Anna bhagya: ಅನ್ನಭಾಗ್ಯದ ಉಚಿತ ಅಕ್ಕಿ, ಪುಕ್ಸಟೆ ದುಡ್ಡು ಪಡೆದು ನೆಮ್ಮದಿಯಿಂದ ಇದ್ದವರಿಗೆ ಬಿಗ್ ಶಾಕ್- ಮತ್ತೆ ಇಂತಹ 5.18 ಲಕ್ಷ ಹೆಸರು ಡಿಲೀಟ್ ಮಾಡಿದ ಸರ್ಕಾರ !!

Anna bhagya: ಸತ್ತವರ ಹೆಸರಿನಲ್ಲಿ ಪಡಿತರ ಮತ್ತು ಡಿಬಿಟಿ ಮೂಲಕ ಹಣ ಪಡೆಯುತ್ತಿದ್ದ 5.18 ಲಕ್ಷಕ್ಕೂ ಹೆಚ್ಚು ಅನರ್ಹ ಫಲಾನುಭವಿಗಳನ್ನು ಪತ್ತೆ ಮಾಡುವ ಮೂಲಕ ಸರಕಾರದ ಬೊಕ್ಕಸಕ್ಕೆ ಆಗುತ್ತಿದ್ದ ಕೋಟ್ಯಂತರ ರೂ. ನಷ್ಟವನ್ನು ತಡೆಯಲಾಗಿದೆ. ಇದು ಮುಖ್ಯವಾಗಿ ಸರ್ಕಾರವು ಬಡವರಿಗಾಗಿ ತಂದ ಯೋಜನೆ. ಇದರ ಲಾಭ ನೇರವಾಗಿ ಬಡವರಿಗೆ ಸಲ್ಲಬೇಕು. ಆದರೆ ಕೆಲವರು ಅನರ್ಹರೂ ಕೂಡ ಇದರ ಲಾಭ ಪಡೆಯುತ್ತಿದ್ದಾರೆ. ಹೀಗಾಗಿ ಸರ್ಕಾರ ಇಂತಹ ಮಹತ್ವದ ನಿರ್ಧಾರ ಕೈಗೊಂಡಿದೆ.

ಹೌದು, ಬದುಕಿರುವವರಿಗೆ ಅನ್ನಭಾಗ್ಯದಲ್ಲಿ(Anna bhagya) ಪಡಿತರ ಕೊಡದ ಸರಕಾರ ಸತ್ತವರಿಗೆ ವಿತರಿಸುವ ಮೂಲಕ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವನ್ನು ಉಂಟು ಮಾಡಲಾಗಿತ್ತು. ಮೃತಪಟ್ಟವರ ಹೆಸರಿನಲ್ಲೂ ಪಡಿತರ ವಿತರಿಸುತ್ತಿರುವ ಬಗ್ಗೆ ಸಾಕಷ್ಟು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಜುಲೈನಿಂದ ಆಗಸ್ಟ್ ವರೆಗೆ ಪರಿಶೀಲನೆ ನಡೆಸಿ ಲಕ್ಷಾಂತರ ಮೃತರ ಹೆಸರುಗಳನ್ನು ಡಿಲೀಟ್ ಮಾಡಿದೆ.

ಮೃತಪಟ್ಟವರ ಹೆಸರನ್ನು ಡಿಲೀಟ್ ಮಾಡಿಸುವಂತೆ ಸರ್ಕಾರ ಅರಿವು ಮೂಡಿಸಿದ್ದರೂ ಅನೇಕರು ಮೃತಪಟ್ಟವರ ಹೆಸರಿನಲ್ಲಿ ಪಡಿತರ ಪಡೆದುಕೊಳ್ಳುತ್ತಿರುವುದು ಕಂಡು ಬಂದಿದೆ. ಹೀಗಾಗಿ, ಮರಣ ಹೊಂದಿರುವವರ ವಿವರಗಳನ್ನು ಜನನ-ಮರಣ ನೋಂದಣಿ ಇಲಾಖೆಯ ಇ-ಜನ್ಮ ವಿಭಾಗದಿಂದ ಆಧಾರ್‌ ಕಾರ್ಡ್‌ನ ಮಾಹಿತಿ ಮೇರೆಗೆ ಸತ್ತವರ ಹೆಸರುಗಳನ್ನು ಪತ್ತೆ ಹಚ್ಚಿ ಡಿಲೀಟ್‌ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕೆಲವರು ಮೂರು ತಿಂಗಳ ಹಿಂದೆ ನಿಧನರಾದರೆ, ಇನ್ನೂ ಕೆಲವರು ಆರೇಳು ತಿಂಗಳ ಹಿಂದೆ, ಮತ್ತೆ ಕೆಲವರು ವರ್ಷದ ಹಿಂದೆ ನಿಧನರಾದವರೂ ಇದ್ದಾರೆ. ಇವರು ಈವರೆಗೆ ಪಡಿತರ ಪಡೆದಿದ್ದರೂ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆದರೆ, ಅವರ ಹೆಸರಿನಲ್ಲಿ ನೀಡುತ್ತಿದ್ದ 5 ಕೆ.ಜಿ. ಅಕ್ಕಿ ಮತ್ತು ಕಳೆದ ತಿಂಗಳಿಂದ ಹೆಚ್ಚುವರಿ 5 ಕೆ.ಜಿ. ಅಕ್ಕಿಗೆ ನೀಡುತ್ತಿದ್ದ ನೇರ ನಗದು ವರ್ಗಾವಣೆ (ಡಿಬಿಟಿ) ಹಣ ಸ್ಥಗಿತಗೊಳಿಸಲಾಗುವುದು. ಇದರಿಂದ ಸರಕಾರಕ್ಕೆ ತಿಂಗಳಿಗೆ ಪಡಿತರ ವಿತರಣೆಯಿಂದ ಬರೋಬ್ಬರಿ 8 ಕೋಟಿಯಷ್ಟು ನಷ್ಟ ತಡೆದಂತಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಾರ್ವಜನಿಕ ವಿತರಣೆ (ವಿಜಿಲೆನ್ಸ್‌) ಹೆಚ್ಚುವರಿ ನಿರ್ದೇಶಕ ಜ್ಞಾನೇಂದ್ರಕುಮಾರ್‌ ಗಂಗ್ವಾರ್‌ ತಿಳಿಸಿದರು.

ಈ ತಿಂಗಳ ಫಲನುಭವಿಗಳು 1.03 ಕೋಟಿ ಅನ್ನ ಭಾಗ್ಯ ಕಾರ್ಡ್ ಇದ್ದು, 3.69 ಕೋಟಿ ಫಲಾನುಭವಿಗಳಿದ್ದಾರೆ. 97.61 ಲಕ್ಷಕ್ಕೂ ಅಧಿಕ ಪಡಿತರ ಚೀಟಿಗಳಿಗೆ ಡಿಬಿಟಿ ಮೂಲಕ 565 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ. 4.42 ಕೋಟಿ ಫಲಾನುಭವಿಗಳ ಪೈಕಿ 5.18 ಲಕ್ಷಕ್ಕೂ ಹೆಚ್ಚು ಮಂದಿ ಹೆಸರು ಡಿಲೀಟ್ ಮಾಡಲಾಗಿದೆ. ಬೆಳಗಾವಿಯಲ್ಲಿ 37 ಸಾವಿರ, ತುಮಕೂರಿನಲ್ಲಿ 30 ಸಾವಿರ, ಮೈಸೂರಿನಲ್ಲಿ 26,000 ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಹೇಳಲಾಗಿದೆ.

Leave A Reply

Your email address will not be published.