UT Khader: ಹಳೆಯ ಸೇಡಿನಿಂದ ಅಮಾನತ್ತಾದ್ರಾ ಬಿಜೆಪಿಯ10 ಶಾಸಕರು ? ಹೊಳೆಯಲ್ಲಿ ಹುಳಿ ತೊಳೆಯುವ ದುಡುಕಿನ ನಿರ್ಧಾರ ಬೇಕಿತ್ತಾ ಸ್ಪೀಕರ್ ಖಾದರ್ ‘ ರವರೇ ?

Latest news politics Speaker UT Khader has ordered suspension of 10 BJP MLAs.

UT Khader: ವಿಧಾನಸಭೆ ಕಲಾಪದ ಸಂದರ್ಭದಲ್ಲಿ ಮಸೂದೆಗಳ ಪ್ರತಿಗಳನ್ನು ಹರಿದು ಪೀಠದಲ್ಲಿದ್ದ ಉಪಸಭಾಧ್ಯಕ್ಷರ ಮೇಲೆಸೆದ ಮತ್ತು ಕೋಲಾಹಲ ಸೃಷ್ಟಿಸಿದ ಆಪಾದನೆ ಹಿನ್ನೆಲೆಯಲ್ಲಿ ಬಿಜೆಪಿಯ ಒಟ್ಟು 10 ಶಾಸಕರನ್ನು ಬುಧವಾರ ಅಮಾನತು ಮಾಡಲಾಗಿದೆ. ಪ್ರಸಕ್ತ ಅಧಿವೇಶನದ ಅವಧಿ ಮುಗಿಯುವವರೆಗೂ10 ಶಾಸಕರನ್ನು ಅಮಾನತು ಮಾಡಿ ಸ್ಪೀಕರ್ ಯುಟಿ ಖಾದರ್ ಆದೇಶಿಸಿದ್ದಾರೆ. ಡಾ. ಅಶ್ವತ್ಥನಾರಾಯಣ, ವೇದವ್ಯಾಸ ಕಾಮತ್, ಅರವಿಂದ ಬೆಲ್ಲದ್, ಧೀರಜ್ ಮುನಿರಾಜು, ಯಶಪಾಲ್ ಸುವರ್ಣ, ಸುನೀಲ್ ಕುಮಾರ್, ಆರ್. ಅಶೋಕ್, ಉಮಾನಾಥ್ ಕೋಟ್ಯಾನ್, ಅರಗ ಜ್ಞಾನೇಂದ್ರ ಹಾಗೂ ಭರತ್ ಶೆಟ್ಟಿ ಅಮಾನತಾಗಿರುವ ಬಿಜೆಪಿ ಶಾಸಕರು. ಈ ಸುದ್ದಿ ಎಲ್ಲರಿಗೂ ತಿಳಿದೇ ಇದೆ.

ವಿಧಾನಸಭೆಯ ಸ್ಪೀಕರ್ ಆಗಿ ಯುಟಿ ಖಾದರ್ (UT Khader) ಅವರು ಆಯ್ಕೆಯಾದ ನಂತರ ವಿಧಾನಸಭೆಯಲ್ಲಿ ಹಲವು ತಮಾಷೆಗಳಿಗೆ, ರಸಮಯ ಸ್ವಾರಸ್ಯಮಯ ಘಟನೆಗಳಿಗೆ ಸಾಕ್ಷಿಯಾಗಿದ್ದರು. ಸದನವನ್ನು ಒಳ್ಳೆಯ ರೀತಿಯಲ್ಲಿ ಮುಂದುವರಿಸುವ ದೊಡ್ಡ ಮುನ್ಸೂಚನೆಯನ್ನೂ ನೀಡಿದ್ದರು. ಖಾದರ್ ಅವರು ಮೊದಲ ಬಾರಿಗೆ ಸ್ಪೀಕರ್ ಹುದ್ದೆಯನ್ನು ಅಲಂಕರಿಸುತ್ತಿದ್ದರೂ ಅದನ್ನು ಸಮರ್ಥವಾಗಿ ನಿಭಾಯಿಸುವ ಎಲ್ಲಾ ಲಕ್ಷಣಗಳನ್ನು ತೋರ್ಪಡಿಸಿದ್ದರು. ಆದರೆ ಏಕಾಏಕಿ ಒಂದೇ ದಿನದಲ್ಲಿ ಮಹತ್ತರ ಬೆಳವಣಿಗೆಗಳು ನಡೆದಿವೆ.

