Gruhalakshmi Scheme: ಯಜಮಾನಿಯರೇ.. ಗೃಹಲಕ್ಷ್ಮೀ ಅರ್ಜಿ ಹಾಕಲು SMS ಕಳಿಸಿದ್ರೂ ರಿಪ್ಲೈ ಬರುತ್ತಿಲ್ಲವೇ? ಹಾಗಿದ್ರೆ ಜಸ್ಟ್ ಹೀಗ್ ಮಾಡಿ- ಕುಳಿತಲ್ಲೇ ಪರಿಹಾರ ಕಂಡುಕೊಳ್ಳಿ

Latest Karnataka news Congress guarantee gruhalakshmi scheme update

Gruhalakshmi: ರಾಜ್ಯದ ಮಹಿಳೆಯರು ಕಾದು ಕುಳಿತಿದ್ದಂತಹ ಗೃಹಲಕ್ಷ್ಮೀ(Gruhalakshmi)ಯೋಜನೆಗೆ ಅರ್ಜಿ ಹಾಕಲು ಮೊನ್ನೆ ಮೊನ್ನೆ ತಾನೆ ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡಿದ್ದಾರೆ. ಈಗಾಗಲೇ ಲಕ್ಷಾಂತರ ಯಜಮಾನಿಯರು ನೊಂದಾವಣಿ ಕೂಡ ಮಾಡಿದ್ದಾರೆ. ಆದರೆ ಈ ನಡುವೆ ಮತ್ತೆ ಸರ್ವರ್ ಸಮಸ್ಯೆ ಎದುರಾಗಿದೆ.

ಹೌದು, ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಲು ಸರ್ಕಾರ ಎರಡು ವಿಧಾನವನ್ನು ಜನರಿಗೆ ನೀಡಿದೆ. ಅದರಲ್ಲಿ ಮನೆಯೊಡತಿಯ ಮೊಬೈಲ್ ನಿಂದ ಸರ್ಕಾರ ನೀಡಿದ 8147500500 ನಂಬರ್ ಗೆ SMS ಕಳುಹಿಸಿದರೆ, ಮರಳಿ VM-SEVSIN ಕರ್ನಾಟಕ ಸರ್ಕಾರದ ವತಿಯಿಂದ ರಿಪ್ಲೈ ಬರುತ್ತದೆ. ಅದರಲ್ಲಿ ನಾವು ಅರ್ಜಿ ಹಾಕುವ ದಿನಾಂಕ, ಕೇಂದ್ರ, ಸಮಯ ಎಲ್ಲವನ್ನೂ ನೀಡಲಾಗಿರುತ್ತದೆ. ಆದರೆ ಇದೀಗ ಸರ್ವರ್ ಸಮಸ್ಯೆ ಎದುರಾಗಿದ್ದು SMS ಮಾಡಿದರು ಕೂಡ ಆ ಕಡೆಯಿಂದ ಯಾವುದೇ ರಿಪ್ಲೇ ಬರುತ್ತಿಲ್ಲ. ಇದರಿಂದ ಮನೆಯೊಡತಿಯರು ಗೊಂದಲಕ್ಕೀಡಾಗಿದ್ದಾರೆ. ಆದರೆ ಈ ರೀತಿಯಾದರೆ ಚಿಂತೆ ಬಿಡಿ, ಜಸ್ಟ್ ಹೀಗ್ ಮಾಡಿ ಗೃಹಲಕ್ಷ್ಮೀ ನೊಂದಾವಣಿ ಮಾಡಿ.

ಮೆಸೇಜ್ ಕಳುಹಿಸಿದ್ರೆ ರಿಪ್ಲೈ ಬರುತ್ತಿಲ್ಲವಾ.? ಇಲ್ಲಿದೆ ಪರಿಹಾರ- ಜಸ್ಟ್ ಹೀಗೆ ಮಾಡಿ
• ಸರ್ಕಾರ ಈ ಮೊದಲು 8147500500 ಸಹಾಯವಾಣಿ ಸಂಖ್ಯೆಗೆ SMS ಕಳುಹಿಸಿ ಸ್ಲಾಟ್ ಬುಕಿಂಗ್ ಸೂಚಿಸಿತ್ತು, ಈಗ ಮತ್ತೊಂದು ಸಹಾಯವಾಣಿ ಸಂಖ್ಯೆಯನ್ನು ಕೂಡ ನೀಡಿದೆ. 8277000555 ಸಹಾಯವಾಣಿ ಸಂಖ್ಯೆಗೂ ಕೂಡ ಪಡಿತರ ಚೀಟಿ ಸಂಖ್ಯೆಯನ್ನು SMS ಮಾಡಿ ನೋಂದಣಿ ವೇಳಾಪಟ್ಟಿ ಪಡೆದುಕೊಳ್ಳಬಹುದು.
• ನಿಮ್ಮ ಮೆಸೇಜ್ ಗೆ ರಿಪ್ಲೈ ಬಂದಿಲ್ಲ ಎಂದರೆ ತಾಂತ್ರಿಕ ಸಮಸ್ಯೆಯಿಂದ ಹೀಗಾಗಿರಬಹುದು. ಗೃಹಲಕ್ಷ್ಮಿ ಯೋಜನೆಯ ಅಧಿಕೃತ ವೆಬ್ಸೈಟ್ https://sevasindhugs.karnataka.gov.in/ ಗೆ ಭೇಟಿ ನೀಡಿ ನಿಮ್ಮ ಪಡಿತರ ಚೀಟಿ ಸಂಖ್ಯೆ ಹಾಗೂ ಕ್ಯಾಪ್ಚಾ ನಮೂದಿಸಿ ನೀವು ಅರ್ಜಿ ಸಲ್ಲಿಸುವ ವೇಳಾಪಟ್ಟಿ ಚೆಕ್ ಮಾಡಿಕೊಳ್ಳಬಹುದು.

ಎಲ್ಲೆಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ?
• ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಫಲಾನುಭವಿಗಳು ಗ್ರಾಮದ ಸಮೀಪವಿರುವ ಗ್ರಾಮ ಒನ್ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರಗಳಿಗೆ ಹೋಗಬೇಕು.
• ನಗರ ಪ್ರದೇಶದಲ್ಲಿ ವಾಸಿಸುವ ಫಲಾನುಭವಿಗಳು ಸಮೀಪದ ಕರ್ನಾಟಕ ಒನ್, ವಾರ್ಡ ಕಛೇರಿ, ಸ್ಥಳಿಯ ನಗರಾಡಳಿತ ಸಂಸ್ಥೆಯ ಕಛೇರಿ, ಗೃಹಲಕ್ಷ್ಮೀ ನೋಂದಣಿ ಕೇಂದ್ರಕ್ಕೆ ಹೋಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Mahila Samman Ulitaya Patra Yojane: ರಾಜ್ಯದ ‘ಗೃಹಲಕ್ಷ್ಮಿ’ಗೇ ಸೆಡ್ಡು ಹೊಡೆಯುತ್ತಿದೆ ಕೇಂದ್ರದ ಈ ಹೊಸ ಯೋಜನೆ- 2,000ವನ್ನೂ ಬಿಟ್ಟು ಇದಕ್ಕೆ ಅರ್ಜಿ ಹಾಕಲು ಮುಗಿಬಿದ್ದ ಮಹಿಳೆಯರು

Leave A Reply

Your email address will not be published.