Mobile apps: ಮೊಬೈಲ್ ಬಳಕೆದಾರರೇ ಎಚ್ಚರ.. ಎಚ್ಚರ !! ಈ 4 ಆಪ್ ಗಳು ಮೊಬೈಲ್ ನಲ್ಲಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿಯಾಗೋದು ಪಕ್ಕಾ !! ಕೂಡಲೇ ಅಲರ್ಟ್ ಆಗಿ ಡಿಲೀಟ್ ಮಾಡಿ

Mobile app: ಆಧುನಿಕ ಯುಗದಲ್ಲಿ ಜನರ ಜೀವನಕ್ಕೆ ಮೊಬೈಲ್(Mobile app) ಬಳಕೆ ಎಷ್ಟು ಉಪಯುಕ್ತವಾಗಿದೆಯೋ ಅಷ್ಟೇ ಮಾರಕವಾಗಿದೆ. ಹೀಗಿರುವಾಗ ನಾವು ನಮಗೆ ಗೊತ್ತಿಲ್ಲದಂತೆ ಅಥವಾ ಗೊತ್ತಿದ್ದು ಕೆಲವು ಅಪ್ಲಿಕೇಶನಗಳನ್ನು ಡೌನ್ಲೋಡ್ ಮಾಡಿರುತ್ತೇವೆ. ಆದರೆ,ಅವುಗಳಲ್ಲಿ ಕೆಲವೊಂದು ಅಪ್ಲಿಕೇಶನ್ಗಳು ನಮಗೆ ಸಂಚಕಾರಕವನ್ನು ತಂದೊಡ್ಡುತ್ತದೆ. ಅದರಲ್ಲೂ ಈ 4 ಆಪ್ ಗಳು ತುಂಬಾ ಡೇಂಜರಸ್. ಒಂದು ವೇಳೆ ಅವು ನಿಮ್ಮ ಫೋನ್ ನಲ್ಲಿದ್ದರೆ ದಯವಿಟ್ಟು ಈಗಲೇ ಡಿಲೀಟ್ ಮಾಡಿ.

ಹೌದು, ನಿಮ್ಮ ಸ್ಮಾರ್ಟ್ ಫೋನ್(Samrt phone) ನಲ್ಲಿರುವ ಅಪ್ಲಿಕೇಶನ್ ಅಸಲಿಯೋ ಅಥವಾ ನಕಲಿಯೋ? ಎಂದು ತಿಳಿದುಕೊಳ್ಳುವುದು ಮುಖ್ಯ. ಏಕೆಂದರೆ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಅನೇಕ ನಕಲಿ ಅಪ್ಲಿಕೇಶನ್ಗಳು ಇರುತ್ತದೆ. ಕೆಲವೊಂದು ಆಪ್ ಗಳು ನಮಗೆ ಗೊತ್ತಿಲ್ಲದೆ ನಾವು ಇನ್ಸ್ಟಾಲ್ ಮಾಡಿಕೊಂಡಿರುತ್ತೇವೆ. ಇದರಿಂದ ನಮಗೆ ತುಂಬಾ ಸಮಸ್ಯೆಗಳು ಬರುತ್ತವೆ. ಉದಾಹರಣೆ ಗೆ ನಿಮ್ಮ  ಮೊಬೈಲಿಗೆ ಬರುವ ಓಟಿಪಿ(OTP), ಪಾಸ್ ವರ್ಡ್ ಯಾರಿಗೂ ಹೇಳಬೇಡಿ, ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಕಾಲಿ ಆಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮೊಬೈಲ್ ನಲ್ಲಿ ಬೇಡದ ಅಪ್ಲಿಕೇಶನ್ಗಳನ್ನು ಇನ್ಸ್ಟಾಲ್ ಮಾಡಿದರೆ ಅದನ್ನು ತಕ್ಷಣ ಡಿಲೀಟ್ ಮಾಡಿಬಿಡಿ.

ನಿಮ್ಮ ಮೊಬೈಲ್ ನಲ್ಲಿರುವ ಈ ಅಪ್ಲಿಕೇಷನ್ ಗಳನ್ನು ತೆಗೆದುಹಾಕಿ :
ಕ್ಲೀನರ್ ಅಪ್ಲಿಕೇಷನ್:
ಜನರು ತಮ್ಮ ಸ್ಮಾರ್ಟ್ ಫೋನ್ ಗಳಿಂದ ಕ್ಯಾಶ್ ಅಥವಾ ಜಂಕ್ ಫೈಲ್ಗಳನ್ನು ತೆಗೆದುಹಾಕಲು ಪ್ರತ್ಯೇಕವಾಗಿ ಕ್ಲೀನರ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡುತ್ತಾರೆ. ಆದರೆ ನೀವು ಇನ್ಸ್ಟಾಲ್ ಮಾಡಬೇಡಿ , ಏಕೆಂದರೆ ಈ ಅಪ್ಲಿಕೇಶನ್ ನಿಮ್ಮ ಮೊಬೈಲ್ ನಲ್ಲಿ ಅನೇಕ ರೀತಿಯ ಅನುಮತಿಗಳನ್ನು ಕೇಳುತ್ತದೆ ಮತ್ತು ನಂತರ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಕಾಲಿ ಆಗಬಹುದು . ಆದ್ದರಿಂದ, ಕ್ಯಾಶ್ ಮತ್ತು ಜಂಕ್ ಫೈಲ್ ಗಳನ್ನು ಮೊಬೈಲ್ ನಲ್ಲಿ ಈಗಾಗಲೇ ಇರುವ ವ್ಯವಸ್ಥೆಯ ಮೂಲಕ ಮಾತ್ರ ತೆರವುಗೊಳಿಸಬಹುದು.

