ. ನಿನ್ನೆ ಅಲ್ಲಿಗೆ ತೆರಳಿದ ಹಿನ್ನೆಲೆ ಮತ್ತು ಅದರ ಉದ್ದೇಶವನ್ನು ಶರಣ್ ಪಂಪ್ ವೆಲ್ ರವರು ಸ್ಪಷ್ಟಪಡಿಸಿದ್ದಾರೆ.
ಏನಂದ್ರು ಶರಣ್ ಪಂಪ್ ವೆಲ್ ?:
ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಆದ ನಂತರ, ಹೈಕೋರ್ಟು ನೀಡಿದ ಹೇಳಿಕೆಯ ಮೇಲೆ ನಾವು ಸೌಜನ್ಯ ಕುಟುಂಬಕ್ಕೆ ಕಾನೂನು ನೆರವು ಕೊಡುವ ನಿಟ್ಟಿನಲ್ಲಿ ಹೋಗಿದ್ದೆವು. ನಿಜಕ್ಕೂ ನಮ್ಮ ಉದ್ದೇಶ ಸೌಜನ್ಯಳಿಗೆ ನ್ಯಾಯ ಕೊಡಿಸುವುದು. ಮೂಲ ದೂರುದಾರರು ಅಥವಾ ಸೌಜನ್ಯ ಕುಟುಂಬ ಮಾತ್ರ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಅಥವಾ ಸರ್ಕಾರವನ್ನು ಒತ್ತಾಯಿಸಲು ಅರ್ಹರು, ಎಂದು ಹೇಳಿತ್ತು. ಇಂತಿಷ್ಟು ದಿನಗಳ ಒಳಗೆ ಮಾತ್ರ ಹೈಕೋರ್ಟ್ ಗೆ ಅಪೀಲು ಹಾಕಬಹುದು, ಬೇಕಾದರೆ ನಾವು ನಿಮಗೆ ಕಾನೂನಿನ ಸಹಾಯ ಮಾಡುತ್ತೇವೆ – ಎನ್ನುವುದನ್ನು ತಿಳಿಸಲು ನಾವು ನಿನ್ನೆ ಹೋಗಿದ್ದೆವು. ನಾವು ಒತ್ತಾಯ ಮಾಡಿರಲಿಲ್ಲ. ನಿಜಕ್ಕೂ ನಮಗೆ ಸೌಜನ್ಯಳಿಗೆ ನ್ಯಾಯ ಕೊಡಿಸುವ ಉತ್ಸಾಹ ಮತ್ತು ಬದ್ಧತೆ ಇದೆ” ಎಂದಿದ್ದಾರೆ ಶರಣ್ ಪಂಪ್ ವೆಲ್.