IAS Intresting Question: ಅದು ಕೆಳಗೆ ಬಂದಾಗ ಇನ್ನೊಂದು ಮೇಲೆ ಹೋಗುತ್ತದೆ ? ನಾಚಿಕೆ ಪಡದೆ ಉತ್ತರಿಸಿ ಎಂದ ಈ ಪ್ರಶ್ನೆಗೆ IAS ಹುಡ್ಗಿ ಕೊಟ್ಳು ಮುಟ್ಟಿ ನೋಡ್ಕೊಳ್ಳೋ ಉತ್ತರ !

IAS intresting questions IAS interview intresting questions and answers

IAS Intresting Question: IAS ಪರೀಕ್ಷಾರ್ಥಿಯಾಗಿ ಹೋಗಿರುವ ವಿದ್ಯಾರ್ಥಿಗೆ ಕೊನೆಯ ಹಂತದ ವೈವಾ ಅಂದರೆ ಭೌತಿಕ ಸಂದರ್ಶನದ ಸಂದರ್ಭ ಯಾವುದೇ ಪ್ರಶ್ನೆಯನ್ನು ಕೂಡ ಕೇಳಬಹುದು. ಅಭ್ಯರ್ಥಿ ಅದಕ್ಕೆ ತಕ್ಕದಾಗ, ತಕ್ಕಬದ್ದವಾದ ಉತ್ತರವನ್ನು ಹೇಳಿ ತನ್ನ ಕೆಲಸವನ್ನು ಭದ್ರಪಡಿಸಿಕೊಳ್ಳುವ ಅವಶ್ಯಕತೆ ಇರುತ್ತದೆ. ಸಂದರ್ಶನದಲ್ಲಿ ಪ್ಯಾನಲ್ ಇಂಟರ್ವ್ಯೂ ಎಂದು ಕರೆಯಲ್ಪಡುವ ಈ ಇಂಟರ್ವ್ಯೂ ನಲ್ಲಿ ಹಲವು ಮಂದಿ ಇದ್ದು, ಆ ವ್ಯಕ್ತಿಗಳು ಹಿರಿಯರಾಗಿದ್ದು ಎಲ್ಲಾ ವಿಷಯ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಪರಿಣಿತರಾಗಿರುತ್ತಾರೆ. ಅಲ್ಲದೆ ಅಸಾಮಾನ್ಯ ಜ್ಞಾನವನ್ನು ಮತ್ತು ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ. ಅಂತಹ ವ್ಯಕ್ತಿಗಳು ಯಾವ ಪ್ರಶ್ನೆಯನ್ನು ಬೇಕಾದರೂ ಕೇಳಬಹುದು. ಎಷ್ಟೋ ಸಲ ಅಭ್ಯರ್ಥಿಯನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ಪ್ರಶ್ನೆಯನ್ನು ಕೇಳುವುದು ಕೂಡಾ ಉಂಟು. ಆದರೆ ಅಭ್ಯರ್ಥಿ ತಕ್ಷಣ ಅಥವಾ ಒಂದಷ್ಟು ಯೋಚಿಸಿ ಅವರ ಮನಸ್ಸು ಒಪ್ಪುವಂತಹ ಉತ್ತರವನ್ನು ನೀಡಬೇಕಾಗುತ್ತದೆ. ಅಂತಹ ಕೆಲವು ಪ್ರಶ್ನೋತ್ತರಗಳನ್ನು(IAS Intresting Question) ನಾವಿಲ್ಲಿ ನಿಮಗೆ ನೀಡಲಿದ್ದೇವೆ. ಅವತ್ತು ಮಹಿಳಾ ಅಭ್ಯರ್ಥಿಯ ಇಂಟರ್ವ್ಯೂ ನಡೆಯುತ್ತಿತ್ತು. ಆಕೆಗೆ ಅವರು ಕೇಳಿದ ಪ್ರಶ್ನೆ ಮತ್ತು ಅದಕ್ಕೆ ಸಂದರ್ಶಕರು ಉಂಟು ಮಾಡಿದ ಸನ್ನಿವೇಶ ಮಸ್ತ್ ಆಗಿತ್ತು. ಆ ಹುಡುಗಿ ಕೂಡಾ, ತಾನೇನೂ ಕಮ್ಮಿ ಇಲ್ಲ ಅಂತ ಮುಟ್ಟಿ ನೋಡಿಕೊಳ್ಳುವಂತಹಾ ಜಬರ್ದಸ್ತ್ ಉತ್ತರವನ್ನೇ ನೀಡಿದ್ದಳು.

