Mangaluru student death: ಮಂಗಳೂರು ಮೂಲದ ವಿದ್ಯಾರ್ಥಿ ತಿರುಪತಿಯ ಜಲಪಾತದಲ್ಲಿ ಬಿದ್ದು ಸಾವು!

Latest Karnataka death news mangaluru Student dies into talakona waterfall body with head stuck between two rocks

Mangaluru student death: ತಿರುಪತಿಯ ಜಲಪಾತದಲ್ಲಿ ಮಂಗಳೂರು ಮೂಲದ ವಿದ್ಯಾರ್ಥಿಯೋರ್ವ ಸಾವಿಗೀಡಾದ(Mangaluru student death) ಘಟನೆಯೊಂದು ನಡೆದಿದೆ. ತಿರುಪತಿಯ ತಲಕೋನಾ ಜಪಾತದಲ್ಲಿ ಈ ಅವಘಡ ನಡೆದಿದೆ. ಸುಮಂತ್‌ ತನ್ನ ಸ್ನೇಹಿತರ ಜೊತೆ ತಿರುಗಾಡಲೆಂದು ಹೋಗಿದ್ದು, ಸುಮಂತ್‌ ತಲಕೋಣ ಜಲಪಾತಕ್ಕೆ ಧುಮುಕುತ್ತಿರುವ ವೀಡಿಯೋ ಕೂಡಾ ಸ್ನೇಹಿತರು ಮಾಡಿದ್ದಾರೆ.

 

ವೀಕೆಂಡ್‌ ಎಂದು ಟ್ರಿಪ್‌ಗೆ ಹೋದ ಸಂದರ್ಭದಲ್ಲಿ ಈ ದುರಂತ ನಡೆದಿದೆ.

ಮಂಗಳೂರು ಮೂಲದ ಸುಮಂತ್  ಚೆನ್ನೈನ ರಾಜೀವ್‌ ಗಾಂಧಿ ಕಾಲೇಜಿನಲ್ಲಿ ಎಂಎಸ್ಸಿ ಶಿಕ್ಷಣ ಪಡೆಯುತ್ತಿದ್ದ.‌ ಜಪತಾತದ ನೀರಿಗೆ ಧುಮಿಕಿದ ನಂತರ ಸುಮಂತ್‌ ತುಂಬಾ ಹೊತ್ತಿನವರೆಗೆ ಮೇಲೆ ಬರದೇ ಇರುವ ಕಾರಣ, ಹೆದರಿದ ಆತನ ಸ್ನೇಹಿತರು, ನಂತರ ಸಮೀಪದ ಪೊಲೀಸ್‌ ಠಾಣೆ ಮತ್ತು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ, ಪೊಲೀಸ್‌ನವರು ಬಂದಿದ್ದು, ಸುಮಂತ್‌ ತಲೆ ನೀರಿನ ಅಡಿಯಲ್ಲಿ ಎರಡು ಬಂಡೆಗಳ ನಡುವೆ ಸಿಲುಕಿಕೊಂಡಿದೆ ಎಂದು ಹೇಳಿದ್ದಾಗಿ ವರದಿಯಾಗಿದೆ. ಈಗಾಗಲೇ ಮೃತದೇಹವನ್ನು ನೀರಿನಿಂದ ತೆಗೆಯಲಾಗಿದೆ.

ಇದನ್ನೂ ಓದಿ:  ಪ್ರಕೃತಿಯ ವೈಶಿಷ್ಟ್ಯವೋ ಅಥವಾ ವಿನಾಶ ಕಾಲವೋ! ಈ ಪರ್ವತದಿಂದ ಹೊರ ಬರುತ್ತಿದೆ ʼರಕ್ತʼ ನೀರು!!!

Leave A Reply

Your email address will not be published.