Tejaswini ananth kumar: ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕೊನೆಗೂ ಮೌನ ಮುರಿದ ತೇಜಸ್ವಿನಿ ಅನಂತ್ ಕುಮಾರ್- ಬಿಜೆಪಿಗೆ ಕೊಡ್ತಾರಾ ಟಕ್ಕರ್ ?

latest news Tejaswini Ananth Kumar joining Congress was the reason for the discussion

Tejaswini ananth kumar: ಲೋಕಸಭಾ ಚುನಾವಣೆ(Parliament election)ಹತ್ತಿರವವಾಗುತ್ತಿದಂತೆ ರಾಜ್ಯ ರಾಜಕೀಯದಲ್ಲಿ ಪಕ್ಷಾಂತರದ ಕೂಗು ಕೇಳಿಬರುತ್ತಿದೆ. ಅಂತೆಯೇ ಕೆಲ ದಿನದಿಂದ ಮಾಜಿ ಸಚಿವ, ಬಿಜೆಪಿ(BJP) ನಾಯಕ, ದಿ. ಅನಂತ್ ಕುಮಾರ್(Ananth kumar) ಅವರ ಪತ್ನಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್(Tejaswini ananth kumar)ಅವರು ಕಾಂಗ್ರೆಸ್ ಸೇರ್ಪಡೆ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೀಗ ಈ ಕುರಿತು ಸ್ವತಃ ತೇಜಸ್ವಿನಿ ಅವರೇ ಸ್ಪಷ್ಟೀಕರಣ ನೀಡಿದ್ದಾರೆ.

ಹೌದು, ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಲು ಯಡಿಯೂರಪ್ಪರನವರ ಹೆಗಲಿಗೆ ಹೆಗಲು ಕೊಟ್ಟು ದುಡಿದಂತಹ, ಸಂಸದರಾಗಿ, ಕೇಂದ್ರ ಸಚಿವರಾಗಿ(Central Minister), ಪ್ರಧಾನಿ ಆದಿಯಾಗಿ ಪಕ್ಷದ ರಾಷ್ಟ್ರೀಯ ವರಿಷ್ಠರಿಗೂ ಹತ್ತಿರಾಗಿ, ನಿಷ್ಟಾವಂತ ಜನನಾಯಕನಾಗಿ ಇದ್ದಂತಹ ಅನಂತ್ ಕುಮಾರ್ ಅವರ ನಿಧನದ ಬಳಿಕ ಅವರ ಶ್ರೀ ಪತ್ನಿ ತೇಜಸ್ವಿನಿ ಅವರಿಗೆ ಲೋಕಸಭಾ ಚುನಾವಣೆಯ ಟಿಕೆಟ್ ನೀಡದೆ, ಯಾವಾ ಚುನಾವಣೆಯಲ್ಲೂ ಸ್ಪರ್ಧಿಸಲು ಬಿಜೆಪಿ ಅವಕಾಶ ನೀಡದೆ, ಬಿಜೆಪಿ ಉಪಾಧ್ಯಕ್ಷೆ ಸ್ಥಾನ ನೀಡಿ ಸುಮ್ಮನಾಗಿಸಿತ್ತು. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಅವರನ್ನು ಕಡೆಗಣನೆ ಮಾಡುತ್ತಲೇ ಬರುತ್ತಿದೆ. ಈ ಹಿನ್ನೆಲೆಯಲ್ಲಿ ತೇಜಸ್ವಿನಿಯವರ ಬಿಜೆಪಿ(BJP) ತೊರೆದು ಕಾಂಗ್ರೆಸ್(Congress)ಸೇರುತ್ತಾರೆ ಎನ್ನುವ ವಿಚಾರ ರಾಜ್ಯದಲ್ಲಿ ಹುಟ್ಟಿಕೊಂಡಿತ್ತು. ಆದರೀಗ ಈ ಬಗ್ಗೆ ಸ್ವತಃ ತೇಜಸ್ವಿನಿಯವರೇ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಸೇರ್ಪಡೆ ಸುದ್ದಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ದಯವಿಟ್ಟು ಊಹಾಪೋಹಗಳಿಗೆ ಕಿವಿಗೊಡಬೇಡಿ. ನಾನು ಭಾರತೀಯ ಜನತಾ ಪಕ್ಷದ ಜೊತೆಗೆ ಧೃಡವಾಗಿ ಇದ್ದೇನೆ ಎಂದು ಹೇಳಿದ್ದಾರೆ. ಅಂದಹಾಗೆ ವಿಧಾನಸಭೆ ಚುನಾವಣೆ ವೇಳೆ ಜಗದೀಶ್ ಶೆಟ್ಟರ್ , ಲಕ್ಷ್ಮಣ್ ಸವದಿ ಸೇರಿ ಹಲವರು ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಯಾಗಿ ಶಾಕ್ ಕೊಟ್ಟಿದ್ದರು. ಹೀಗಾಗಿ ಕಳೆದೆರಡು ದಿನಗಳ ಹಿಂದೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ರಾಜಕೀಯ ಬೆಳವಣಿಗೆ ಆಗಲಿದೆ ಎಂದು ಸುದ್ದಿ ಹಬ್ಬಿತ್ತು. ತೇಜಸ್ವಿನಿ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಜಗದೀಶ್‌ ಶೆಟ್ಟರ್‌ ಮುಖ್ಯ ಸೇತುವೆ ಎನ್ನಲಾಗಿತ್ತು. ಇವೆಲ್ಲ ಊಹಾಪೋಹಗಳಿಗೆ ಇಂದು ತೆರೆ ಬಿದ್ದಿದೆ.

ಇನ್ನು ಆರಂಭದಲ್ಲಿ ಹೇಳಿದಂತೆ, ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ಬಿಜೆಪಿಯಿಂದ 6 ಬಾರಿ ಗೆದ್ದು ಸಂಸದರಾಗಿದ್ದ ಅನಂತಕುಮಾರ್‌ ಅವರ ನಿಧನದ ನಂತರ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅವರನ್ನು 2018ರ ಲೋಕಸಭೆ ಚುನಾವಣೆಗೆ ನಿಲ್ಲಿಸಲು ತಯಾರಿ ನಡೆದಿತ್ತು. ಆದರೆ ಅಚ್ಚರಿ ಎಂಬಂತೆ ತೇಜಸ್ವಿ ಸೂರ್ಯ(Tejswi surya) ಅವರಿಗೆ ಬಿಜೆಪಿ ಟಿಕೆಟ್‌ ನೀಡಿತ್ತು. ಆದರೆ ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿನಿಗೆ ಬಿಜೆಪಿ ಟಿಕೆಟ್ ನೀಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.

 

ಇದನ್ನು ಓದಿ: DCM DK Shivakumar: ಇನ್ನು ಮುಂದೆ ಮನೆ ಆಸ್ತಿ ದಾಖಲೆಗಳು ಮನೆಗೇ ಬರಲಿದೆ – ಡಿಕೆ ಶಿವಕುಮರ್ ಕೊಟ್ರು ಬಿಗ್ ಅಪ್ಡೇಟ್ ! 

Leave A Reply

Your email address will not be published.