Electricity Meter: ಮನೆಯ ಮೀಟರ್ ಬೋರ್ಡ್ ಅಜ್ಜ ಅಥವಾ ಅಪ್ಪನ ಹೆಸರಲ್ಲಿದೆಯಾ? ಹಾಗಿದ್ರೆ ನಿಮಗೆ ಬಂತು ಹೊಸ ರೂಲ್ಸ್, ಈ ತಿಂಗಳಿಂದಲೇ ಜಾರಿ!!

latest news new rules for electricity meter in the name of father or grandfather

Electricity Meter: ರಾಜ್ಯದಲ್ಲೀಗ ಸರ್ಕಾರ ನುಡಿದಂತೆ ನಡೆಯಲು ಎಲ್ಲಾ ಉಚಿತ ಯೋಜನೆಗಳ(Free Schemes)ಜಾರಿಗೆ ಮುಂದಾಗಿದೆ. ಈಗಾಗಲೇ ಗೃಹಜ್ಯೋತಿ ಯೋಜನೆ ಜಾರಿಯಾಗಿದ್ದು, ಜುಲೈ ಒಂದರಿಂದ ಜನರಿಗೆ ಉಚಿತವಾಗಿ ವಿದ್ಯುತ್ ದೊರೆಯುತ್ತದೆ. ಅರ್ಜಿ ಸಲ್ಲಿಕೆಯೂ ಭರದಿಂದ ಸಾಗುತ್ತಿದೆ. ಈ ಬೆನ್ನಲ್ಲೇ ಕೆಲವೊಂದು ಗೊಂದಲಗಳು ಹುಟ್ಟಿಕೊಂಡಿವೆ. ಅದರಲ್ಲಿ ಮೀಟರ್ ಬೋರ್ಡ್(Electricity Meter) ಯಾರ ಹೆಸರಲ್ಲಿರಬೇಕು? ಎಂಬುದೂ ಒಂದು. ಒಂದು ವೇಳೆ ಇದು ಅಜ್ಜ ಅಥವಾ ಅಪ್ಪನ ಹೆಸರಲ್ಲಿದ್ದು, ಅವರೇನಾದರೂ ಮರಣಹೊಂದಿದ್ದರೆ ಏನು ಮಾಡಬೇಕೆಂಬುದು ಕೆಲವರ ಪ್ರಶ್ನೆ. ಅದೆಲ್ಲಕ್ಕೂ ಪರಿಹಾರ ಈ ನ್ಯೂಸ್ ನಲ್ಲಿದೆ ಓದಿ.

ಹೌದು, ಮನೆಯ ಮೀಟರ್ ಬೋರ್ಡ್ ಅಜ್ಜ ಅಥವಾ ಅಪ್ಪನ ಹೆಸರಲ್ಲಿದ್ದು ಅವರು ಮರಣ ಹೊಂದಿದರೆ ಏನು ಮಾಡಬೇಕು ಎಂಬುದು ಹಲವರ ಗೊಂದಲವಿರಬಹುದು. ಇದು ಸಹಜ. ಹೀಗೆನಾದರೂ ಆಗಿದ್ದರೆ ಈ ಕೂಡಲೇ ನೀವಿದನ್ನು ನಿಮ್ಮ ಹೆಸರಿಗೆ ಬದಲಾಯಿಸಿಕೊಳ್ಳಿ. ಹೀಗೆ ವರ್ಗಾಯಿಸಿಕೊಂಡರೆ ಮಾತ್ರ ನೀವು ಕೂಡ ಉಚಿತ ವಿದ್ಯುತ್ ಪಡೆದುಕೊಳ್ಳಲು ಸಹಾಯಕವಾಗುತ್ತದೆ. ಹಾಗಾದ್ರೆ ಮರಣ ಹೊಂದಿದವರ ಹೆಸರಿನಲ್ಲಿ ಇರುವ ವಿದ್ಯುತ್ ಮೀಟರ್ ಅನ್ನು ನಿಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳುವುದು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

ಹೆಸರು ವರ್ಗಾವಣೆ ಮಾಡಿಸುವುದು ಹೇಗೆ?
• ಮೊದಲನೇದಾಗಿ ನೀವು ಯಾವುದಾದರೂ ವಕೀಲರ ಬಳಿ 200 ರೂಪಾಯಿ ಸ್ಟ್ಯಾಂಪ್ ಪೇಪರ್(Stamp paper) ಮೇಲೆ ಒಪ್ಪಿಗೆ ಪತ್ರವನ್ನು ಬರೆದು ನಿಮ್ಮ ಸಹಿ ಹಾಕಿ ಅದನ್ನು ನೋಟರಿ ಮಾಡಿಸಿಕೊಳ್ಳಬೇಕು. ಇಷ್ಟು ದಿನ ವಿದ್ಯುತ್ ಮೀಟರ್ ಇರುವ ಹೆಸರಿನ ವ್ಯಕ್ತಿ ಮರಣ ಹೊಂದಿದ್ದು ಅವರ ಮರಣದ ನಂತರ ಅವರ ವಾಸುದಾರನಾದ ನನ್ನ ಹೆಸರಿಗೆ ವಿದ್ಯುತ್ ಮೀಟರ್ ಬದಲಾಯಿಸಿ ಕೊಡಿ ಎಂದು ಸ್ಟಾಂಪ್ ಪೇಪರ್ ಮೇಲೆ ಬರೆಯಬೇಕು. ಸ್ಟಾಂಪ್ ಪೇಪರ್ ನಲ್ಲಿ ಮರಣ ಹೊಂದಿದವರ ಹೆಸರು, ಮರಣ ಹೊಂದಿದ ದಿನಾಂಕ, ನಿಮ್ಮ ಹೆಸರು, ಮರಣ ಹೊಂದಿದವರ ಹಾಗೂ ನಿಮ್ಮ ಸಂಬಂಧ ಎಲ್ಲವನ್ನು ವಿಸ್ತಾರವಾಗಿ ಬರೆದಿರಬೇಕು.

