Struggle of alcohol lovers: ಬೆಳಗ್ಗೆ 90 ಎಂಎಲ್, ಸಂಜೆ 90 ಎಂಎಲ್ ‘ಮದ್ಯ’ ಉಚಿತ !! ಕರಾವಳಿಯಲ್ಲಿ ಮದ್ಯಪ್ರಿಯರಿಂದ ಹೀಗೊಂದು ಒತ್ತಾಯದ ಹೋರಾಟ !!

Latest news liquor price alcohol lovers inciting against the state government

Struggle of alcohol lovers: ರಾಜ್ಯ ಸರ್ಕಾರದ(State Government) ‘ಮದ್ಯ’ದ ರೇಟನ್ನು ಏರಿಕೆ ಮಾಡಿ ಮಾಡಿ ಮಧ್ಯಪ್ರಿಯರಿಗೆ ಶಾಕ್ ನೀಡುತ್ತಲೇ ಇದೆ. ಮೊನ್ನೆ ಕೂಡ ಬಜೆಟ್(Budget) ಮಂಡನೆಯಲ್ಲಿ ಹೇಳಿದಂತೆ ಮದ್ಯದ ಮೇಲಿನ ಸುಂಕ ಹೆಚ್ಚಳ ಮಾಡಿ ಕರಡು ಪ್ರತಿಯನ್ನು ಕೂಡ ಸಿದ್ಧಪಡಿಸಿದೆ. ಆದರೆ ಈ ನಡುವೆ ಮದ್ಯಪ್ರಿಯರಿಂದ ಕರಾವಳಿಯಲ್ಲೊಂದು ವಿನೂತನವಾದ ಹೋರಾಟವೊಂದು ನಡೆದಿದೆ.

ಹೌದು, ಇದೇ ಜುಲೈ(July) 20 ರಿಂದ ರಾಜ್ಯದಲ್ಲಿ ಮದ್ಯದ ದರ ಏರಿಕೆಯಾಗಲಿದೆ. ಸುರಪಾನ ಪ್ರಿಯರಿಗೆ ಇನ್ನು ಬೆಲೆ ಏರಿಕೆ ಬರೆ ಬೀಳಲಿದೆ. ಆದರೆ ಈ ನಡುವೆಯೇ ಉಡುಪಿಯಲ್ಲಿ(Udupi) ಮದ್ಯಪ್ರಿಯರು ರಾಜ್ಯ ಸರಕಾರದ ವಿರುದ್ದ ಕಿಡಿಕಾರಿದ್ದು ವಿನೂತನವಾದ ಹೋರಾಟವನ್ನು ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್ ಚುನಾವಣೆ ಪೂರ್ವ ನೀಡಿದ ಉಚಿತ ಗ್ಯಾರಂಟಿಗಳನ್ನು ಹಂತಹಂತವಾಗಿ ಜಾರಿ ಮಾಡುತ್ತಿದ್ದು, ತಮಗೂ ಮದ್ಯವನ್ನು ಉಚಿತವಾಗಿ ನೀಡುವಂತೆ ಸರಕಾರದ ವಿರುದ್ಧ ಪ್ರತಿಭಟನೆ‌ ನಡೆಸಿ, ಮನವಿ ಮಾಡಿದರು.

ಅಂದಹಾಗೆ ಉಡುಪಿ ನಾಗರಿಕ ಸಮಿತಿ ಸಹಕಾರದಲ್ಲಿ ಮದ್ಯಪ್ರಿಯರು ಇಂದು ಬೆಳಗ್ಗೆ ಚಿತ್ತರಂಜನ್ ವೃತ್ತದಲ್ಲಿ(Chittaranjan circle) ಪ್ರತಿಭಟನೆ ನಡೆಸಿ, ಮದ್ಯದ ಬಾಟಲಿಗೆ ಹೂಗಳಿಂದ ಅಲಂಕರಿಸಿ, ಆರತಿ ಬೆಳಗಿ, ಡೋಲು ಬಡಿದು ಗಮನ ಸೆಳೆದರು. ನಾಗರಿಕ ಸಮಿತಿ ನಿತ್ಯಾನಂದ ಒಳಕಾಡು, ಗೋವಿಂದ ಶೆಟ್ಟಿ ಮಾತನಾಡಿ, ಸರಕಾರ ಉಚಿತ ಯೋಜನೆ ಮಾದರಿಯಲ್ಲಿ ಮದ್ಯಪ್ರಿಯರಿಗೂ ಬೆಳಗ್ಗೆ 90 ಎಂಎಲ್, ಸಂಜೆ 90 ಎಂಎಲ್ ಮದ್ಯ ಉಚಿತವಾಗಿ ‌ನೀಡುವಂತೆ ಒತ್ತಾಯಿಸಿದರು‌‌.