ಮೊನ್ನೆ ನಡೆದ ಇಂಡಿಯಾ ಕೇಂದ್ರದ ವಿರೋಧ ಪಕ್ಷಗಳ ಸಭೆಯಲ್ಲಿ ಭಾಗವಹಿಸಲು ಬಂದ ಹಲವು ಮಿತ್ರ ಪಕ್ಷಗಳ ನಾಯಕರನ್ನು ಸ್ವಾಗತಿಸಲು ಹಿರಿಯ ಐಎಎಸ್ ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗಿದೆ ಎನ್ನುವ ಆಪಾದನೆ, ಕಾಂಗ್ರೆಸ್ ಸರ್ಕಾರದ ಮೇಲಿತ್ತು. ಅದರ ಬಗ್ಗೆ ಜೆಡಿಎಸ್ ಸಹಿತ ಬಿಜೆಪಿ ಸದಸ್ಯರುಗಳು ಸರಕಾರವನ್ನು ಬಲವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಉಪ ಸ್ಪೀಕರ್ ಬಳಿಗೆ ಹೋಗಿ ಈ ವಿಷಯದ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಕೇಳಿದ್ದರು. ಆದರೆ ಉಪ ಸ್ಪೀಕರ್ ಅವರು ಸದಸ್ಯರ ಯಾವ ಮಾತನ್ನು ಕೇಳಿಸಿಕೊಳ್ಳುವ ಗೋಜಿಗೆ ಹೋಗಿಲ್ಲ. ಅತ್ತ ಇತ್ತ ನೋಡುತ್ತಾ, ಏನೋ ಸೈನ್ ಮಾಡುವಂತೆ ಕಾಗದ ಪತ್ರ ನೋಡುತ್ತಾ ಉಪ ಸ್ಪೀಕರ್ ಸ್ಪಂದನೆ ಮಾಡಿಯೇ ಇಲ್ಲ. ಕನಿಷ್ಠ ಒಂದು ಹೈ ಕಾಂಟ್ಯಾಕ್ಟ್ ಕೂಡ ನಡೆಸದೆ ಪ್ರತಿಭಟನ ಕಾಲರನ್ನು ಉದ್ದೇಶಪೂರ್ವಕವಾಗಿ ಅವಾಯ್ಡ್ ಮಾಡಿದಂತೆ ನಟಿಸಿದ್ದರು ಉಪ ಸ್ಪೀಕರ್. ಅಲ್ಲದೆ ತಮ್ಮ ಗಮನವನ್ನು ಬೇರೆಡೆಗೆ ವರ್ಗಾಯಿಸುತ್ತಿದ್ದು, ನೆಗ್ಲೆಕ್ಟ್ ತಂತ್ರವನ್ನು ಬಳಸಲು ಪ್ರಾರಂಭಿಸಿದ್ದರು.

