Home latest Mangaluru : ಕರಾವಳಿಗರೇ ನಿಮಗಿದೋ ಗುಡ್‌ನ್ಯೂಸ್‌: ಇನ್ನು ಮಂಗಳೂರು – ಬೆಂಗಳೂರು ಮಾರ್ಗದಲ್ಲಿ ಹಾರಾಲಿವೆ...

Mangaluru : ಕರಾವಳಿಗರೇ ನಿಮಗಿದೋ ಗುಡ್‌ನ್ಯೂಸ್‌: ಇನ್ನು ಮಂಗಳೂರು – ಬೆಂಗಳೂರು ಮಾರ್ಗದಲ್ಲಿ ಹಾರಾಲಿವೆ ಹೆಚ್ಚು ವಿಮಾನ – ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್

Mangaluru Bengaluru Additional Flight

Hindu neighbor gifts plot of land

Hindu neighbour gifts land to Muslim journalist

Mangaluru Bengaluru Additional Flight : ಕರಾವಳಿ ಮಂದಿಗೆ ಶುಭ ಸುದ್ದಿಯೊಂದು ಪ್ರಕಟವಾಗಿದೆ. ಮಂಗಳೂರು(Mangalore)ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ(Mangaluru Bengaluru Additional Flight) ಸೆಪ್ಟೆಂಬರ್‌ 7 ರಿಂದ ಹೆಚ್ಚುವರಿ ವಿಮಾನ ಸೇವೆಗಳು ಶುರುವಾಗಲಿದೆ.

ಮಂಗಳೂರು- ಬೆಂಗಳೂರು ಮತ್ತು ಮಂಗಳೂರು- ಪುಣೆ ಸೆಕ್ಟರ್‌ನಲ್ಲಿನ ವಿಮಾನ ವೇಳಾಪಟ್ಟಿಯಲ್ಲಿ ಅಲ್ಪ ಪ್ರಮಾಣದ ಬದಲಾವಣೆಯಾಗಿದೆ. ಸೋಮವಾರ- ಶುಕ್ರವಾರದಿಂದ ದೈನಂದಿನ ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳ ಚಲನೆಯನ್ನು 38 ರಿಂದ 40 ಕ್ಕೆ ಮತ್ತು ಶನಿವಾರ ಮತ್ತು ಭಾನುವಾರ 40 ರಿಂದ 42 ಕ್ಕೆ ಹೆಚ್ಚಿಸುವ ಕುರಿತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

ಈ ಹಿಂದೆ ವಾರದ ಎಲ್ಲಾ ದಿನಗಳು ಮತ್ತು ಭಾನುವಾರದಂದು 4 ವಿಮಾನಗಳು ಸಂಚಾರ ನಡೆಸುತ್ತಿತ್ತು. 5 ವಿಮಾನಗಳು ಮತ್ತು ಶನಿವಾರದಂದು ಸಂಚರಿಸುತ್ತಿದ್ದು, ಆದರೆ, ಇನ್ನು ಮುಂದೆ 6 ವಿಮಾನಗಳು ಸಂಚಾರ ನಡೆಸಲಿದೆ. ಈ ಹೆಚ್ಚುವರಿ ಇಂಡಿಗೋ ವಿಮಾನ ಅಕ್ಟೋಬರ್‌ 28ರ ವರೆಗೆ ಸಂಚಾರ ನಡೆಸಲಿದೆ. ಇಂಡಿಗೋ ಮಂಗಳವಾರ, ಗುರುವಾರ, ಭಾನುವಾರ ಮತ್ತು ಶನಿವಾರದಂದು ಮಂಗಳೂರು- ಪುಣೆ ಸಂಚಾರದ ವಿಮಾನದ ದಿನ ಮತ್ತು ಸಮಯವನ್ನು ಬದಲಾಯಿಸಿದ ಹಿನ್ನೆಲೆ ಶನಿವಾರ ಬೆಂಗಳೂರಿಗೆ ಆರನೇ ವಿಮಾನ ಕಲ್ಪಿಸಲು ಅವಕಾಶ ದೊರೆತಂತಾಗಿದೆ. ಬೆಳಗ್ಗೆ 8.35ಕ್ಕೆ ಮಂಗಳೂರಿಗೆ ಆಗಮಿಸಲಿರುವ 6ಇ 5347 ವಿಮಾನ 9.10ಕ್ಕೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದೆ.

ವಿಮಾನ 6ಇ294 ಮಂಗಳೂರಿಗೆ ಸಂಜೆ 5.50 ಕ್ಕೆ ಆಗಮಿಸುತ್ತದೆ ಮತ್ತು ಮಂಗಳವಾರ/ ಗುರುವಾರ ಮತ್ತು ಭಾನುವಾರದಂದು ಸಂಜೆ 6.35 ಕ್ಕೆ 6ಇ298 ವಿಮಾನ ಪುಣೆಗೆ ತೆರಳಲಿದೆ. ಶನಿವಾರ, 6ಇ359 ವಿಮಾನವು ಬೆಂಗಳೂರಿನಿಂದ ಸಂಜೆ 5.50 ಕ್ಕೆ ಮಂಗಳೂರಿಗೆ ಬರಲಿದ್ದು, ಆಬಳಿಕ 6ಇ298 ವಿಮಾನ 6.35 ಕ್ಕೆ ಪುಣೆಗೆ ತೆರಳಲಿದೆ ಎಂದು ಮಂಗಳೂರು ವಿಮಾನ ಪ್ರಾಧಿಕಾರ ಮಾಹಿತಿ ನೀಡಿದೆ.

ಇದನ್ನೂ ಓದಿ: ಸೆ. 11 ರಂದು ಬೆಂಗಳೂರು ಸಾರಿಗೆ ಬಂದ್: ಶಾಲಾ ಕಾಲೇಜುಗಳಿಗೆ ಅಂದು ರಜೆ ಇರುತ್ತಾ ?