Tamanna Bhatiya- Vijay Varma: ಯಬ್ಬೋ….ಮೊದಲ ಡೇಟ್ ನಲ್ಲೇ ಎಲ್ಲವನ್ನೂ ಮುಗಿಸಿಕೊಂಡ್ರಾ ತಮನ್ನಾ ? ಮ್ಯಾಟ್ರು ಲೀಕ್ ಮಾಡಿದ ವಿಜಯ್ ವರ್ಮಾ..!!!

latest news cinima news Tamannaah Bhatia and actor Vijay Verma's love story has gone viral

Tamanna Bhatiya- Vijay Varma: ಸೌತ್ ಕ್ವೀನ್ ತಮನ್ನಾ ಭಾಟಿಯಾ(Tamanna bhatiya) ಹಾಗೂ ನಟ ವಿಜಯ್ ವರ್ಮಾ(Tamanna Bhatiya- Vijay Varma) ನಡುವಿನ ಲವ್ ಸ್ಟೋರಿ(Love story) ವಿಚಾರ ಬಹಳ ದಿನಗಳಿಂದ ಚರ್ಚೆಯಾಗ್ತಿದೆ. ಡೇಟಿಂಗ್, ಪ್ರೀತಿ, ಫ್ರೆಂಡ್ಶಿಪ್ ಎಂದೆಲ್ಲಾ ವ್ಯಖ್ಯಾನ ಮಾಡಲಾಗಿದ್ದು ಕೊನೆಗೂ ತಮನ್ನಾ ಅವರು ತಮ್ಮ ಈ ಬಗ್ಗೆ ಮೌನ ಮುರಿದು ಗಾಸಿಪ್ ಗೆ ತೆರೆ ಎಳೆದಿದ್ರು. ಆದರೂ ಇವರಿಬ್ಬರ ಡೇಟಿಂಗ್ ವಿಚಾರ ಆಗಾಗ ಸದ್ದು ಮಾಡುತ್ತಲೇ ಇದೆ. ಅಂತೆಯೇ ಇದೀಗ ಇವರಿಬ್ಬರು ಮೊದಲ ಡೇಟ್ ನಲ್ಲೇ ಸಂಭೋಗ ನಡೆಸಿದ್ರಾ ಎಂಬ ಪ್ರಶ್ನೆ ಎದ್ದಿದ್ದು, ಇದಕ್ಕೆ ವಿಜಯ್ ವರ್ಮಾ ಅವರು ಮುಚ್ಚು ಮರೆ ಇಲ್ಲದೆ ಉತ್ತರ ನೀಡಿದ್ದಾರೆ.

ಹೌದು, ಲಸ್ಟ್ ಸ್ಟೋರಿ-2 ಮೂಲಕ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ತಮನ್ನಾ ಸಿಕ್ಕಾಪಟ್ಟೆ ಹಾಟ್ ಆಗಿದ್ದಾರೆ. ಈ ಸೀರಿಸ್‌ಗಾಗಿ ತಮನ್ನಾ ತನ್ನ 18 ವರ್ಷದ ನೋ ಕಿಸ್ಸಿಂಗ್ ಸೀನ್(Kissing seen) ನಿಯಮವನ್ನು ಬ್ರೇಕ್ ಮಾಡಿದ್ದು, ಬಾಯ್‌ಫ್ರೆಂಡ್ ವಿಜಯ್ ವರ್ಮಾ ಜೊತೆ ತಮನ್ನಾ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಬೆಡ್ ರೂಮ್(Bed room) ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿವೆ. ತಮನ್ನಾ ಅವರನ್ನು ಈ ಪರಿ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ವಿಜಯ್ ವರ್ಮಾ ಜೊತೆಗಿನ ಸಂಬಂಧ ಅಧಿಕೃತ ಗೊಳಿಸಿರುವ ತಮನ್ನಾ ಸಾಕಷ್ಟು ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ಅಂತೆಯೇ ಇದೀಗ ತಮ್ಮ ಮೊದಲ ಭೇಟಿ ಅನುಭವದ ಬಗ್ಗೆ ಇಬ್ಬರೂ ಬಹಿರಂಗಗೊಳಿಸಿದ್ದು ಲೈಂಗಿಕತೆಯ ಬಗ್ಗೆ ಮಾತನಾಡಿದ್ದಾರೆ.

