Hit and Run Case: ‘ಕಾಮಿಡಿ ಸ್ಟಾರ್’ ಚಂದ್ರಪ್ರಭಾ ಕಾರು ಅಪಘಾತ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ! ಅಪಘಾತ ನೋಡಿದ ಆಟೋ ಚಾಲಕ ಹೇಳಿದ್ದೇನು ?

Entertainment gicchi giligili show contest chandraprabha Chikmagalur hit and run case twist

Chandraprabha : ಕನ್ನಡದ ರಿಯಾಲಿಟಿ ಶೋ ಗಿಚ್ಚಿ ಗಿಲಿ ಗಿಲಿʼ (Gichchi Gili Gili Winner) ವಿನ್ನರ್ ಆದ ಚಂದ್ರಪ್ರಭಾ (Chandraprabha) ಅವರು ಹಿಟ್ & ರನ್ ಕೇಸ್ ವಿಚಾರವಾಗಿ ಭಾರೀ ಸುದ್ದಿಯಾಗುತ್ತಿದ್ದಾರೆ. ಚಂದ್ರಪ್ರಭ ಅವರು ಚಿಕ್ಕಮಗಳೂರು ಬಸ್‌ ನಿಲ್ದಾಣದ ಬಳಿ ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭ ಬೈಕ್‌ ಸವಾರನಿಗೆ ಗುದ್ದಿದ್ದಾರೆ ಎನ್ನಲಾಗಿದೆ. ಈ ರೀತಿ ಬೈಕ್ ಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ಮಾನವೀಯತೆಗೂ ಕೂಡ ಕಾರು ನಿಲ್ಲಿಸದೇ ನಟ ಪರಾರಿ ಆಗಿದ್ದು, ಪೊಲೀಸ್‌ ಠಾಣೆಯಲ್ಲಿ (Police Station)ದೂರು ದಾಖಲಾಗಿದೆ.

ಚಿಕ್ಕಮಗಳೂರು ನಗರದಲ್ಲಿ ಹಿಟ್ ಅಂಡ್ ರನ್ ಆಕ್ಸಿಡೆಂಟ್(Hit and Run Accident)ಮಾಡಲಾಗಿದ್ದು, ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿ ಬೈಕಿಗೆ ಗುದ್ದಿ ಕಾರು ಎಸ್ಕೇಪ್ ಆಗಿರುವ ಹಿಟ್ ಅಂಡ್ ರನ್ ಮಾಡಿ ಪರಾರಿ ಆಗಿದ್ದು, ಗಿಚ್ಚಿ ಗಿಲಿ-ಗಿಲಿ ಕಾಮಿಡಿ ಶೋ ನಟ ಚಂದ್ರ ಪ್ರಭಗೆ ಸೇರಿದ ಕಾರು ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರಿನಲ್ಲಿ ನಡೆದ ಕಾಮಿಡಿ ಸ್ಟಾರ್ ಚಂದ್ರಪ್ರಭಾ ಕಾರು ಅಪಘಾತ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಬಗ್ಗೆ ಚಿಕ್ಕಮಗಳೂರಿನ ಆಟೋ ಚಾಲಕ ರಂಗನಾಥ್ ಎಂಬುವವರು ಅಪಘಾತದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ನಟ ಚಂದ್ರಪ್ರಭ ಅವರು ಆಟೋ ಮಾಡಿ ಗಾಯಾಳನ್ನು ನಾನೇ ಆಸ್ಪತ್ರೆಗೆ ಸೇರಿಸಿದೆ ಎಂದಿದ್ದರು. ಆದರೆ ಈಗ ಕಾಮಿಡಿ ಸ್ಟಾರ್ ಚಂದ್ರಪ್ರಭ ವಿರುದ್ಧ ಆಟೋ ಚಾಲಕ ರಂಗನಾಥ್ ಆಕ್ರೋಶ ಹೊರ ಹಾಕಿದ್ದಾರೆ. ಗಾಯಾಳನ್ನು ಆಸ್ಪತ್ರೆಗೆ ಸೇರಿಸಿದ್ದು ನಾನು ಚಂದ್ರಪ್ರಭ ಅಲ್ಲವೆಂದು ಕಿಡಿಕಾರಿದ್ದಾರೆ.

