Old payslip: ಮೊದಲ ವಿಶ್ವಕಪ್ ಗೆದ್ದುಕೊಟ್ಟ 1983ರ, ಟೀಂ ಇಂಡಿಯಾ ಆಟಗಾರರ ದಿನದ ಸಂಬಳ ಎಷ್ಟಿತ್ತು ಗೊತ್ತಾ? ವೈರಲ್ ಆಯ್ತು ಹಳೆಯ ಪೇಸ್ಲಿಪ್!!

Latest news Old payslip What is the salary of 1983 team India who won the first world cup

Old payslip: ಜೂನ್ 25, 1983… ಭಾರತೀಯ ಕ್ರಿಕೆಟ್‌ಗೆ(India cricket)ಹೊಸ ಭಾಷ್ಯ ಬರೆದ ದಿನ. ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ನಡೆದ ಪ್ರುಡೆನ್ಶಿಯಲ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್(World cup)ಎತ್ತಿ ಹಿಡಿದು ಹೊಸ ಇತಿಹಾಸ ಸೃಷ್ಟಿಸಿತು. ಕಪಿಲ್ ಬಳಗ(Kapil dev team) ಬಲಿಷ್ಠ ವೆಸ್ಟ್ ಇಂಡೀಸ್​ಗೆ ಮಣ್ಣು ಮುಕ್ಕಿಸಿ ಕ್ರಿಕೆಟ್ ಜಗತ್ತನ್ನು ನಿಬ್ಬೆರಗಾಗಿಸಿತ್ತು. ಈ ಅವಿಸ್ಮರಣೀಯ ಗೆಲುವಿಗೆ ಇಂದು ಬರೋಬ್ಬರಿ 40 ವರ್ಷಗಳು ಸಂದಿವೆ.

ಹೌದು, 1983ರ ಜೂನ್​ 25ರಂದು ಲಾರ್ಡ್ಸ್​ ಮೈದಾನದಲ್ಲಿ(Lards stadium) ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ(Final match) ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿಸಿದ್ದ ಕಪಿಲ್​ ದೇವ್​ ಬಳಗ, ಐತಿಹಾಸಿಕ ಲಾರ್ಡ್ಸ್​ ಮೈದಾನದಲ್ಲಿ ಪ್ರುಡೆನ್ಶಿಯಲ್​ ವಿಶ್ವಕಪ್​ ಟ್ರೋಫಿ ಎತ್ತಿಹಿಡಿದಿತ್ತು. ಭಾರತೀಯ ಕ್ರಿಕೆಟ್​ನ ಚಿತ್ರಣವನ್ನೇ ಬದಲಾಯಿಸಿದ ಆ ಗೆಲುವಿಗೆ ಇದೀಗ 40 ವರ್ಷ ಪೂರ್ಣಗೊಂಡಿದೆ. ಇನ್ನು ಆ ವೇಳೆ ಭಾರತೀಯ ಕ್ರಿಕೆಟ್ ಆಟಗಾರರ ಸಂಬಳ (Old payslip) ಎಷ್ಟಿತ್ತು ಗೊತ್ತ? ಅಂದಿನ ಸಂಬಳದ ರಿಸಿಪ್ಟ್ ಒಂದು ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ಅಂದಹಾಗೆ ಅಂದು ವಿಶ್ವಕಪ್ ಗೆಲುವಿನ ನಂತರ ಭಾರತ ಮೊದಲ ತನ್ನ ಮೊದಲ ಸರಣಿಯನ್ನು ಪಾಕಿಸ್ತಾನದ(Pakistan) ವಿರುದ್ಧ ಆಡಿತು. ಅದೂ ಕೂಡ ಈ ಹೆಮ್ಮೆಯ ತಂಡ ಪಾಕಿಸ್ತಾನದ ವಿರುದ್ಧ ಸೆಣೆಸಿದ್ದು ಪ್ರಧಾನ ಮಂತ್ರಿ ಪರಿಹಾರ ನಿಧಿ ಸಂಗ್ರಹಕ್ಕಾಗಿ. ಇದೀಗ ಬರೋಬ್ಬರಿ 40 ವರ್ಷಗಳ ನಂತರ ತಂಡದ ಆಟಗಾರರು ಈ ಪಂದ್ಯಕ್ಕೆ ಪಡೆದುಕೊಂಡಿದ್ದ ಸಂಭಾವನೆ ಎಷ್ಟು ಎಂಬುದು ಬಹಿರಂಗವಾಗಿದೆ. ಹಾಗಾದರೆ ತಂಡ ಪಡೆದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