ಪ್ರಶ್ನೆ 1: ನೀವೀಗ ವಯಸ್ಕರು ಹೌದು ಅಲ್ಲವೋ ? ಉತ್ತರ: ‘ಹೌದು ‘ ಎಂದು ಆಕೆ ಉತ್ತರಿಸುತ್ತಾಳೆ.ಪ್ರಶ್ನೆ 2: ಹಾಗಾದ್ರೆ ಇದಕ್ಕೆ ಉತ್ತರಿಸಿ: ನಾಚಿಕೆ ಪಟ್ಟುಕೊಳ್ಳುವ ಅಗತ್ಯ ಇಲ್ಲ. ಯಾವುದು ಕೆಳಗೆ ಬಂದಾಗ ಇನ್ಯಾವುದು ಮೇಲೆ ಹೋಗುತ್ತದೆ ? ಅಂದರೆ ಒಂದು ಕೆಳಗೆ ಬಂದ ನಂತರ ಇನ್ನೊಂದು ಮೇಲೆ ಹೋಗುತ್ತದೆ. ಏನದು ?
ಸಾಮಾನ್ಯರ ಉತ್ತರ: ಈಗಾಗಲೇ ಸಂದರ್ಶಕರು ನೀವು ವಯಸ್ಕರ ಅಥವಾ ಅಲ್ಲವೇ ಎಂದು ಕೇಳಿದ್ದಾರೆ. ಆದುದರಿಂದ ಇದು ವಯಸ್ಕರಿಗೆ ಸಂಬಂಧಪಟ್ಟ ವಿಷಯ. ಅಂದರೆ ಸೆಕ್ಷುಯಲ್ ಸಂಬಂಧಿಸಿದ ಪ್ರಶ್ನೆ ಇದಾಗಿರುತ್ತದೆ. ಯಾವುದು ಕೆಳಗೆ ಬರೋದು ಎಂದು ನಮ್ಮ ಸಾಮಾನ್ಯ ತಲೆ ಚಿಂತಿಸುತ್ತದೆ. ಯಾವುದು ಮೇಲಕ್ಕೆ ಹೋಗುತ್ತದೆ ಅನ್ನುವುದು ಎಲ್ಲ ವಯಸ್ಕರಿಗೂ ಗೊತ್ತು. ಕೊನೆಗೆ ನಮಗೆ ಫ್ಲ್ಯಾಶ್ ಆಗಿ, ಓ ಬಟ್ಟೆ ಕೆಳಗೆ ಬಂದಾಗ…… ನಾಚಿಕೊಳ್ಳುವ ಸರದಿ ನಮ್ಮದು.

ಆದರೆ ಈ ಪ್ರಶ್ನೆಯನ್ನು ನಮಗೆ ಕೇಳಿಲ್ಲ. ಪ್ರಶ್ನೆಯನ್ನು ಕೇಳಿದ್ದು ಐಎಎಸ್ ಪ್ರಿಲಿಮ್ಸ್ ಮತ್ತು ಮುಖ್ಯ ಪರಿಕ್ಷೆಯನ್ನು ಬರೆದು ಪಾಸಾಗಿರುವ ಬುದ್ದಿವಂತ ಹುಡುಗಿಗೆ. ಹಾಗಾಗಿ ಆಕೆಯ ಉತ್ತರ ನಮ್ಮ ನಿಮ್ಮಂತೆ ಮಾಮೂಲು ಆಗಿರಲು ಸಾಧ್ಯ ಇಲ್ಲ ಅಲ್ವೇ? ಹಾಗಾದ್ರೆ ಆಕೆ ಈ ಪೋಲಿ ಅನ್ನಿಸುವ ಪ್ರಶ್ನೆಗೆ ಯಾವ ಉತ್ತರ ನೀಡಿದಳು ಅಂತ ತಿಳಿದುಕೊಳ್ಳೋಣ.
ಹುಡುಗಿ ಕೊಟ್ಟ ಉತ್ತರ: ಛತ್ರಿ (ಕೊಡೆ). ಮಳೆ ಕೆಳಗೆ ಬಂದಾಗ, ಛತ್ರಿ ಮೇಲೆ ಹೋಗುತ್ತೆ !
ಇನ್ನೂ ಕೆಲವು ಟ್ರಿಕ್ಕಿ ಅನ್ನಿಸುವ ಪ್ರಶ್ನೆಗಳು ಇಲ್ಲಿವೆ.

ಪ್ರಶ್ನೆ 2: ಬುಧವಾರ, ಶುಕ್ರವಾರ ಮತ್ತು ಭಾನುವಾರವನ್ನು ಹೆಸರಿಸದೆ ಮೂರು ನಿರಂತರ ದಿನಗಳನ್ನು ಹೆಸರಿಸಿ.
ಉತ್ತರ: ನಿನ್ನೆ, ಇವತ್ತು ಮತ್ತು ನಾಳೆ (Yesterday, Today and Tomorrow)
ಪ್ರಶ್ನೆ 3: ಇಂಗ್ಲಿಷಿನ ಯಾವ ಅಕ್ಷರ ಅತ್ಯಂತ ಹೆಚ್ಚಿನ ಪದಗಳನ್ನು ಮಾಡಲು ಬಳಸಲಾಗುತ್ತದೆ. ಅಂದರೆ, ಹೆಚ್ಚು ಬಳಕೆಯ ಇಂಗ್ಲಿಷ್ ಅಕ್ಷರ ಯಾವುದು ?
ಉತ್ತರ: ಇ (E)
ಪ್ರಶ್ನೆ 4: Peacock (ಪೀಕಾಕ್ – ನವಿಲು) ವರ್ಷಕ್ಕೆ ಎಷ್ಟು ಮೊಟ್ಟೆ ಇಡಬಲ್ಲುದು ?
a) 1 ರಿಂದ 10
b) 10 ರಿಂದ 30
C) ಗೊತ್ತಿಲ್ಲ
ಉತ್ತರ: ಪೀಕಾಕ್ ಮೊಟ್ಟೆ ಇಡಲ್ಲ, ಪೀ ಹೆನ್ ಮೊಟ್ಟೆ ಇಡುತ್ತದೆ.

ಇದನ್ನೂ ಓದಿ: ಗೋಕರ್ಣ ದೇವಸ್ಥಾನದ IT ನೋಟಿಸ್:ಕೋಟಿಗಟ್ಟಲೆ ಇನ್ ಕಮ್ ಟ್ಯಾಕ್ಸ್ ಕಟ್ಟಲು ತಾಕೀತು !

Comments are closed.