ಥರ್ಡ್ ಪಾರ್ಟಿ ಲಿಂಕ್ ಅಪ್ಲಿಕೇಷನ್:
ಥರ್ಡ್ ಪಾರ್ಟಿ ಲಿಂಕ್ ಅಥವಾ ಪ್ಲೇ ಸ್ಟೋರ್ ಮೂಲಕ ಜನರು ತಮ್ಮ ಸ್ಮಾರ್ಟ್ಫೋನ್ನಲ್ಲಿ ಉಚಿತ ಆಂಟಿ-ವೈರಸ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡುವುದನ್ನು ಸಾಮಾನ್ಯವಾಗಿ ಕಾಣಬಹುದು. ಇದನ್ನು ಮಾಡುವುದನ್ನು ತಪ್ಪಿಸಿ, ಏಕೆಂದರೆ ಸ್ಮಾರ್ಟ್ಫೋನ್ನಲ್ಲಿ ಅಂತಹ ಅಪ್ಲಿಕೇಶನ್ ಅನ್ನು ಸ್ಥಾಪಿಸುವ ಮೂಲಕ, ಅದು ನಿಮ್ಮ ಡೇಟಾವನ್ನು ಕದಿಯಬಹುದು.

ಕೀಬೋರ್ಡ್ ಅಪ್ಲಿಕೇಷನ್:
ನಿಮ್ಮ ಸ್ಮಾರ್ಟ್ಫೋನ್ನಲ್ಲಿ ನೀವು ಪ್ರತ್ಯೇಕ ಕೀಬೋರ್ಡ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡುತ್ತಿದ್ದರೆ, ಅವುಗಳನ್ನು ಡಿಲೀಟ್ ಮಾಡಿಬಿಡಿ.ಏಕೆಂದರೆ,ಈ ಅಪ್ಲಿಕೇಶನ್ ಗಳು ಟೈಪ್ ಮಾಡುವಾಗ ನಿಮ್ಮ ಪಾಸ್ ವರ್ಡ್ ಗಳನ್ನು ಕದಿಯಬಹುದು. ಆದ್ದರಿಂದ ನೀವು ಈ ಅಪ್ಲಿಕೇಶನ್ಗಳನ್ನು ಬಳಸಿದರೆ, ನೀವು ಅವುಗಳನ್ನು ತಕ್ಷಣ ತೆಗೆದುಹಾಕಬಹುದು. ಮೊಬೈಲ್ ನಲ್ಲಿ ಈಗಾಗಲೇ ಸ್ಥಾಪಿತವಾಗಿರುವ ಕೀಬೋರ್ಡ್ ಬಳಸಿ.

ಫ್ಲಾಶ್ ಲೈಟ್ ಅಪ್ಲಿಕೇಷನ್:
ಸ್ಮಾರ್ಟ್ಫೋನ್ಗಳು ಈಗಾಗಲೇ ಫ್ಲ್ಯಾಶ್ ಲೈಟ್ ಅನ್ನು ಹೊಂದಿವೆ, ಇದರ ಹೊರತಾಗಿಯೂ, ಜನರು ತಮ್ಮ ಸ್ಮಾರ್ಟ್ಫೋನ್ಗಳಲ್ಲಿ ಪ್ರತ್ಯೇಕ ಫ್ಲ್ಯಾಶ್ ಲೈಟ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡುತ್ತಾರೆ. ಇದನ್ನು ಮಾಡುವುದನ್ನು ತಪ್ಪಿಸಿ ಏಕೆಂದರೆ ಅಂತಹ ಅಪ್ಲಿಕೇಶನ್ ಗಳು ನಿಮ್ಮ ವೈಯಕ್ತಿಕ ಡೇಟಾವನ್ನು ಕದಿಯಬಹುದು ಮತ್ತು ಅದನ್ನು ದುರುಪಯೋಗಪಡಿಸಿಕೊಳ್ಳಬಹುದು ಮತ್ತು ನಿಮ್ಮನ್ನು ಮೋಸಗೊಳಿಸಬಹುದು.

ಇದನ್ನೂ ಓದಿ :ಬೆಳ್ತಂಗಡಿಯ ಸೌಜನ್ಯ ಹೋರಾಟಕ್ಕೆ ಆದ ಖರ್ಚು ಎಷ್ಟು ಕೋಟಿ ಗೊತ್ತಾ ?!ಅಬ್ಬಬ್ಬಾ.. ಕೇಳಿದ್ರೆ ನೀವೇ ಶಾಕ್ ಆಗ್ತೀರಾ- ಇಲ್ಲಿದೆ ನೋಡಿ ಪಕ್ಕಾ ಲೆಕ್ಕ

Leave A Reply

Your email address will not be published.