Gruhalakshmi Scheme: ಗೃಹಲಕ್ಷ್ಮೀಗೆ ಅರ್ಜಿ ಹಾಕಲು ಬಂತು ಹೊಸ ವಿಧಾನ- SMS ಮಾಡೋದೆ ಬೇಡ, ಜಸ್ಟ್ ಹೀಗ್ ಮಾಡಿದ್ರೆ ಸಾಕು !!

Latest Karnataka news Congress guarantee Here is a new way to apply for gruhalakshmi yojana without SMS

Gruhalakshmi yojana:ರಾಜ್ಯದ ಮಹಿಳೆಯರು ಕಾದು ಕುಳಿತಿದ್ದಂತಹ ಗೃಹಲಕ್ಷ್ಮೀ(Gruhalakshmi)ಯೋಜನೆಗೆ ಅರ್ಜಿ ಹಾಕಲು ಮೊನ್ನೆ ಮೊನ್ನೆ ತಾನೆ ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡಿದ್ದಾರೆ. ಈಗಾಗಲೇ ಲಕ್ಷಾಂತರ ಯಜಮಾನಿಯರು ನೊಂದಾವಣಿ ಕೂಡ ಮಾಡಿದ್ದಾರೆ. ಆದರೆ ಈ ನಡುವೆ ಅರ್ಜಿ ಹಾಕುವಾಗ ಕೆಲವೊಂದು ಸಮಸ್ಯೆಗಳು ಎದುರಾಗಿ ಜನರು ಗೊಂದಲಕ್ಕೆ ಒಳಗಾಗಿದ್ದಾರೆ.

ಹೌದು, ಮನೆ ಯಜಮಾನಿಗೆ 2000 ರೂಪಾಯಿ ನೆರವು ನೀಡುವ ‘ಗೃಹಲಕ್ಷ್ಮಿ’ ಯೋಜನೆಗೆ (Gruhalakshmi yojana) ಗುರುವಾದಿಂದ ನೋಂದಣಿ ಆರಂಭವಾಗಿದೆ. ಪ್ರತೀ ಮನೆಯ ಯಜಮಾನಿಯರು ಮುಗಿಬಿದ್ದು ಅರ್ಜಿ ಹಾಕುತ್ತಿದ್ದಾರೆ. ಆದರೆ ಈ ನಡುವೆ ಕೆಲವು ಸಮಸ್ಯೆಗಳು ಎದುರಾಗಿದ್ದು, ಕೆಲವೆಡೆ ಸರ್ವರ್ ಕೈ ಕೊಟ್ಟಿದೆ. ಮತ್ತೆ ಕೆಲವರಿಗೆ SMS ಮಾಡಿದ್ರೂ ಯಾವುದೇ ರಿಪ್ಲೇ ಬರುತ್ತಿಲ್ಲ. ಹೀಗಾಗಿ ಸರ್ಕಾರವು ಮೆಸೇಜ್ ಮಾಡಿ ಅರ್ಜಿ ಸಲ್ಲಿಸುವುದರೊಂದಿಗೆ ಮತ್ತೊಂದು ವಿಧಾನವನ್ನೂ ಪರಿಚಯಿಸಿದೆ.

ಅಂದಹಾಗೆ ಸರ್ಕಾರ ನೀಡಿದ ವಿಧಾನಗಳಲ್ಲಿ ಇಷ್ಟು ದಿನ ಜನರು ಹೆಚ್ಚು ಬಳಸುತ್ತಿದ್ದು ಮೆಸೇಜ್ ಮಾಡುವ ವಿಧಾನವನ್ನು. ಮನೆಯೊಡತಿಯ ಮೊಬೈಲ್ ನಿಂದ ಸರ್ಕಾರ ನೀಡಿದ 8147500500 ನಂಬರ್ ಗೆ SMS ಕಳುಹಿಸಿದರೆ, ಮರಳಿ VM-SEVSIN ಕರ್ನಾಟಕ ಸರ್ಕಾರದ ವತಿಯಿಂದ ರಿಪ್ಲೈ ಬರುತ್ತದೆ. ಅದರಲ್ಲಿ ನಾವು ಅರ್ಜಿ ಹಾಕುವ ದಿನಾಂಕ, ಕೇಂದ್ರ, ಸಮಯ ಎಲ್ಲವನ್ನೂ ನೀಡಲಾಗಿರುತ್ತದೆ. ಆದರೆ ಇದೀಗ ಸರ್ವರ್ ಸಮಸ್ಯೆ ಎದುರಾಗಿದ್ದು SMS ಮಾಡಿದರು ಕೂಡ ಆ ಕಡೆಯಿಂದ ಯಾವುದೇ ರಿಪ್ಲೇ ಬರುತ್ತಿಲ್ಲ. ಇದರಿಂದ ಮನೆಯೊಡತಿಯರು ಗೊಂದಲಕ್ಕೀಡಾಗಿದ್ದಾರೆ. ಆದರೆ ಈ ರೀತಿಯಾದರೆ ಚಿಂತೆ ಬಿಡಿ, ಜಸ್ಟ್ ಹೀಗ್ ಮಾಡಿ ಗೃಹಲಕ್ಷ್ಮೀ ನೊಂದಾವಣಿ ಮಾಡಿ.