ಈ ಸಂದರ್ಭದಲ್ಲಿ ಕೋಪಗೊಂಡ ಬಿಜೆಪಿ ಸದಸ್ಯರುಗಳು ಸದನದ ಬಾವಿಯ ಹೊರಗೆ ಮಸೂದೆಗಳ ಪತ್ರಗಳನ್ನು ಹರಿದು ಮುಂದಕ್ಕೆ ಬೀರಿದ್ದರು. ವಿಡಿಯೋಗಳನ್ನು ಗಮನಿಸಿದಾಗ ಅದು ಸ್ಪೀಕರ್ ಅವರ ಮುಖಕ್ಕೆ ಎಸೆಯುವ ತರ ಇರದೆ ಒಟ್ಟಾರೆ ಗಾಳಿಯಲ್ಲಿ ಬಿಸಾಡಿದಂತೆ ಕಾಣುತ್ತಿದೆ. ಇದನ್ನೇ ದೊಡ್ಡ ಅಪರಾಧವೆಂದು ಭಾವಿಸಿದ ಖಾದರ್ ಅವರು ತಮ್ಮ ಖದರ್ ತೋರಿಸಲು ಅತಿ ಉತ್ಸಾಹ ತೋರಿದ್ದಾರೆ. ಅವರ ಅತ್ಯುತ್ಸಾಹದ ಫಲವೋ ಏನೋ 10 ಜನ ಸದಸ್ಯರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಇದೀಗ ಬಿಜೆಪಿಗೆ ಬಹುದೊಡ್ಡ ಅಸ್ತ್ರ ಒಂದು ದೊರೆತಿದ್ದು ಸಣ್ಣ ಕಾರಣಕ್ಕೆ ವಿರೋಧ ಪಕ್ಷಗಳನ್ನು ಹತ್ತಿಕ್ಕಲು ಕಾಂಗ್ರೆಸ್ ಪಕ್ಷ ತುದಿ ಕಾಲಲ್ಲಿ ನಿಂತಿದೆ ಎಂದು ಆರೋಪಿಸಿದ್ದಾರೆ. ಇದು ಕಾಂಗ್ರೆಸ್ಸಿನ ಮನಸ್ಸಿನ ಒಳಗಡೆ ಇರುವ ಹಿಟ್ಲರ್ ಮನೋಭಾವವನ್ನು ತೋರಿಸುತ್ತದೆ ಎಂದು ಬಿಜೆಪಿ ನಾಯಕರುಗಳು ಇದೀಗ ಸ್ಪೀಕರ್ ವಿರುದ್ಧ ರಾಜ್ಯಪಾಲರಿಗೆ ದೂರು ಕೂಡ ಸಲ್ಲಿಕೆ ಮಾಡಿದ್ದಾರೆ. 10 ಶಾಸಕರ ಅಮಾನತು ನಿರ್ಣಯ ವಾಪಸು ತೆಗೆದುಕೊಳ್ಳಲು ಕ್ರಮ ಕೈಗೊಳ್ಳಬೇಕೆಂದು ರಾಜ್ಯಪಾಲರು ಹತ್ತಿರ ಕುಮಾರಸ್ವಾಮಿ ಸಹಿತ ಬಿಜೆಪಿಯ ನಾಯಕರುಗಳು ವಿಧಾನಸಭೆಯಿಂದ ರಾಜಭವನದವರೆಗೆ ಪಾದಯಾತ್ರೆ ಮಾಡಿದ್ದಾರೆ. ಸಣ್ಣ ಪ್ರತಿಭಟನೆಯನ್ನು ಕೂಡ ಹತ್ತಿಕುವ ಪ್ರಯತ್ನ ಇದಾ ಎನ್ನುವ ಪ್ರಶ್ನೆ ಎದ್ದಿದೆ. ಸ್ಪೀಕರ್ ಅವರು ಏಕಮುಖಿಯಾಗಿ ವರ್ತಿಸುತ್ತಿದ್ದಾರೆ, ಅವರು ಕಾಂಗ್ರೆಸ್ ಏಜೆಂಟ್ ಥರ ವರ್ತಿಸುತ್ತಿದ್ದು ಪಕ್ಷಾತೀತವಾಗಿ ವರ್ತಿಸಬೇಕಾದವರ ನಡೆ ಆಕ್ಷೇಪನೀಯ ಎಂದು ಬಿಜೆಪಿ ತೀವ್ರವಾಗಿ ಪ್ರತಿಪಡಿಸುತ್ತಿದೆ. ಇವತ್ತು ಕೂಡ ಸದನ ಅಮಾನತ್ತಿನ ಗಲಾಟೆಗೆ ಬಲಿಯಾಗಿದೆ. ಜತೆಗೆ ಈಗಿನ ಅಮಾನತ್ತಿಗೆ ಬಿಜೆಪಿ ಬೇರೆ ವ್ಯಾಖ್ಯಾನ ನೀಡಿದೆ. ವಿಧಾನ ಪರಿಷತ್ತಿನಲ್ಲಿ ಆಗ ಕಾಂಗ್ರೆಸ್ಸಿನ 10 ಜನ ಪರಿಷತ್ ಸದಸ್ಯರನ್ನು ಬಿಜೆಪಿ ಅಮಾನತ್ತು ಮಾಡಿತ್ತು. ಅದಕ್ಕೆ ಪ್ರತೀಕಾರವಾಗಿ ಈಗ 10 ಜನರನ್ನು ಅಮಾನತು ಮಾಡಲಾಗಿದೆ ಎಂದಿದೆ ಬಿಜೆಪಿ.