ಹೌದು, ಬಾಲಿವುಡ್‌ನಲ್ಲಿ(Bollywood) ಪೀಕ್‌ನಲ್ಲಿರುವ ಸ್ಟಾರ್ ಜೋಡಿ ಅಂದರೆ ತಮನ್ನಾ ಭಾಟಿಯಾ- ವಿಜಯ್ ವರ್ಮಾ (Vijay Varma) ಅವರಾಗಿದ್ದು, ‘ಲಸ್ಟ್ ಸ್ಟೋರಿಸ್ 2’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸಂದರ್ಶನದಲ್ಲಿ ಮೊದಲ ಭೇಟಿ, ಲವ್, ಸಂಭೋಗ ಎಲ್ಲದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಲಸ್ಟ್ ಸ್ಟೋರಿಸ್ 2’ ಸಿನಿಮಾ ಸೆಟ್‌ನಲ್ಲಿ ವಿಜಯ್ ವರ್ಮಾ- ತಮನ್ನಾ ಭಾಟಿಯಾಗೆ (Tamannah Bhatia) ಪ್ರೇಮಾಂಕುರವಾಯಿತು. ಇಷ್ಟು ದಿನಗಳ ಕಾಲ ನಮ್ಮ ನಡುವೆ ಏನಿಲ್ಲ ಎಂದು ಹೇಳುತ್ತಿದ್ದ ಈ ಜೋಡಿ ಈಗ ತಮ್ಮ ಪ್ರೀತಿಯನ್ನ ಅಧಿಕೃತಗೊಳಿಸಿದ್ದಾರೆ.

ಅಂದಹಾಗೆ ಈಗ ವಿಜಯ್ ವರ್ಮಾ (Vijay Varma) ಅವರು ಸಂಭೋಗದ ವಿಚಾರದಲ್ಲಿ ನೇರವಾಗಿ ಮಾತನಾಡಿದ್ದಾರೆ. ಮೊದಲು ಭೇಟಿ ಆಗಿದ್ದು ಯಾವಾಗ? ಮೊದಲ ಭೇಟಿ ವೇಳೆ ಒಬ್ಬರ ಮೇಲೆ ಒಬ್ಬರಿಗೆ ಇದ್ದ ಅಭಿಪ್ರಾಯ ಸೇರಿ ಎಲ್ಲ ವಿಚಾರಗಳಲ್ಲಿ ಇವರು ಮುಕ್ತವಾಗಿ ಮಾತನಾಡಿದ್ದಾರೆ. ನ್ಯೂಸ್18 ಇಂಗ್ಲಿಷ್ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರ ರಿವೀಲ್ ಆಗಿದೆ.

ಸಂದರ್ಶನದಲ್ಲಿ ಮೊದಲ ಡೇಟ್ ಹೇಗಿತ್ತು, ಅದರಲ್ಲಿ ಲೈಂಗಿಕತೆ ಇತ್ತಾ’ ಎಂದು ಪ್ರಶ್ನೆ ಮಾಡಲಾಯಿತು. ತಮನ್ನಾ ‘ಬೋರಿಂಗ್ ಡೇಟ್’(Boring date) ಎಂದು ಉತ್ತರ ನೀಡಿದರು. ಇದಕ್ಕೆ ವಿಜಯ್ ವರ್ಮಾ ಉತ್ತರಿಸಿದ್ದು, ‘ಮೊದಲ ಡೇಟ್​ನಲ್ಲಿ ಯಾವುದೇ ಕಾಮ ಇರಲಿಲ್ಲ’ ಎಂದಿದ್ದಾರೆ. ಸುಜಯ್ ಕೂಡ ಇದಕ್ಕೆ ಉತ್ತರಿಸಿದ್ದಾರೆ. ‘ನಾನು ಮಧ್ಯಮ ವರ್ಗದಲ್ಲಿ ಹುಟ್ಟಿದ ವ್ಯಕ್ತಿ. ನಾವು ಎಲ್ಲದಕ್ಕೂ ಹೋರಾಡಬೇಕು. ನಮಗೆ ಯಾವುದೂ ಸುಲಭವಾಗಿ ಲಭ್ಯವಾಗುವುದಿಲ್ಲ’ ಎಂದು ನಕ್ಕಿದ್ದಾರೆ.

ಅಂದಹಾಗೆ ತಮನ್ನಾ- ವಿಜಯ್ ವರ್ಮಾ ‘ಲಸ್ಟ್ ಸ್ಟೋರಿಸ್ 2’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಗುರುವಾರ ಜೂನ್ 29ಕ್ಕೆ ಈ ಸಿನಿಮಾ ರಿಲೀಸ್ ಆಗಿದೆ. ಒಂದು ಸಿನಿಮಾದಲ್ಲಿ ನಾಲ್ಕು ಕಥೆಗಳಿವೆ. ಒಟಿಟಿ ಮೂಲಕ ಇದು ರಿಲೀಸ್ ಆಗಿದೆ. ತೆರೆಯ ಮೇಲೆ ವಿಜಯ್- ತಮನ್ನಾ ಜೋಡಿಯನ್ನ ಅಭಿಮಾನಿಗಳು ಮೆಚ್ಚಿಕೊಳ್ಳುತ್ತಾರಾ ಕಾದು ನೋಡಬೇಕಿದೆ.

Leave A Reply

Your email address will not be published.