Dharmasthala sowjanya case: ಮಹೇಶ್ ಶೆಟ್ಟಿ ತಿಮರೋಡಿ ಹೋರಾಟಕ್ಕೆ ಬಿಜೆಪಿ ಬೆಂಬಲ ಕುಸುಮಾವತಿ – ಪ್ರಧಾನಿ ಮೋದಿ ಭೇಟಿ ಬಗ್ಗೆ ಬಿಗ್ ಸ್ಟೇಟ್ಮೆಂಟ್ ಕೊಟ್ಟ ಕಟೀಲ್ – ಸುನಿಲ್ ಕುಮಾರ್

Dharmasthala sowjanya case Support of everyone including Mahesh Shetty We are in favor of the family V Sunil Kumar

Dharmasthala sowjanya case : ಕುಮಾರಿ ಸೌಜನ್ಯ ಪ್ರಕರಣದ (Dharmasthala sowjanya case) ಮರು ತನಿಖೆಗೆ ಆಗ್ರಹಿಸಿ ಆಗಸ್ಟ್‌ 27ರಂದು ಭಾನುವಾರ ಬೆಳಗ್ಗೆ ಹತ್ತು ಗಂಟೆಗೆ ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ಸಂಸದ ನಳಿನ್‌ ಕುಮಾರ್ ಕಟೀಲ್‌ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಶಾಸಕರಿಂದ ಬೃಹತ್‌ ಪ್ರತಿಭಟನೆ ಯಲ್ಲಿ ಸುನಿಲ್‌ ಕುಮಾರ್‌ ಅವರು ಮಾತುಗಳನ್ನಾಡಿದ್ದಾರೆ.

ಮಹೇಶ್‌ ಶೆಟ್ಟಿ ತಿಮರೋಡಿ ಸೇರಿ ಎಲ್ಲರೂ ನಡೆಸುವ ಸಂಘಗಳ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಅವರು ಆಶ್ವಾಸನೆ ನೀಡಿದ್ದಾರೆ. ಹಾಗೆನೇ ಮೋದಿಯನ್ನು ಭೇಟಿ ಮಾಡಿಸಲು ಸಿದ್ಧ, ಸೌಜನ್ಯ ಕುಟುಂಬದ ಪರವಾಗಿ ನಾವಿದ್ದೇವೆ. ಎರಡು ಜಿಲ್ಲೆಗಳ ಶಾಸಕರು ಸೇರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತೇವೆ. ಹಾಗೆನೇ ಅವರು ವಸಂತ ಬಂಗೇರ ಅವರಲ್ಲಿ ಪ್ರಶ್ನೆ ಮಾಡಿದ್ದು, ಕೊಲೆ ಆರೋಪಿಗಳು ನಿಮಗೆ ಗೊತ್ತಿದ್ದರೂ ಯಾಕೆ ಮುಚ್ಚಿಟ್ಟಿದ್ದೀರಿ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಹಾಗೆನೇ ಆರೋಪದ ನೆಪದಲ್ಲಿ ಧಾರ್ಮಿಕ ಶ್ರದ್ಧೆ ಅವಹೇಳನ ಎಷ್ಟು ಸರಿ. ಸೌಜನ್ಯ ಹೆಸರಲ್ಲಿ ಯಾಕೆ ಮಾಡಬೇಕು? ಎಂಬ ಪ್ರಶ್ನೆಯನ್ನು ಸುನಿಲ್‌ ಕುಮಾರ್ ಕೇಳಿದ್ದಾರೆ.

ನಳಿನ್‌ ಕುಮಾರ್‌ ಕಟೀಲ್‌ ಅವರು ಮಾತನಾಡುತ್ತಾ, ನ್ಯಾಯಾಲಯದಲ್ಲಿ ಇನ್ನಷ್ಟು ಅವಕಾಶ ಇದೆ. ಅಹವಾಲು ನೀಡಿದರೆ ಮರು ತನಿಖೆಗೆ ಅವಕಾಶ ಇದೆ. ಸಂವಿಧಾನದ ಪ್ರಕಾರ ಸಿಬಿಐ ನಲ್ಲಿ ಕೇಸು ಬಿಟ್ಟು ಹೋದ ಕಾರಣ ಮತ್ತೆ ತನಿಖೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಬೇಕು. ನಾವು ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಭೇಟಿ ಮಾಡುತ್ತೇವೆ ಎಂಬ ಭರವಸೆಯ ಮಾತನ್ನು ಹೇಳಿದ್ದಾರೆ.

ಇದನ್ನೂ ಓದಿ: ಡಾ.ಹೆಗ್ಗಡೆ ಅವರ ರಾಜ್ಯಸಭಾ ಸದಸ್ಯತ್ವದಿಂದ ಕೆಳಗಿಳಿಸಿ!ನನ್ನನ್ನು ಮೋದಿಯವರ ಬಳಿಗೆ ಕರೆದುಕೊಂಡು ಹೋಗಿ -ಸೌಜನ್ಯ ತಾಯಿ ಮನವಿ

Leave A Reply

Your email address will not be published.