IAS Interesting Question: ಯಾವ ಊರಿನಲ್ಲಿ ದಿನ ಮತ್ತು ವರ್ಷಗಳು ಒಂದೇ ಆಗಿರುತ್ತವೆ ?
IAS interview intresting questions and answers In which city are the days and years are same
IAS Interesting Question: ಇದೀಗ ಚಂದ್ರಯಾನ 3 (Chandrayana 3) ಪ್ರಯಾಣ ನಡೆಯುತ್ತಿದೆ. ಚಂದ್ರಯಾನ 3 ರ ಯಶಸ್ವಿ ಲ್ಯಾಂಡಿಂಗ್ ಇವತ್ತು ಆಗಸ್ಟ್ 23 ರ ಸಂಜೆ 6.04 ಗಂಟೆಯ ಸುಮಾರಿಗೆ ನಡೆಯಲಿದೆ. ಈ ಪ್ರಯುಕ್ತ ಇವತ್ತು ಐಎಎಸ್ ಪರೀಕ್ಷೆಗಳಲ್ಲಿ ಕೇಳಬಹುದಾದ ಮತ್ತು ತುಂಬಾ ಆಸಕ್ತಿಕರವಾದ ಪ್ರಶ್ನೋತ್ತರವನ್ನು( IAS Interesting Question) ನಿಮ್ಮ ಮುಂದೆ ನೀಡುತ್ತಿದ್ದೇವೆ.
ನಾವು ವಾಸಿಸುತ್ತಿರುವ ಈ ಭೂಮಿಯಲ್ಲಿ ಒಂದು ದಿನ ಅಂದರೆ 24 ಗಂಟೆಗಳು. ಒಂದು ವರ್ಷಕ್ಕೆ 365 ದಿನಗಳಿವೆ. ಇದು ಚಿಕ್ಕಮಕ್ಕಳಿಗೂ ತಿಳಿದಿರುವ ವಿಚಾರ. ಭೂಮಿ ತನ್ನ ಸುತ್ತಲೂ ತಾನೇ ಸುತ್ತಿಕೊಳ್ಳಲು (ಕ್ರಿಕೆಟ್ ಬಾಲ್ ಸ್ಪಿನ್ ಆಗುವ ಥರ) ತೆಗೆದುಕೊಳ್ಳುವ ಸಮಯ 24 ಗಂಟೆ. ಅದಕ್ಕೆ ನಾವು ಒಂದು ದಿನ ಅನ್ನುತ್ತೇವೆ. ಅದುವೇ ಭೂ ನಮ್ಮ ಭೂಮಿಯು ಸೂರ್ಯನ ಸುತ್ತ ಒಂದು ಸುತ್ತು ಬರಲು ತೆಗೆದುಕೊಳ್ಳುವ ಸಮಯ 365 ದಿನಗಳು. ನಮ್ಮ ಪಾಲಿಗೆ ಸೂರ್ಯನು ಒಂದು ನಕ್ಷತ್ರ ಮತ್ತು ನಾವು ಒಂದು ಗ್ರಹ.
ಆದರೆ ಇವತ್ತು ಚಂದ್ರಯಾನ ಮೂರು ಲ್ಯಾಂಡಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಚಂದ್ರನ ಬಗ್ಗೆ ಒಂದಷ್ಟು ಆಸಕ್ತಿಕರ ವಿಷಯಗಳನ್ನು ಹಂಚಿಕೊಳ್ಳೋಣ. ಭೂಮಿಯು ಒಂದು ಗ್ರಹ ( Planet ) ಹೆಚ್ಚಿನವರು ಚಂದ್ರನು ಒಂದು ಗ್ರಹ ಅಂದುಕೊಂಡಿರಬಹುದು. ಅದು ತಪ್ಪು, ಚಂದ್ರನು ಒಂದು ಗ್ರಹವಲ್ಲ, ಚಂದ್ರನು ಭೂಮಿಯ ಒಂದು ಉಪಗ್ರಹ. ಮಂಗಳನಾಗಲೀ, ಭೂಮಿಯಾಗಲೀ ಅಥವಾ ಇತರ ಗ್ರಹ, ಉಪಗ್ರಹ, ನಕ್ಷತ್ರಗಳಾಗಲೀ, ಸುಮ್ಮನೆ ಒಂದು ಕಡೆ ನಿಂತಿಲ್ಲ. ಅವುಗಳು ನಿರಂತರವಾಗಿ ಪರಿಭ್ರಮಣೆ ನಡೆಸುತ್ತಲೇ ಇವೆ. ಹಾಗೆಯೇ ಚಂದ್ರನು ಕೂಡಾ ನಿರಂತರ ಸುತ್ತುವಿಕೆಯಲ್ಲಿ ಭಾಗಿಯಾಗಿದ್ದಾನೆ.