ಅಂದು ಭಾರತೀಯ ಆಟಗಾರರಿಗೆ ಮೂರು ದಿನಗಳವರೆಗೆ 200 ರೂ. ನಂತೆ ದೈನಂದಿನ ಭತ್ಯೆಯಂತೆ, ಒಟ್ಟು 600 ರೂ. ಮೊತ್ತ ನೀಡಲಾಯಿತು. ಅದರ ಮೇಲೆ ಆಟಗಾರರ ಪಂದ್ಯದ ಶುಲ್ಕವು 1500 ರೂ. ಆಗಿತ್ತು. ಅಂತಿಮವಾಗಿ ಆಟಗಾರರು ನಿಗದಿಪಡಿಸಿದ 2100 ರೂ. ಮೊತ್ತವನ್ನು ಪಡೆದುಕೊಂಡರು. ಆ ಕಾಲದಲ್ಲಿ ಇದೊಂದು ದೊಡ್ಡ ಮೊತ್ತವೆಂದು ಪರಿಗಣಿಸಲಾಗಿತ್ತು ಎಂದು ತಿಳಿಸಿದ್ದಾರೆ. ಸದ್ಯ ಇದೀಗ ಪಾಕಿಸ್ತಾನದ ಮಾಜಿ ಆಟಗಾರ, ಸದ್ಯ ಕಾಮೆಂಟೇಟರ್ ಆಗಿರುವ ರಮೀಜ್ ರಾಜಾ(Rameez raja) 1983ರ ವಿಶ್ವಕಪ್ ವಿಜೇತ ಭಾರತದ ತಂಡದ ಪೇಸ್ಲಿಪ್ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ರಮೀಜ್ ರಾಜಾ ಅವರು 1986-87ರಲ್ಲಿ ಭಾರತ ಪ್ರವಾಸಕ್ಕಾಗಿ(Pakistan) ಪಾವತಿಸಿದ ಹಣದೊಂದಿಗೆ ಮೊತ್ತವನ್ನು ಹೋಲಿಸಿದ್ದಾರೆ. ಐದು ಟೆಸ್ಟ್ ಮತ್ತು ಆರು ಏಕದಿನ ಪಂದ್ಯಗಳನ್ನು ಆಡಿದ್ದಕ್ಕಾಗಿ 55000 ರೂ. ಸಂಭಾವನೆ ಪಡೆದಿದ್ದೇನೆ ಎಂದು ನೆನಪಿಸಿಕೊಂಡಿದ್ದಾರೆ.

ಇಷ್ಟೇ ಅಲ್ಲದೆ 1983ರ ಸಂದರ್ಭದಲ್ಲಿ ಬಿಸಿಸಿಐ(BCCI) ಖಜಾನೆಯಲ್ಲಿ ಹಣ ಇರಲಿಲ್ಲ. ಆಟಗಾರರಿಗೆ ವೇತನ ಕೊಡಲೂ ಸಾಧ್ಯವಾಗುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಹುಮಾನ ನೀಡಲು ಬಿಸಿಸಿಐ ಬಳಿ ಹಣವಿರಲಿಲ್ಲ. ಅಂತಹ ಸಂದರ್ಭದಲ್ಲಿ ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅದರಿಂದ ಬಂದಿದ್ದ ಹಣವನ್ನು ಭಾರತೀಯ ಕ್ರಿಕೆಟಿಗರಿಗೆ ನೀಡಲಾಗಿತ್ತು.

ಅಂದು ಬಿಸಿಸಿಐ ಅಧ್ಯಕ್ಷರಾಗಿದ್ದ ಕೇಂದ್ರ ಸಚಿವ ಎನ್‌ಕೆಪಿ ಸಾಳ್ವೆ(NKP Salve) ಮತ್ತು ಕ್ರಿಕೆಟ್ ನಿರ್ವಾಹಕರಾಗಿದ್ದ ರಾಜ್ ಸಿಂಗ್ ಡುಂಗರಪುರ್​​(Raj sing Dungarapur) ಅವರು ಲತಾ ಮಂಗೇಶ್ಕರ್​(Lata mangeshkar) ಅವರನ್ನು ಸಂಪರ್ಕಿಸಿ ಈ ಬಗ್ಗೆ ಹೇಳಿದ್ದರು. ರಾಜ್ ಸಿಂಗ್ ಅವರ ಆಪ್ತ ಸ್ನೇಹಿತೆ ಕೂಡ ಆಗಿದ್ದರು. ರಾಷ್ಟ್ರ ರಾಜಧಾನಿಯ ಜವಾಹರಲಾಲ್ ನೆಹರು(Javaharlal neharu) ಕ್ರೀಡಾಂಗಣದಲ್ಲಿ ದೇಶದ ಅತಿದೊಡ್ಡ ಕ್ರಿಕೆಟ್ ಅಭಿಮಾನಿಗಳಲ್ಲಿ ಒಬ್ಬರಾದ ಲತಾ ಮಂಗೇಶ್ಕರ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಿಂದ ಬಿಸಿಸಿಐ 20 ಲಕ್ಷ ಹಣ ಸಂಗ್ರಹಿಸಿತು. ತಂಡದ 11 ಸದಸ್ಯರಿಗೂ ತಲಾ 1 ಲಕ್ಷ ರೂಪಾಯಿ ನಗದು ಪ್ರಶಸ್ತಿ ನೀಡಿತು.

 

Leave A Reply

Your email address will not be published.