Photo And Video Recovery: ಮೊಬೈಲ್ ಬಳಸುವಾಗ ಮಿಸ್ ಆಗಿ ಫೋಟೋ, ವಿಡಿಯೋ ಡಿಲಿಟ್ ಆಗುತ್ತಾ? ಹಾಗಿದ್ರೆ ಚಿಂತೆ ಬಿಡಿ, ಜಸ್ಟ್ ಹೀಗ್ ಮಾಡಿ ಮರಳಿ ಪಡೆಯಿರಿ

Photo And Video Recovery: ಸ್ಮಾರ್ಟ್‌ಫೋನ್‌ನಲ್ಲಿ ನೀವು ಸವಿನೆನಪಿಗಾಗಿ ಹಲವಾರು ವಿಡಿಯೋ ಮತ್ತು ಫೋಟೋ ಗಳನ್ನು ಇರಿಸಿಕೊಂಡಿರುತ್ತೀರಿ . ಆದ್ರೆ ಕೆಲವೊಮ್ಮೆ ಸಂಗ್ರಹಿಸಿ ಇಟ್ಟುಕೊಂಡ ಅಥವಾ ಫೋನಿನಲ್ಲಿ ಸೆರೆಹಿಡಿದ ಫೋಟೊ ಮತ್ತು ವಿಡಿಯೋಗಳು ಗೊತ್ತಿಲ್ಲದೆ ಸಡನ್ ಆಗಿ ಡಿಲೀಟ್ ಆದರೆ ಬೇಸರವಾಗುತ್ತದೆ. ಆದರೆ ಹೀಗೆ ಆಕಸ್ಮಿಕವಾಗಿ ಸ್ಮಾರ್ಟ್‌ಫೋನಿನಲ್ಲಿನ ಫೋಟೋ ಮತ್ತು ವಿಡಿಯೋ ಡಿಲೀಟ್ ಆದರೆ ಚಿಂತಿಸಬೇಕಾಗಿಲ್ಲ. ಆ ಫೈಲ್‌ಗಳನ್ನು ಸುಲಭವಾಗಿ ಮರಳಿ (Photo And Video Recovery) ಪಡೆಯಲು ಸಾಧ್ಯವಿದೆ.

ಹೌದು, ಡಿಲೀಟ್ ಆದ ಫೈಲ್‌ಗಳನ್ನು ಫೋನ್‌ ಗ್ಯಾಲರಿಗೆ ವಾಪಾಸ್ ರಿಸ್ಟೋರ್ ಮಾಡಿಕೊಳ್ಳಲು ಸುಲಭ ಉಪಾಯವಿದೆ. ಡಿಲೀಟ್ ಆದ ಫೈಲ್‌ಗಳನ್ನು ಸುಲಭವಾಗಿ ಹಂತಗಳಲ್ಲಿ ರೀಸ್ಟೋರ್ ಮಾಡಿಕೊಳ್ಳಲು ಸಾಧ್ಯವಿದೆ. ಆದರೆ ಈ ಡೇಟಾವನ್ನು ನೀವು ಸೀಮಿತ ಸಮಯದೊಳಗೆ ಮರಳಿ ಪಡೆಯಬಹುದು.

ಅಂದರೆ ಯಾವುದೇ ಫೋಟೋಗಳು ಅಥವಾ ವೀಡಿಯೊಗಳನ್ನು ಡಿಲೀಟ್ ಮಾಡಲಾಗಿದ್ದರೆ ಈ ಡೇಟಾ ಕೇವಲ 30 ದಿನಗಳವರೆಗೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಫೋನ್ನಿಂದ ನೀವು ಡೇಟಾವನ್ನು ಡಿಲೀಟ್ ಮಾಡಲಾದರೂ ಸಹ ನೀವು ಅದನ್ನು 30 ದಿನಗಳವರೆಗೆ ಮರುಪಡೆಯಬಹುದು.

ಡಿಲೀಟ್ ಮಾಡಲಾದ ಫೋಟೋ ಮತ್ತು ವೀಡಿಯೊಗಳನ್ನು ಹಿಂಪಡೆಯುವುದು ವಿಧಾನ ಇಲ್ಲಿದೆ :

ಮೊದಲಿಗೆ ನಿಮ್ಮ ಫೋನ್ನಲ್ಲಿರುವ ಗ್ಯಾಲರಿ ಅಪ್ಲಿಕೇಶನ್ಗೆ ಹೋಗಿ.
ನಂತರ ಕೆಳಭಾಗದಲ್ಲಿರುವ ಆಲ್ಬಮ್ಗಳ ಟ್ಯಾಬ್ಗೆ ಹೋಗಿ.
ನಂತರ ಇಲ್ಲಿ ಕೆಳಗೆ ಬಂದು ಇತ್ತೀಚೆಗೆ ಡಿಲೀಟ್ (Recently Deleted) ಮಾಡಲಾದ ಆಯ್ಕೆಯನ್ನು ಟ್ಯಾಪ್ ಮಾಡಿ.
ಇಲ್ಲಿಂದ ನೀವು ಹಿಂಪಡೆಯಲು ಬಯಸುವ ಎಲ್ಲಾ ವೀಡಿಯೊಗಳು ಮತ್ತು ಫೋಟೋಗಳು ಅದರ ಹಿಂದಿನ ಸ್ಥಳಕ್ಕೆ ಬರುತ್ತದೆ.

ಅದಲ್ಲದೆ Google ಫೋಟೋಗಳು ಸಹ ರಿಕವರ್ ಮಾಡಬಹುದು. ‘ಗೂಗಲ್ ಫೋಟೋಸ್’ ಆ್ಯಪ್ ತೆರೆದಾಗ, ಎಡ ಮೇಲ್ಭಾಗದಲ್ಲಿ ಮೂರು ಗೆರೆಗಳ ಮೆನು ಕಾಣಿಸುತ್ತದೆ. ಅದನ್ನು ಸ್ಪರ್ಶಿಸಿದಾಗ, Trash ಹೆಸರಿನ ಒಂದು ಫೋಲ್ಡರ್ ಕಾಣಿಸುತ್ತದೆ. ನೀವು ಅಳಿಸಿದ ಫೈಲ್ಗಳು ಅದರಲ್ಲಿರುತ್ತವೆ. ಯಾವ ಫೋಟೋ ನಿಮಗೆ ಮರಳಿ ದೊರೆಯಬೇಕೋ, ಅದನ್ನು ಒತ್ತಿ ಹಿಡಿದಾಗ ‘ರೈಟ್’ ಮಾರ್ಕ್ ಜೊತೆಗೆ ಅದು ಆಯ್ಕೆಯಾಗುತ್ತದೆ ಮತ್ತು ‘Restore’ ಎಂಬ ಬಟನ್ ಗೋಚರಿಸುತ್ತದೆ. ಅದನ್ನು ಒತ್ತಿದರಾಯಿತು, ನಿಮಗೆ ಬೇಕಾದ ಫೋಟೋ, ಪ್ರಧಾನ ಫೋಲ್ಡರ್ಗೆ ಮರಳುತ್ತದೆ. ಆದರೆ, ಫೋಟೋ ಡಿಲೀಟ್ ಆದ 60 ದಿನಗಳೊಳಗೆ ಮಾತ್ರ ಅದನ್ನು ಹಿಂಪಡೆಯುವುದು ಸಾಧ್ಯವಾಗುತ್ತದೆ.

Leave A Reply

Your email address will not be published.