ಹೌದು, ಗ್ರಾಮೀಣ ಭಾಗದಲ್ಲಿ ಎಲ್ಲರಿಗೂ ಕೂಡ ಮೆಸೇಜ್ ಮಾದರಿಯಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಬರುವುದಿಲ್ಲ. ಯಾಕೆಂದರೆ ಕೆಲವೊಮ್ಮೆ ಕೆಲವರಿಗೆ ವಯಸ್ಸು ಆಗಿರುತ್ತದೆ. ಮನೆಯಲ್ಲಿ ಬೇರೆ ಯಾರೂ ಇರುವುದಿಲ್ಲ. ಇನ್ನು ಕೆಲವೊಮ್ಮೆ ಅವರಿಗೆ ಮೊಬೈಲ್ ಮೂಲಕ ಕಾರ್ಯವನ್ನು ನಿರ್ವಹಿಸುವಂತಹ ಶೈಕ್ಷಣಿಕ ಜ್ಞಾನ ಕೂಡ ಇರುವುದಿಲ್ಲ. ಅಂಥವರಿಗೆ ಹತ್ತಿರದ ಗ್ರಾಮ ಒನ್ ಕಚೇರಿಗೆ ಹೋಗಿ ಸುಲಭವಾಗಿ ರಿಜಿಸ್ಟರ್ ಮಾಡಿಕೊಳ್ಳುವಂತಹ ಆಯ್ಕೆಯನ್ನು ಕೂಡ ಇತ್ತೀಚಿನ ದಿನಗಳಲ್ಲಿ ಸರ್ಕಾರ ಅಧಿಕೃತವಾಗಿ ಹೇಳಿಕೊಳ್ಳದಿದ್ದರೂ ಕೂಡ ಕಚೇರಿಗಳು ಸ್ವ ಹಿತಾಸಕ್ತಿಯಿಂದ ಕಾರ್ಯನಿರ್ವಹಿಸುತ್ತಿವೆ.

ಹೌದು ಈಗ ಪ್ರತಿಯೊಬ್ಬರೂ ಕೂಡ ಮೆಸೇಜ್ ಮಾಡದೆ ಹೋದರೂ ಕೂಡ ಗ್ರಾಮವನ್ನು ಕಚೇರಿಗೆ ಹೋಗುವ ಮೂಲಕ ಈ ಎಲ್ಲಾ ದಾಖಲೆಗಳನ್ನು ನೀಡುವ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸುಲಭವಾಗಿ ಸಲ್ಲಿಸುತ್ತಿದ್ದಾರೆ. ಗ್ರಾಮವನ್ ಕಚೇರಿಯನ್ನು ಹೊರತುಪಡಿಸಿ ಉಳಿದೆಲ್ಲಾ ರಿಜಿಸ್ಟರ್ ಮಾಡುವಂತ ಆಫೀಸ್ ಗಳಿಗೂ ಕೂಡ ಮೊಬೈಲ್ ಮೆಸೇಜ್ ಮಾಡುವುದು ಅತ್ಯಂತ ಪ್ರಮುಖವಾಗಿರುತ್ತದೆ.

ಅಲ್ಲದೆ https://sevasindhugs.karnataka.gov.in/ ಗೆ ಭೇಟಿ ನೀಡಿ ನಿಮ್ಮ ಪಡಿತರ ಚೀಟಿ ಸಂಖ್ಯೆ ಹಾಗೂ ಕ್ಯಾಪ್ಚಾ ನಮೂದಿಸಿ ನೀವು ಅರ್ಜಿ ಸಲ್ಲಿಸುವ ವೇಳಾಪಟ್ಟಿ ಚೆಕ್ ಮಾಡಿಕೊಳ್ಳಬಹುದು. ಸರ್ಕಾರವು ಈ ಬಗ್ಗೆ, ಅಂದರೆ ಮೆಸೇಜ್ ಇಲ್ಲದೆ ನೇರವಾಗಿ ತಮ್ಮ ಮಾಹಿತಿಗಳನ್ನು ನೋಡಿಕೊಳ್ಳುವ ಕುರಿತು ಅಧಿಕೃತ ಘೋಷಣೆ ನೀಡದೆ ಹೋದರು ಕೂಡ ನೀವು ನಿಮ್ಮ ಹತ್ತಿರದ ಗ್ರಾಮವನ್ ಕಚೇರಿಗೆ ಹೋಗಿ ನೇರವಾಗಿ ಕೂಡ ವಿಚಾರಿಸಿ ಅಲ್ಲಿಯೇ ನಿಮ್ಮ ಗೃಹಲಕ್ಷ್ಮಿ ಯೋಜನೆಯ ರಿಜಿಸ್ಟರ್ ಕಾರ್ಯಕ್ರಮವನ್ನು ಮುಗಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Gruhalakshmi Scheme: ‘ಗೃಹಲಕ್ಷ್ಮೀ’ ಅರ್ಜಿ ಸಲ್ಲಿಕೆಯ ಕೊನೇ ಕ್ಷಣದಲ್ಲಿ ಹೊಸ ಟ್ವಿಸ್ಟ್ ಇಟ್ಟ ಸರ್ಕಾರ – ಹಣ ಗಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ !!

Leave A Reply

Your email address will not be published.