Tata Group Corporation: ಟಾಟಾ ಸಮೂಹ ಸಂಸ್ಥೆಯ 23.6 ಟ್ರಿಲಿಯನ್ ಆಸ್ತಿಗೆ ಉತ್ತರಾಧಿಕಾರಿ ಆದಾಕೆ ಓರ್ವ ಯುವತಿ, ಯಾರೀಕೆ ಗೊತ್ತೇ ?

Business news Tata group to pass responsibilities to the next generation of Tatas deets here

Tata Group Corporation: ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ (Ratan Tata) ಅವರು ಭಾರತ ಕಂಡಂತಹ ಶ್ರೇಷ್ಠ ಹಾಗೂ ಧೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಸಾಕಷ್ಟು ವರ್ಷಗಳಿಂದ ಟಾಟಾ ಸಮೂಹ ಸಂಸ್ಥೆಗಳ (Tata Groups) ಚುಕ್ಕಾಣಿ ಹಿಡಿದಿರುವ ರತನ್ ಟಾಟಾ ಅವರಿಗೆ ಈಗಾಗಲೇ ಸಾಕಷ್ಟು ವಯಸ್ಸಾಗಿದೆ. ಹೀಗಾಗಿ ಟಾಟಾ ಸಮೂಹ ಸಂಸ್ಥೆಗಳ ಮುಂದಿನ ಉತ್ತರಾಧಿಕಾರಿ ಶೀಘ್ರದಲ್ಲೇ ನೇಮಕಗೊಳ್ಳಲಿದ್ದಾರೆ. ಯಾರಾಗಲಿದ್ದಾರೆ ಟಾಟಾ ಸಮೂಹಕ್ಕೆ ಉತ್ತರಾಧಿಕಾರಿ ??

1868 ರಲ್ಲಿ ಜಮ್ಸೆಟ್ಜಿ ಟಾಟಾ ಸ್ಥಾಪಿಸಿದ, ಟಾಟಾ ಸಮೂಹವು (Tata Group Corporation) ಜಾಗತಿಕ ಉದ್ಯಮವಾಗಿದ್ದು, ಭಾರತದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. ಟಾಟಾ ಸುಮಾರು 30 ಕಂಪನಿಗಳನ್ನು ಒಳಗೊಂಡಿದೆ. 2021-22 ರಲ್ಲಿ, ಟಾಟಾ ಕಂಪನಿಗಳ ಆದಾಯವು ಒಟ್ಟಾಗಿ $128 ಶತಕೋಟಿ ಅಂದ್ರೆ INR 9.6 ಟ್ರಿಲಿಯನ್ ಆಗಿತ್ತು. ಈ ಕಂಪನಿಗಳು 935,000 ಜನರನ್ನು ನೇಮಿಸಿಕೊಂಡಿವೆ. ಸದ್ಯ ರತನ್ ಟಾಟಾ ನಿವ್ವಳ ಮೌಲ್ಯ (Ratan tata networth) 23.6 ಟ್ರಿಲಿಯನ್ ಆಗಿದೆ.

ಟಾಟಾ ಸಮೂಹ ಸಂಸ್ಥೆಯ 23.6 ಟ್ರಿಲಿಯನ್ ಆಸ್ತಿಗೆ ಉತ್ತರಾಧಿಕಾರಿ ಆದಾಕೆ ಓರ್ವ ಯುವತಿ, ಯಾರೀಕೆ ಗೊತ್ತೇ ?
ವರದಿ ಪ್ರಕಾರ, ಟಾಟಾ ಸಮೂಹದ (Tata Group) ಮುಖ್ಯಸ್ಥ ಹಾಗೂ ಉದ್ಯಮಿಯಾಗಿದ್ದ ರತನ್ ಟಾಟಾ (Ratan Tata) ಅವರ ಉತ್ತರಾಧಿಕಾರಿಯಾಗಿ (successor) 34 ವರ್ಷದ ಮಾಯಾ ಟಾಟಾ (Maya tata) ನೇಮಕಗೊಳ್ಳಲಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಯಾರೀಕೆ ? ಮಾಯಾ ಅವರ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ

Tata Group Corporation
Image credit: Bollywood shadis

 