ಬೈಕ್‌ನಲ್ಲಿದ್ದ ಯುವಕ ಮಾಲ್ತೇಶ್‌ಗೆ ಗುದ್ದಿ ನಟ ಎಸ್ಕೇಪ್ ಆಗಿದ್ದು, KA 51 MD 9552 ರಿಜಿಸ್ಟ್ರೇಷನ್ ನಂಬರ್ ಹೊಂದಿರುವ ಕಾರು ಇದಾಗಿದ್ದು, ಅಪಘಾತ ಮಾಡಿದ ಬಳಿಕ ಮಾನವೀಯತೆಗೂ ಕಾರು ನಿಲ್ಲಿಸದೆ ನಟ ಪರಾರಿಯಾಗಿದ್ದು, ಇನ್ನು ಅಪಘಾತ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರು ಮಾಲ್ತೇಶ್ ಎನ್ನುವವರ ಬೈಕ್‌ಗೆ ಗುದ್ದಿದ್ದು, ಕಾರು ಗುದ್ದಿರುವ ರಭಸಕ್ಕೆ ಮಾಲತೇಶ್ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಬೈಕ್ ಸವಾರ ಮದ್ಯಪಾನ ಮಾಡಿದ್ದು, ನಾವೇ ಆತನನ್ನು ಆಸ್ಪತ್ರೆಗೆ ಸೇರಿಸಿದ್ದೇವೆ ಎಂದು ಚಂದ್ರಪ್ರಭಾ ಹೇಳಿದ್ದಾರೆ. ನನ್ನ ತಮ್ಮನಿಗೆ ಕುಡಿಯುವ ಅಭ್ಯಾಸವಿಲ್ಲ ಎಂದು ಗಾಯಾಳು ಮಾಲ್ತೇಶ್ ಅಣ್ಣ ರಘು ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ನಗರದ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಪ್ರಕರಣದ ಕುರಿತಂತೆ, ಆಟೋ ಚಾಲಕ ರಂಗನಾಥ್ ಅವರು ಈ ಬಗ್ಗೆ ಹೇಳಿದ್ದೇನು?ಚಂದ್ರಪ್ರಭಾ ಕಾರು ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದು, ಆದರೆ ಚಂದ್ರಪ್ರಭಾ ಕಾರಿನಿಂದ ಇಳಿಯಲೇ ಇಲ್ಲ. ಅವರು ಕರೆಕ್ಟ್ ಆಗಿದ್ದರೆ ಮದ್ಯಪಾನ ಮಾಡದಿದ್ದರೆ ಗಾಡಿಯಿಂದ ಇಳಿಯುತ್ತಿದ್ದರು. ಆ ಬಳಿಕ ನಾನೇ ಗಾಯಾಳು ಬೈಕ್ ಸವಾರ ಮಾಲ್ತೇಶ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ನನ್ನ ಆಟೋದಲ್ಲೇ ಕರೆದುಕೊಂಡು ಹೋಗಿದ್ದೆ. ಆದರೆ ಇಷ್ಟೆಲ್ಲಾ ನಡೆದಿದ್ದರು ಕೂಡ ಚಂದ್ರಪ್ರಭಾ ಮಾನವೀಯತೆ ತೋರಲಿಲ್ಲ. ಆಸ್ಪತ್ರೆಗೆ ಕೂಡ ಬರದೇ ಓಡಿ ಹೋದರು ಎಂದು ಆಟೋ ಚಾಲಕ ರಂಗನಾಥ್ ಖಾಸಗಿ ಮಾಧ್ಯಮವೊಂದಕ್ಕೆ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Gruha Lakshmi Yojana: ರಾಜ್ಯದ ಯಜಮಾನಿಯರಿಗೆ ಬಿಗ್ ಶಾಕ್- ‘ಗೃಹಲಕ್ಷ್ಮೀ’ ನೊಂದಣಿ ತಾತ್ಕಾಲಿಕ ಸ್ಥಗಿತ- ಕೊನೇ ಕ್ಷಣದಲ್ಲಿ ಹೊಸ ಟ್ವಿಸ್ಟ್

Leave A Reply

Your email address will not be published.