Sowjanya Case: ಬೆಳ್ತಂಗಡಿ ಸೌಜನ್ಯ ಹೋರಾಟ! ಒಟ್ಟು 465 ಹತ್ಯೆಯಲ್ಲಿ ಶೇ.90 ಜನ ಮಹಿಳೆಯರು, ನಾವು ಯಾವ ದೇಶದಲ್ಲಿ ಇದ್ದೇವೆ? – ಒಡನಾಡಿ ಸಂಸ್ಥೆ ಮುಖ್ಯಸ್ಥರಿಂದ ಪ್ರಶ್ನೆ!!!

Belthangady News Dharmasthala Sowjanya murder and rape case protest at Belthangady odanadi trust parashuram speech live update

Sowjanya Case: ಧರ್ಮಸ್ಥಳದ (dharmastala) ಯುವತಿ ಸೌಜನ್ಯಳ ಅತ್ಯಾಚಾರ & ಕೊಲೆ ಪ್ರಕರಣ (Sowjanya Case) ಇದೀಗ ಭಾರೀ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ‌. ದೇಶದ ಮೂಲೆ ಮೂಲೆಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅಂತೆಯೇ ಇಂದು ಬೆಳ್ತಂಗಡಿ ತಾಲೂಕಿನಲ್ಲಿ ಸೌಜನ್ಯ ಪ್ರಕರಣದ ನ್ಯಾಯಕ್ಕಾಗಿ ಪ್ರತಿಭಟನೆ ನಡೆಯುತ್ತಿದೆ. ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಬಿಸಿಲನ್ನೂ ಲೆಕ್ಕಿಸದೆ ಘೋಷ ವಾಕ್ಯಗಳು ಮೊಳಗುತ್ತಿದೆ.

ಬೆಳ್ತಂಗಡಿಯಲ್ಲಿ (belthangady) ಸೌಜನ್ಯ ಪರ ಧ್ವನಿ ಎತ್ತಲು ಇಡೀ ಕರಾವಳಿಯ ಜನರೇ ಸೇರಿದ್ದಾರೆ. ವೇದಿಕೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಶ್ರೀ ರಾಮ ಸೇನೆಯ ಪ್ರಮೋದ್ ಮುತಾಲಿಕ್, ಒಡನಾಡಿ ಸಂಸ್ಥೆ ಮುಖ್ಯಸ್ಥರು ಮುಂತಾದವರು ಇದ್ದಾರೆ. ಆದಿಚುಂಚನಗಿರಿಯ ಕಾವೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮಿ ಆಶೀರ್ವದಿಸಿದ್ದಾರೆ.

ಎಲ್ಲರೂ ಸೌಜನ್ಯ ಪರ ಧ್ವನಿ ಎತ್ತಿದ್ದು, ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಒಡನಾಡಿ ಪರಶುರಾಮರು,
ಸೌಜನ್ಯ ಕೊಲೆಯಾದ ನಂತರ ಈವರೆಗೆ ಒಟ್ಟು 464 ಒಟ್ಟು ಹತ್ಯೆ ನಡೆದಿದೆ. ಈ ಪೈಕಿ 90 ಪರ್ಸೆಂಟ್ ಜನ ಮಹಿಳೆಯರೇ ಆಗಿದ್ದಾರೆ. ಹಾಗೂ 49 ಜನ ಪೋಷಕರೇ ಸಿಕ್ಕಿಲ್ಲ. ಹತ್ಯೆಯಾದವರ ಕುಟುಂಬದವರು ಯಾರೆಂದೇ ತಿಳಿದಿಲ್ಲ. ಅರ್ಥ ಮಾಡಿಕೊಳ್ಳಿ, ಎಲ್ಲಿದ್ದೇವೆ ನಾವು. ಇದು ಯಾವ ದೇಶ ಇದು ಯಾವ ನ್ಯಾಯ ? ಎಂದು ಆಕ್ರೋಶ ವ್ಯಕ್ತಪಡಿಸಿದರು. 49 ಜನರಿಗೆ ಪೋಷಕರೇ ಇಲ್ಲ. ಈ ಅನಾಥ ಜನರಿಗೆ ನಾವೇ ತಂದೆ ತಾಯಿ ಆಗಬೇಕಿದೆ. ಈ ಜನರಿಗೆ ಆದ ಅನ್ಯಾಯ ನಾಳೆ ನನ್ನ ನಿಮ್ಮ ಮನೆಗೆ ಆಗಬಹುದು. ದಂಗೆ ಏಳಲು ಬಿಡಬೇಡಿ ಎಂದು ಒಡನಾಡಿ ಪರಶುರಾಮ ಹೇಳಿದರು.

ಸೌಜನ್ಯ ಪ್ರಕರಣದ ನ್ಯಾಯಕ್ಕಾಗಿ ಹೋರಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ನಿದ್ದೇನೆ ಮಾಡಲ್ಲ. ನಿದ್ದೆ ಮಾಡಲು ಸಮಯ ಸಿಗೋದೇ ಇಲ್ಲ. ಸೌಜನ್ಯ ನನ್ನ ಮಗಳು ಅಂತ ತಿಮರೋಡಿ ಹೋರಾಟ ಮಾಡ್ತಿದ್ದಾರೆ. ಎಲ್ಲರ ಎದೆಯಲ್ಲೂ ಅತ್ಯಾಚಾರಿ ಯಾರು ಅಂತ ಎಲ್ಲರಿಗೂ ಗೊತ್ತು. ಇವತ್ತು ಎಲ್ಲರಿಗೂ ಗೊತ್ತಾಗಿದೆ ಸತ್ಯ. ಅಣ್ಣಪ್ಪ ಸ್ವಾಮಿ ಮತ್ತು ಮಂಜುನಾಥ ಎಲ್ಲರಿಗೂ ಪ್ರೇರಣೆ ಆಗಿದೆ ಎಂದರು. ಸಿಬಿಐ – ಚೋರ್ ಬಚಾವ್ ಇನ್ಸ್ಟಿ ಟ್ಯೂಷನ್ – ಓಯ್, ಯಾಕೆ ಮೋಸ ಮಾಡಿದ್ರಿ, ಆ ಸಂತೋಷ ರಾವ್ ಗೆ ಯಾಕೆ ಮೋಸ ಮಾಡಿದ್ರಿ ? ಎಂದು ಖಾರವಾಗಿ ಕೇಳಿದ್ದಾರೆ.

ಇದನ್ನೂ ಓದಿ: ಸೌಜನ್ಯಳ ದುಷ್ಕೃತ್ಯದ ಫೋಟೊ ಅನ್ನು ಅಮಿತ್ ಶಾಗೆ ಕಳಿಸಿದ್ದೇವೆ, ಧರ್ಮಾಧಿಕಾರಿಗೆ ನಾಚಿಕೆಯಾಗಬೇಕು- ಮಾನವ ಹಕ್ಕುಗಳ ಅಂತಾರಾಷ್ಟ್ರೀಯ ಕಾರ್ಯದರ್ಶಿ ಶ್ರೀಮತಿ ಗೀತಾ ಸ್ಪೋಟಕ ನುಡಿ

Leave A Reply

Your email address will not be published.