ಮಾಯಾ ರತನ್ ಟಾಟಾ ಅವರ ಮಲಸಹೋದರ ನೋಯೆಲ್ ಟಾಟಾ ಅವರ ಮೂವರು ಮಕ್ಕಳಲ್ಲಿ ಕೊನೆಯವರು. ಮಾಯಾ ಇಂಗ್ಲೆಂಡ್ ನ ಬಯೆಸ್ ಬ್ಯುಸಿನೆಸ್ ಸ್ಕೂಲ್ ಹಾಗೂ ಯೂನಿವರ್ಸಿಟಿ ಆಫ್ ವಾರ್ ವಿಕ್ ನಿಂದ ಶಿಕ್ಷಣ ಪಡೆದಿದ್ದಾರೆ. ಈಕೆ ತಾಯಿ ಹೆಸರು ಅಲೋ ಮಿಸ್ತ್ರಿ, ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಸಹೋದರಿ ಮತ್ತು ದಿವಂಗತ ಬಿಲಿಯನೇರ್ ಪಲ್ಲೊಂಜಿ ಮಿಸ್ತ್ರಿ ಅವರ ಮಗಳು ಆಗಿದ್ದಾರೆ.

ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳದ ಮಾಯಾ ಟಾಟಾ ಅವರು ಟಾಟಾ ಮೆಡಿಕಲ್ ಸೆಂಟರ್ ಟ್ರಸ್ಟ್‌ನ ಆಡಳಿತ ಮಂಡಳಿಯಲ್ಲಿ ಇತ್ತೀಚೆಗೆ ಸ್ಥಾನ ಪಡೆದಿದ್ದಾರೆ. ಮಾಯಾ ಅವರು ಟಾಟಾ ಗ್ರೂಪ್‌ನೊಂದಿಗೆ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಮಾಯಾ ಟಾಟಾ ತನ್ನ ವೃತ್ತಿಜೀವನವನ್ನು ಟಾಟಾ ಆಪರ್ಚುನಿಟೀಸ್ ಫಂಡ್‌ನೊಂದಿಗೆ ಪ್ರಾರಂಭಿಸಿದರು. ಇದು ಟಾಟಾ ಗ್ರೂಪ್‌ನ ಅತ್ಯಂತ ಹಳೆಯ ಖಾಸಗಿ ಇಕ್ವಿಟಿ ನಿಧಿಯಾಗಿದೆ. ಟಾಟಾ ಆಪರ್ಚುನಿಟೀಸ್ ಫಂಡ್ ಮುಚ್ಚುವವರೆಗೂ ಮಾಯಾ ಬಂಡವಾಳ ನಿರ್ವಹಣೆ ಮತ್ತು ಹೂಡಿಕೆದಾರರ ಸಂಬಂಧಗಳನ್ನು ನಿರ್ವಹಿಸುತ್ತಿದ್ದರು. ಅದರ ಮುಚ್ಚುವಿಕೆಯ ನಂತರ, ಮಾಯಾ ಟಾಟಾ ಅವರು ಟಾಟಾ ಡಿಜಿಟಲ್‌ಗೆ ತೆರಳಿದರು. ಏಕೆಂದರೆ ಅವರ ತಂದೆ ನೋಯೆಲ್ ಟಾಟಾ ಅವರು ಗುಂಪಿನಲ್ಲಿ ಉಳಿಯಲು ಉತ್ಸುಕರಾಗಿದ್ದರು.

ಆ.29ರಂದು ಟಾಟಾ ಸಮೂಹದ ವಾರ್ಷಿಕ ಮಹಾಸಭೆ ನಡೆಯಲಿದ್ದು, ಈ ವೇಳೆ ಟಾಟಾ ಸಮೂಹದ ಉತ್ತರಾಧಿಕಾರಿಯ ಬಗ್ಗೆ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಒಟ್ಟಾರೆ ರತನ್ ಟಾಟಾ ಅವರ ಗರಡಿಯಲ್ಲಿ ಬೆಳೆಯುತ್ತಿರುವ ಮಾಯಾ ಟಾಟಾ ಸಮೂಹದ ಉತ್ತರಾಧಿಕಾರಿ ಎಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಸತ್ಯ ಮಾಹಿತಿ ಹೊರಬರಬೇಕಷ್ಟೇ!!!

ಇದನ್ನೂ ಓದಿ: Actress Nithya Menen Marriage: ಬಟ್ಟಲು ಕಂಗಳ ಚೆಲುವೆ ನಟಿ ನಿತ್ಯಾ ಮೆನನ್‌ ಮದುವೆ ಫಿಕ್ಸ್‌!!!

Leave A Reply

Your email address will not be published.