ಚಂದ್ರನಲ್ಲಿ ಒಂದು ದಿನ ಅಂದ್ರೆ ಬರೋಬ್ಬರಿ 27 ದಿನಗಳು:
ಚಂದ್ರನು ತನ್ನ ಸುತ್ತ ತಾನು ಸುತ್ತಲು 27 ದಿನಗಳನ್ನು ತೆಗೆದುಕೊಳ್ಳುತ್ತಾನೆ. ಆದುದರಿಂದ ಚಂದ್ರನಲ್ಲಿ ಒಂದು ದಿನ ಅಂದರೆ (ಒಂದು ರಾತ್ರಿ ಮತ್ತು ಒಂದು ಹಗಲು) ಒಟ್ಟು ಸೇರಿ 27 ದಿನಗಳಾಗುತ್ತವೆ. ಅಂದರೆ 13.5 ದಿನ ಅಲ್ಲಿ ಬೆಳಿಗ್ಗೆ. ನಂತರ 13.5 ದಿನ ಅಲ್ಲಿ ನಿರಂತರ ರಾತ್ರಿ. ಬೆಳಗ್ಗೆ ಮತ್ತು ರಾತ್ರಿ ಸೇರಿದರೆ ಅದು ಒಂದು ದಿನ ಅಂತ ಲೆಕ್ಕ. ಅಲ್ಲಿ ಬೆಳಗಿನ ಹೊತ್ತು ನಿರಂತರವಾಗಿ ಬಿಸಿಲು ಕಾಯುತ್ತದೆ. ನೀರಿನ ಕುದಿಯುವ ಬಿಂದು 100 ಡಿಗ್ರಿ ಸೆಂಟಿಗ್ರೇಡ್ ಆಗಿದ್ದರೆ, ಬೆಳಗಿನ ಹೊತ್ತು ಅಲ್ಲಿಯ ಉಷ್ಣಾಂಶ 120 ಡಿಗ್ರಿ ಸೆಂಟಿಗ್ರೇಡ್ ರಷ್ಟು ಏರುತ್ತದೆ. ನಂತರ 13.5 ದಿನ ನಿರಂತರ ರಾತ್ರಿಗಳು ಇರುವ ಕಾರಣ ಸೂರ್ಯನ ಬೆಳಕು ಬೀಳದೆ ಕೊರೆಯುವ ಚಳಿ ಉಂಟಾಗುತ್ತದೆ. ಚಂದ್ರನ ರಾತ್ರಿಯ ತಾಪಮಾನವು ತೀರಾ ಚಳಿಯದಾಗಿದ್ದು ಸಾಮಾನ್ಯವಾಗಿ -130° C ಸೆಂಟಿಗ್ರೇಡ್ ಗೆ ತಲುಪುತ್ತದೆ. ಸೂರ್ಯನಿಲ್ಲದ ಚಂದ್ರನ ಕತ್ತಲ ಭಾಗದಲ್ಲಿ, ತಾಪಮಾನವು -232 ಡಿಗ್ರಿ ಸೆಲ್ಸಿಯಸ್ ನಷ್ಟಿರಬಹುದು ಎಂದರೆ ಊಹಿಸಿ, ಚಂದ್ರ ಎಷ್ಟು ಉಷ್ಣಾಂಶ ವೈಪರಿತ್ಯಗಳ ಉಪಗ್ರಹ ಎಂದು !
ಚಂದ್ರನಲ್ಲಿ ವರ್ಷಕ್ಕೆ ಕೂಡಾ 27 ದಿನಗಳು ಅಂದ್ರೆ ನಂಬಲೇ ಬೇಕು !!
ಇನ್ನು, ವರ್ಷದ ಲೆಕ್ಕಕ್ಕೆ ಬರೋಣ. ಭೂಮಿಯಲ್ಲಿ ಒಂದು ವರ್ಷ ಅಂದರೆ 365 ದಿನಗಳು. ಅಂದರೆ ಭೂಮಿಯು ತನ್ನ ನಕ್ಷತ್ರವಾದ ಸೂರ್ಯನಿಗೆ ಸುತ್ತಲು ತೆಗೆದುಕೊಳ್ಳುವ ಸಮಯವದು. ಆದರೆ ಚಂದ್ರನಲ್ಲಿ ದಿನ ಮತ್ತು ವರ್ಷ ಒಂದೇ ಅನ್ನೋದು ಸೋಜಿಗದ ಸಂಗತಿ. ಹೌದು ಭೂಮಿಯ ಉಪಗ್ರಹವಾದ ಚಂದ್ರನು ಭೂಮಿಯ ಸುತ್ತ ಸುತ್ತಲೂ ಕೇವಲ 27 ದಿನಗಳನ್ನು ತೆಗೆದುಕೊಳ್ಳುತ್ತಾನೆ. ಅಂದರೆ ಚಂದ್ರನಲ್ಲಿ ಒಂದು ವರ್ಷ ಅಂದರೆ 27 ದಿನಗಳು. ಚಂದ್ರನಲ್ಲಿ ವರ್ಷವೂ ದಿನವೂ ಕೇವಲ 27 ಆಗಿದ್ದು ವರ್ಷ ದಿನ ಎರಡು ಒಂದೇ ಆಗಿರುವುದು ಅತ್ಯಂತ ಅಪರೂಪ ಮತ್ತು ವಿಶೇಷ. ಚಂದ್ರಮಾವನ ಬಗೆಗಿನ ಮತ್ತಷ್ಟು ಆಸಕ್ತಿಕರ ವಿಷಯಗಳೊಂದಿಗೆ ಮತ್ತೆ ಬರುತ್ತೇವೆ. ನಿರಂತರವಾಗಿ ಹೊಸ ಕನ್ನಡ ಡಾಟ್ ಕಾಮ್ ಓದುತ್ತಾ ಇರಿ, ನಿಮ್ಮ ಗೆಳೆಯರಿಗೂ ಸಜೆಸ್ಟ್ ಮಾಡಿ.