ಪಕ್ಕದ ಮನೆಯ ನಾಯಿ ಕಚ್ಚಿದ ವಿಚಾರ ಪೋಷಕರಿಂದ ಮುಚ್ಚಿಟ್ಟ ಬಾಲಕ, ಇದೀಗ ರೇಬೀಸ್ ಗೆ ಬಲಿ

Uttar Pradesh news Ghaziabad boy dies of rabies hid dog bite from parents for over a month

Dog bite:ಒಂದು ತಿಂಗಳ ಹಿಂದೆ ತನಗೆ ಪಕ್ಕದ ಮನೆಯ ನಾಯಿ ಕಚ್ಚಿದ (Dog bite) ಘಟನೆಯನ್ನು ಪೋಷಕರಿಗೆ ತಿಳಿಸದೆ ಮುಚ್ಚಿಟ್ಟಿದ್ದ ಬಾಲಕ ಇದೀಗ ರೇಬಿಸ್ ಕಾಯಿಲೆ ಉಬ್ಬಣಗೊಂಡು ಮೃತಪಟ್ಟಿರುವ ಧಾರಣ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಎಂಟನೇ ತರಗತಿಯಲ್ಲಿ ಓದುತ್ತಿರುವ 14 ವರ್ಷ ಪ್ರಾಯದ ವಿದ್ಯಾರ್ಥಿ ಸಹವಾಜ್ ನನ್ನು ಆರೋಗ್ಯ ಬಿಗಡಾಯಿಸಿದ ಸಂದರ್ಭ ಸೋಮವಾರ ಆಸ್ಪತ್ರೆಗೆ ಸೇರಿಸಲಾಗಿತ್ತು ಅಲ್ಲಿ ಪ್ರಾಥಮಿಕ ಚಿಕಿತ್ಸೆಯ ನಂತರ ಮನೆಗೆ ಮರಳುವ ಸಂದರ್ಭ ಬಾಲಕ ತೀರಿಕೊಂಡಿದ್ದಾನೆ.

ಗಾಜಿಯಾಬಾದ್ ನಗರದ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚರಣ್ ಸಿಂಗ್ ಕಾಲೋನಿ ನಿವಾಸಿ ಬಾಲಕ ಶಹವಾಜ್ ಗೆ ಸುಮಾರು ಒಂದುವರೆ ತಿಂಗಳ ಹಿಂದೆ ನೆರೆಮನೆಯ ನಾಯಿ ಕಚ್ಚಿತ್ತು. ಮನೆಯಲ್ಲಿ ಪೋಷಕರು ಬೈಯುತ್ತಾರೆ ಎನ್ನುವ ಭಯದಿಂದ ಆತ ಅದನ್ನು ಪೋಷಕರಿಗೆ ಹೇಳಿರಲಿಲ್ಲ. ನಾಯಿ ಕಚ್ಚಿದ ಘಟನೆಯನ್ನು ಪೋಷಕರಿಂದ ಮುಚ್ಚಿಟ್ಟಿದ್ದ ಹುಡುಗ. ನಿಧಾನಕ್ಕೆ ನಾಯಿ ಕಚ್ಚಿದ ಗಾಯ ಕೂಡ ಒಣಗುತ್ತಾ ಬಂದಿತ್ತು. ಪೋಷಕರು ಮಗುವಿನ ಮೇಲೆ ಇದ್ದ ಗಾಯವನ್ನು ಗುರುತಿಸಿರಲಿಲ್ಲ.

ಎರಡು ದಿನಗಳ ಹಿಂದೆ ಹುಡುಗನ ಆರೋಗ್ಯದಲ್ಲಿ ಏರುಪೇರು ಶುರುವಾಯಿತು. ಮೊನ್ನೆ ಸೆಪ್ಟೆಂಬರ್ 1 ರಿಂದ ಹುಡುಗ ಊಟ ಮಾಡುವುದನ್ನು ನಿಲ್ಲಿಸಿದ್ದ. ಏನು ತಿನ್ನಲು ಹೋದರೂ ಆತನಿಗೆ ವಾಂತಿ ಬರುವಂತಾಗುತ್ತಿತ್ತು. ಆಗ ಆತನನ್ನು ವೈದ್ಯಕೀಯ ಚಿಕಿತ್ಸೆಗೆ ಕರೆದೊಯ್ಶಲಾಗಿತ್ತು. ಪೋಷಕರು ಹುಡುಗನಲ್ಲಿ ಮತ್ತಷ್ಟು ವಿಚಾರಿಸಿದ್ದಾರೆ. ಆಗ ಆತನಿಗೆ ಸುಮಾರು ಒಂದು ತಿಂಗಳ ಹಿಂದೆ ಪಕ್ಕದ ಮನೆಯ ನಾಯಿ ಕಚ್ಚಿರುವ ವಿಚಾರ ಗೊತ್ತಾಗಿದೆ.

ಭಯಗೊಂಡ ಪೋಷಕರು ಕೂಡಲೇ ಸಹವಾಜ್ ನನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ಆತನನ್ನು ವೈದ್ಯರು ದಾಖಲಿಸಿಕೊಳ್ಳದೆ ಔಷಧಿ ಕೊಟ್ಟು ಕಳಿಸಿದ್ದಾರೆ ಎನ್ನಲಾಗಿದೆ. ಆ ಬಳಿಕ ಆತನನ್ನು ಆಯುರ್ವೇದಿಕ್ ಡಾಕ್ಟರ್ ಬಳಿ ಕೂಡ ಕರೆಯಲಾಗಿದ್ದು, ಅಲ್ಲಿಂದ ಆತನನ್ನು ಆಂಬುಲೆನ್ಸ್ ಮೂಲಕ ಗಾಜಿಯಬಾದ್’ಗೆ ವಾಪಸ್ ತರುವಾಗ ಬಾಲಕ ದಾರಿ ಮಧ್ಯೆ ಮೃತಪಟ್ಟಿದ್ದಾನೆ. ಇದೀಗ ಈ ಸಂಬಂಧ ಪೊಲೀಸ್ ದೂರು ದಾಖಲಾಗಿದ್ದು ನಾಯಿ ಮಾಲೀಕರ ವಿರುದ್ಧ ಕೇಸು ದಾಖಲಾಗಿದೆ. ಪೊಲೀಸರು ಹೆಚ್ಚಿನ ಧನಿಕೆಯನ್ನು ಕೈಗೊಂಡಿದ್ದಾರೆ ಎಂದು ಕೊತ್ವಾಲಿ ಪ್ರದೇಶದ ಸಹಾಯಕ ಪೊಲೀಸ್ ಕಮಿಷನರ್ ನಿಮಿಷ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರೈತರಿಗೆ ಬಿಗ್ ಶಾಕ್- ಇನ್ಮುಂದೆ ಇಂತವರ ಖಾತೆಗೆ ಬರೋದಿಲ್ಲ PM ಕಿಸಾನ್ ಹಣ !! ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯಾ ?!

Leave A Reply

Your email address will not be published.