Nirmalanandanatha swamy: ಸನಾತನ ಧರ್ಮದ ಕುರಿತು ಅಚ್ಚರಿಯ ಮಾಹಿತಿ ನೀಡಿದ ನಿರ್ಮಲಾನಂದನಾಥ ಸ್ವಾಮಿಜಿ- ಹೋರಾಟದ ಎಚ್ಚರಿಕೆ ನೀಡಿ ಶ್ರೀಗಳು ಹೇಳಿದ್ದೇನು?

Sanatana Dharma row Sri Nirmalanandanatha Swamiji statement on sanatana Dharma

Nirmalanandanatha swamy: ದೇಶದಲ್ಲಿ ಸದ್ಯ ಸನಾತನ ಧರ್ಮದ ವಿಚಾರ ವಿವಾದವಾಗಿ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಪಕ್ಷ ಹಾಗೂ ಪ್ರತಿಪಕ್ಷಗಳು ಆರೋಪ ಹಾಗೂ ಪ್ರತ್ಯಾರೋಪಗಳು ನಡೆಸುತ್ತಿವೆ. ಸ್ವತಃ ಪ್ರಧಾನಿ ಮೋದಿ(PM modi) ಅವರೇ ಈ ಕುರಿತು ಇದು ಅಪಾಯಕಾರಿ ವಿಚಾರ ಎಂದಿದ್ದಾರೆ. ಆದರೀಗ ಈ ಪ್ರಕರಣಕ್ಕೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮಿಗಳು( Nirmalanandanatha swamy) ಮೌನ ಮುರಿದಿದ್ದು, ಸನಾತನ ಹಿಂದೂ ಧರ್ಮದ ಬಗ್ಗೆ ಬೇಕಾಬಿಟ್ಟಿ ಹೇಳಿಕೆ ನೀಡಿದಂತೆ ಎಚ್ಚರಿಕೆ ನೀಡಿದ್ದಾರೆ.

ಹೌದು, ಇತ್ತೀಚೆಗೆ ಚೆನ್ನೈನಲ್ಲಿ (ಸೆ.2) ನಡೆದ ಕಾರ್ಯಕ್ರಮವೊಂದರಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಮಾತನಾಡಿ “ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾದಂತಹ ರೋಗಗಳಿಗೆ ಹೋಲಿಸಿ ಸನಾತನ ಧರ್ಮವನ್ನು ವಿರೋಧಿಸಬಾರದು. ನಾಶಪಡಿಸಬೇಕು’ ಎಂದು ಹೇಳಿಕೆ ನೀಡಿ ವಿವಾದವನ್ನು ಹುಟ್ಟು ಹಾಕಿದ್ದರು. ದಿನದಿಂದ ದಿನಕ್ಕೆ ಈ ವಿಚಾರ ಹೊಸ ಸ್ವರೂಪ ಪಡೆದುಕೊಳ್ಳುತ್ತಿದ್ದು, ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಸದ್ಯ ರಾಜ್ಯದ ಪ್ರಭಾವಿ ಮಠವಾದ ಆದಿಚುಂಚನಗಿರಿ ಮಠದ ಪೀಠಾದಿಪತಿಗಳಾದ ನಿರ್ಮಲಾನಂದನಾಥ ಸ್ವಾಮಿಗಳು ಮೌನ ಮುರಿದಿದ್ದು, ಸನಾತನ ಧರ್ಮದ ಮಹತ್ವ ತಿಳಿಸಿ ಬೇಕಾಬಿಟ್ಟಿ ಮಾತನಾಡಿದಂತೆ ಎಚ್ಚರಿಕೆ ನೀಡಿದ್ದಾರೆ.

ಯದಾಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ” ಎಂಬ ಸಂದೇಶವನ್ನು ಉಲ್ಲೇಖಿಸಿ ಮಾತನಾಡಿದ ಶ್ರೀಗಳು, ಸನಾತನ ಪದಕ್ಕೆ ಶಾಶ್ವತ ಎನ್ನುವ ಅರ್ಥವಿದೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಜಾಗೃತವಾಗಿ ಮಾತನಾಡಬೇಕು. ಬಳಸುವ ಪದದ ಮೇಲೆ ನಿಗಾ ಇರಬೇಕು. ಸನಾತನ ಪದಕ್ಕೆ ಇಂಗ್ಲಿಷ್​ನಲ್ಲಿ ಪುರಾತನ ಎಂಬ ಅರ್ಥ ಇದೆ. ಸನಾತನ ಎಂಬುವುದಕ್ಕೆ ಶಾಶ್ವತ ಎಂಬ ವ್ಯಾಖ್ಯಾನವು ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಅದೇ ಸನಾತನ. ಈ ಪದ ಮತ್ತೊಂದು ರೀತಿ ಪುರಾತನ ಎಂಬ ಅರ್ಥ ಕೊಡುತ್ತದೆ ಎಂದಿದ್ದಾರೆ.