ಅಲ್ಲದೆ ಸರಕಾರಕ್ಕೆ ಹೆಚ್ಚು ಆರ್ಥಿಕ ಬಲ ನೀಡುವುದು ಮದ್ಯಪ್ರಿಯರ ಸುಂಕದಿಂದ. ಇದರಿಂದಾಗಿ ಉಚಿತ ಯೋಜನೆ ಜಾರಿಗೆ ಅನುಕೂಲವಾಗಿದೆ. ಇಷ್ಟೆಲ್ಲಾ ಸರಕಾರಕ್ಕೆ ಲಾಭವಾಗಿರುವ ಮಧ್ಯಪ್ರಿಯರಿಗೆ ಸರಕಾರ ಬಜೆಟ್ ನಲ್ಲಿ ಬೆಲೆ ಏರಿಕೆ ಮಾಡಿ ಅನ್ಯಾಯ ಮಾಡಿದೆ. ಒಂದೇ ಉಚಿತ ನೀಡಿ, ಇಲ್ಲವೇ ಮದ್ಯ ಬಂದ್ ಮಾಡಿ ಎಂದು ಮದ್ಯಪ್ರಿಯರು ಸರಕಾರವನ್ನು ‌ಒತ್ತಾಯಿಸಿದರು.

ಇನ್ನು ಮದ್ಯದ ಮೇಲಿನ ಸುಂಕ ಏರಿಕೆ ಜುಲೈ 20ರಿಂದ ಜಾರಿಗೆ ಬರಲಿದೆ. ಬ್ರಾಂಡಿ(Brandy), ವಿಸ್ಕಿ(Vicki), ರಮ್(Rum), ಜಿನ್ ಸೇರಿದಂತೆ ಎಲ್ಲ ಬಗೆಯ ಭಾರತೀಯ ಮದ್ಯದ ಮೇಲೆ ಎಲ್ಲಾ ಘೋಷಿತ 18 ಫ್ಲ್ಯಾಬ್‌ ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹಾಲಿ ಇರುವ ದರಕ್ಕಿಂತ ಶೇ.20 ಮತ್ತು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇ.175ರಿಂದ 185 ಅಂದರೆ ಶೇ.10ರಷ್ಟು ಹೆಚ್ಚಳ ಮಾಡುವ ಬಗ್ಗೆ ಗೆಜೆಟ್‌ ಅನ್ನು ಹೊರಡಿಸಿದೆ. ಇಂದು ವೇಳೆ ಬೆಲೆ ಏರಿಕೆಗೆ ಗ್ರೀನ್‌ ಸಿಗ್ನಲ್‌ ಸಿಕ್ಕರೇ ಭಾರತೀಯ ಮದ್ಯ (ಐಎಂಎಲ್) ಒಂದು ಪೆಗ್ (60 ಎಂಎಲ್ )ಗೆ 10ರಿಂದ 20 ರೂ. ಹಾಗೂ ಬಿಯ‌ ಬೆಲೆ ಪ್ರತಿ ಬಾಟಲ್‌ಗೆ 3ರಿಂದ 5 ರೂ. ಹೆಚ್ಚಳವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

 

ಇದನ್ನು ಓದಿ: Koragajja Daiva: ತೀರ್ಪು ಕೊಡೋ ಕೊರಗಜ್ಜನಿಗೇ ಕಂಠಕವಾಯ್ತು ಜಮೀನು ವಿವಾದ !! ಸಿಟ್ಟಿನಲ್ಲಿ ಗುಡಿಗೇ ಬೆಂಕಿ ಇಟ್ಟ ಮಾಲೀಕ !!

Leave A Reply

Your email address will not be published.