ಈ ಮಧ್ಯೆ ಮತ್ತೊಂದು ಬೆಳವಣಿಗೆಯಲ್ಲಿ ‘ದಲಿತ ಸ್ಪೀಕರ್ ‘ ಎಂಬ ಪದ ಪ್ರಯೋಗ ನಡೆದಿದ್ದು ಅದು ಸದನವನ್ನು ಮತ್ತು ಇಡೀ ರಾಜ್ಯವನ್ನು ನಾಚುವಂತೆ ಮಾಡಿದೆ. ಸ್ಪೀಕರ್ ನಲ್ಲಿ ‘ದಲಿತ ಸ್ಪೀಕರ್ ‘, ‘ಅಲ್ಪಸಂಖ್ಯಾತರ ಸ್ಪೀಕರ್’ ಎಂದು ಕಾಂಗ್ರೆಸ್ ವರ್ಗಿಕರಣ ಮಾಡಿದ್ದು ಸದನ ಅಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಚರ್ಚೆಗೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯನವರು ನೇರವಾಗಿ ಉಪ ಸ್ಪೀಕರ್ ಅವರು ದಲಿತರ ಆದ ಕಾರಣ ಅವರ ಮೇಲೆ ಹಲ್ಲೆಗೆ ಬಿಜೆಪಿ ಶಾಸಕರು ಯತ್ನಿಸಿದ್ದರು ಎನ್ನುವ ಗುರುತರ ಆಪಾದನೆ ಮಾಡಿದ್ದು ಇದು ಸದನದ ಮಟ್ಟಿಗೆ ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಅತ್ಯಂತ ಹಿರಿಯ ಸಂಸದೀಯ ಪಟು ಆಗಿರುವ ಸಿದ್ದರಾಮಯ್ಯನವರು ಈ ರೀತಿಯ ಹೇಳಿಕೆಗಳನ್ನು ನೀಡುವುದು ಒಂದು ಚೂರೂ ಶೋಭೆ ಅಲ್ಲ. ಐದು ಗ್ಯಾರಂಟಿಗಳನ್ನು ಕೊಡುತ್ತೇವೆ ಮತ್ತು ಕೊಡಲು ಶಕ್ತಿಮೀರಿ ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಸರಕಾರ ಇದೀಗ ದಿನೇ ದಿನೇ ಗಳಿಸಿಕೊಳ್ಳುತ್ತಿರುವ ಜನಪ್ರಿಯತೆಯನ್ನು, ಕಾಂಗ್ರೆಸ್ ಇಂತಹ ( ಸದನದಲ್ಲಿ ಅಮಾನತು ಮತ್ತು ದಲಿತ ಅಲ್ಪಸಂಖ್ಯಾತ ಸ್ಪೀಕರ್ ಹೇಳಿಕೆ) ಘಟನೆಗಳ ಮೂಲಕ ಕೈ ಚೆಲ್ಲುತ್ತೋ ಎನ್ನುವ ಅನುಮಾನ ಉಂಟಾಗಿದೆ.