• ವಕೀಲರ(Lawyer) ಬಳಿ ನೋಟರಿ ಮಾಡಿಸಿಕೊಂಡ ನಂತರ ಇದನ್ನು ನಿಮ್ಮ ಇತರ ಅಗತ್ಯ ದಾಖಲೆಗಳ ಜೊತೆಗೆ ಇದೇ ರೀತಿಯ ಒಂದು ಅರ್ಜಿಯನ್ನು ಕೂಡ ಬರೆದು ವಿದ್ಯುತ್ ಇಲಾಖೆಗೆ ನೀಡಬೇಕು.
• ಇದೇ ರೀತಿ ವಿದ್ಯುತ್ ಮೀಟರ್ ಅನ್ನು ವ್ಯಕ್ತಿಯ ಬದುಕಿರುವಾಗಲು ಕೂಡ ನಿಮ್ಮ ಹೆಸರಿಗೆ ವರ್ಗಾವಣೆ ಆಗಬೇಕೆಂದಿದ್ದರೆ ಅದನ್ನು ಕೂಡ ಮಾಡಿಸಿಕೊಳ್ಳಬಹುದು. ಇದಕ್ಕೆ ಯಾವ ವ್ಯಕ್ತಿಯ ಹೆಸರಿನಲ್ಲಿ ಮೀಟರ್ ಇರುತ್ತದೆಯೋ ಅವರ ಒಪ್ಪಿಗೆ ಪ್ರಮಾಣ ಪತ್ರ ಬೇಕಾಗುತ್ತದೆ. ಇದಕ್ಕೂ ಕೂಡ ಅರ್ಜಿ ಸಲ್ಲಿಸಬೇಕಾಗುತ್ತದೆ. ಜೊತೆಗೆ 200 ರೂಪಾಯಿಗಳ ಸ್ಟ್ಯಾಂಪ್ ಪೇಪರ್ ಮೇಲೆ ಒಪ್ಪಿಗೆ ಪ್ರಮಾಣ ಪತ್ರ ಬರೆಯಬೇಕಾಗುತ್ತದೆ.
• ರಾಜ್ಯ ಸರ್ಕಾರ ನೀಡುತ್ತಿರುವ 200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ಫಲಾನುಭವಿಗಳಾಗಲು ಮೀಟರ್ ನಲ್ಲಿ ಯಾವುದಾದರು ಹೆಸರಿನ ಸಮಸ್ಯೆ ಇದ್ದರೆ ಅಥವಾ ಮರಣ ಹೊಂದಿದವರ ಹೆಸರಿನಲ್ಲಿ ಇರುವ ಮೀಟರ್ ನಿಮ್ಮ ಹೆಸರಿಗೆ ಮಾಡಿಸಿಕೊಳ್ಳುವುದಿದ್ದರೆ ಇದು ಸೂಕ್ತ ಸಮಯ

ಬದಲಾವಣೆಗೆ ಬೇಕಾಗುವ ದಾಖಲೆಗಳು:
• ಆಧಾರ್ ಕಾರ್ಡ್(Adhar card) ಹಾಗೂ ಮತ್ತಿತರ ಪುರಾವೆಗಳು
• 200 ರೂಪಾಯಿಗಳ ಸ್ಟಾಂಪ್ ಪೇಪರ್ ಮೇಲೆ ಒಪ್ಪಿಗೆಯ ಪತ್ರ
• ಮರಣ ಹೊಂದಿದವರ ಮರಣ ಪ್ರಮಾಣ ಪತ್ರ
• ಹೆಸರು ವರ್ಗಾವಣೆಗೆ ಅರ್ಜಿ.

 

ಇದನ್ನು ಓದಿ: Bank Job: ಸರ್ಕಾರಿ ಬ್ಯಾಂಕ್ ಮ್ಯಾನೇಜರ್ ಮಹಾ ರೆಕ್ರೂಟ್ ಮೆಂಟ್ ..!! ಬರೋಬ್ಬರಿ 1,000 ಸಾವಿರ ಪೋಸ್ಟ್ ಗೆ ಅರ್ಜಿ ಆಹ್ವಾನ ! 

Leave A Reply

Your email address will not be published.