ಅಲ್ಲದೆ ಧರ್ಮಗಳ ಉದಯವನ್ನು ನೋಡಿದರೆ, ಮುಸ್ಲಿಂ ಧರ್ಮಕ್ಕೆ 1600 ವರ್ಷಗಳ ಇತಿಹಾಸ ಇದೆ, ಕ್ರಿಶ್ಚಿಯನ್ ಧರ್ಮಕ್ಕೆ 2 ಸಾವಿರ ವರ್ಷಗಳ ಇತಿಹಾಸ ಇದೆ, ಬೌದ್ಧ ಮತ್ತು ಜೈನ ಧರ್ಮಗಳೆರೆಡು 2500 ವರ್ಷಗಳ ಹಿಂದೆ ಶುರುವಾಗಿದ್ದು. ಆನಂತರ ಸಿಖ್ ಮತ್ತು ಯಹೂದಿ ಧರ್ಮಗಳು ಬಂದವು. ಆದರೆ, ಮಹಾಭಾರತದ ಕಾಲದಲ್ಲಿ ಕೃಷ್ಣ ಹಿಂದೂ ಧರ್ಮದ ಬಗ್ಗೆ ಹೇಳಿದ್ದಾನೆ. ಆದ್ದರಿಂದ ಹಿಂದೂ ಧರ್ಮ ಪುರಾತನವಾದುದು ಎಂಬ ಪುರಾವೆಗಳು ಹಿಂದೂ ಧರ್ಮದ ಬಗ್ಗೆ ಉಲ್ಲೇಖವಾಗಿವೆ. ಹಿಂದೂ ಧರ್ಮ ಸನಾತನ ಅಥವಾ ಪುರಾತನ ಎಂಬುದಕ್ಕೆ ಸಾಕ್ಷಿ ಇದೆ. ಪ್ರಪಂಚದಲ್ಲಿ ಎಲ್ಲಾ ವ್ಯಕ್ತಿಗಳು ವಿಭಿನ್ನವಾಗಿರುತ್ತಾರೆ ಎಂದು ಶ್ರೀಗಳು ಹೇಳಿದ್ದಾರೆ.

ಇಷ್ಟೇ ಅಲ್ಲದೆ ‘ಸೃಷ್ಟಿಯಲ್ಲಿ ಪ್ರತಿ ವ್ಯಕ್ತಿ, ಪ್ರತಿ ಧರ್ಮವೂ ಭಿನ್ನ. ನಾಡನ್ನು ಆಳುವ ದೊರೆ ನಾಸ್ತಿಕನಾದರೂ ಪ್ರಜೆಗಳ ಆಸ್ತಿಕತೆ ಗೌರವಿಸಬೇಕು ಎಂದು ಚಾಣಕ್ಯ ಬಹಳ ಹಿಂದೆಯೇ ಹೇಳಿದ್ದಾರೆ. ಇದು ಜನಪ್ರತಿನಿಧಿಗಳಿಗೂ ಅನ್ವಯಿಸುತ್ತದೆ ಎಂದರು. ಹಿಂದೂ ಧರ್ಮದ ಬಗ್ಗೆ ಹಿಂದೆಯೂ ಸಾಕಷ್ಟು ಅವಹೇಳನ ನಡೆದಿದೆ. ಇದು ಅತಿಯಾದಲ್ಲಿ ನಾವೂ ಇನ್ನೊಂದು ಹೆಜ್ಜೆ ಮುಂದಿಡಬೇಕಾಗುತ್ತದೆ’ ಎಂದು ಹೋರಾಟದ ಮುನ್ಸೂಚನೆಯನ್ನೂ ಅವರು ನೀಡಿದರು.

ಇದನ್ನೂ ಓದಿ: BJP state president: ಬೆಂಗಳೂರಿನ ಈ ಶಾಸಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ?! ಆಯ್ಕೆಗೂ ಇದೆಯಾ ಈ ಒಂದು ಕಾರಣ?

Leave A Reply

Your email address will not be published.