ಒಟ್ಟಾರೆಯಾಗಿ, ಸ್ಪೀಕರ್ ಯುಟಿ ಖಾದರ್ ಅವರು ತಮ್ಮ ಸ್ಪೀಕರ್ ಸ್ಥಾನಕ್ಕೆ ಉಳ್ಳ ಅಧಿಕಾರವನ್ನು ಒಂದು ಬಾರಿ ಪ್ರಯೋಗಿಸಿ ನೋಡೋಣ ಎಂದು ಪ್ರಾಯೋಗಿಕವಾಗಿ ಇಳಿದ ಹಾಗಿದೆ ನಿನ್ನೆಯ ವಿಧಾನಸಭೆಯ ಪ್ರಹಸನ. ಅಲ್ಲದೆ ನಿನ್ನೆ ಯು ಟಿ ಖಾದರ್ ಅವರು ಅಮಾನತು ಮಾಡಿದ ಶಾಸಕರಲ್ಲಿ ಐದು ಜನ ಕರಾವಳಿಯವರು. ಸೂಕ್ಷ್ಮ ಪ್ರದೇಶವಾದ ಕರಾವಳಿಯ ಐದು ಜನ ಶಾಸಕರನ್ನು ಅಮಾನತು ಮಾಡಿ ಆ ಮೂಲಕ ಒಂದು ಸಂದೇಶವನ್ನು ಬಿಜೆಪಿಗೆ ರವಾನಿಸುವ ಉದ್ದೇಶವು ಇದರ ಹಿಂದಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಅದಕ್ಕೆ ತಕ್ಕಂತೆ ದಲಿತ ಉಪ ಸ್ಪೀಕರ್ ಅಲ್ಪಸಂಖ್ಯಾತ ಸ್ಪೀಕರ್ ಮುಂತಾದ ಪದ ಬಳಕೆಯನ್ನು ಕಾಂಗ್ರೆಸ್ ಮಾಡುತ್ತಿದ್ದು, ಇದು ನಿಜವಾಗಿಯೂ ಜನರಿಗೆ ಮಾಡಿದ ಅವಮಾನವೇ ಸರಿ. ಈಗ ಬಿಜೆಪಿ ಕೈಗೆ ಅಸ್ತ್ರ ಒಂದು ಸಿಕ್ಕಿದ್ದು, ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಸರ್ಕಾರದ ವಿರುದ್ಧ ಪ್ರಯೋಗಿಸಲು ಮತ್ತು ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ತಂತ್ರ ರೂಪಿಸಿವೆ. ಇದರ ಫಲವಾಗಿ ಇನ್ನು ಉಳಿದಿರುವ ಎರಡು ದಿನಗಳ ಕಲಾಪಗಳು ಕೂಡ ಇದಕ್ಕೆ ಬಲಿಯಾಗುವ ಸಂಭವವಿದೆ.

ಒಟ್ಟಾರೆ ಸ್ಪೀಕರ್ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ ಅನ್ನೋದು ಸ್ಪಷ್ಟವಾಗಿ ಎದ್ದು ಕಾಣುತ್ತದೆ. Tossing ಪೇಪರ್ಸ್ ಈಗ ಸಾಮಾನ್ಯವಾಗಿ ವಿಧಾನಸಭೆಯಲ್ಲಿ ಮತ್ತು ಲೋಕಸಭೆಯಲ್ಲಿ ಕಾಣುತ್ತಿರುವ ಒಂದು ಸಾಮಾನ್ಯ ಘಟನೆ ಆಗಿದ್ದು, ಅದಕ್ಕೆ ಸಸ್ಪೆಂಡ್ ಮಾಡೋದು ಎಷ್ಟು ಸೂಕ್ತ. ಸ್ಪೀಕರ್ ಎನ್ನುವವರು ಫಾದರ್ ಆಫ್ ದ ಹೌಸ್. ಅಂದರೆ ಸ್ಪೀಕರ್ ಅವರು ಮನೆಯ ಯಜಮಾನ ಇದ್ದಂತೆ. ಸ್ಪೀಕರ್ ಅವರ ಕೆಲಸವೇ ಆದಷ್ಟು ಹೆಚ್ಚು ಚರ್ಚೆಗಳಿಗೆ ಮಂಥನಕ್ಕೆ ಅವಕಾಶ ಕಲ್ಪಿಸುವಂತದ್ದು. ಅದು ಬಿಟ್ಟು ಜನರಿಂದ ಆಯ್ಕೆಯಾದ ಶಾಸಕರನ್ನು ಸಾದನದಿಂದ ಹೊರಗಿಟ್ಟು ಅಧಿವೇಶನ ನಡೆಸಿದರೆ ಹೇಗೆ ? ಒಟ್ಟಿನಲ್ಲಿ ಇಲ್ಲಿ ಸ್ಪಷ್ಟವಾಗಿ ಸ್ಪೀಕರ್ ಯುಟಿ ಖಾದರ್ ಅವರು ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ ಎನ್ನಬಹುದು. ಖದರ್ ತೋರಿಸಲು ಹೋದ ಯು ಟಿ ಖಾದರ್ ಆರಂಭ ಶೂರತ್ವ ಮೆರೆದು ಇದೀಗ ವ್ಯಾಪಕ ಟೀಕೆಗೆ ಗುರಿಯಾಗುತ್ತಿದ್ದಾರೆ. ಬಹುಶಃ ಈಗ ಖಾದರ್ ಅವರಿಗೂ ತಮ್ಮ ತಪ್ಪಿನ ಅರಿವಾಗಿರಬೇಕು ಅನ್ನಿಸುತ್ತಿದೆ. ಮುಂದಕ್ಕೆ ಆದ್ರೂ, ಸಂವಿಧಾನಿಕ ಹುದ್ದೆಯಲ್ಲಿ ಇರುವವರು ತಾಳ್ಮೆಯಿಂದ, ಪಕ್ಷಾತೀತರಾಗಿ ಮತ್ತು ಇನ್ನಷ್ಟು ಪ್ರಾಜ್ಞರಾಗಿ ವರ್ತಿಸಬೇಕಾಗಿದೆ. ಒಳ್ಳೆಯ ಆರಂಭಿಕ ಭರವಸೆ ಮೂಡಿಸಿದ್ದ ಖಾದರ್ ಅವರು ಗಳಿಸಿದ ಜನಪ್ರಿಯತೆ ನೆರ ನೀರಿನಲ್ಲಿ ಹುಣಿಸೆ ಹಣ್ಣು ತಿಕ್ಕಿ ತೊಳೆದಂತೆ ಆಗಬಾರದು ಎನ್ನುವುದೇ ಆಶಯ.

 

 

 

ಇದನ್ನು ಓದಿ: Indian railway: ಈ ಪ್ರಯಾಣಿಕರಿಗೆ ಗುಡ್ ನ್ಯೂಸ್ ಮೆಲೆ ಗುಡ್ ನ್ಯೂಸ್- ಮತ್ತೊಂದು ಹೊಸ ಭಾಗ್ಯ ಜಾರಿಗೊಳಿಸಿ ಮಹತ್ವದ ಆದೇಶ ಹೊರಡಿಸಿದ ಸರ್ಕಾರ !! 

Leave A Reply

Your email address will not be published.