High Court Order: ಇಸ್ಲಾಂ ನಲ್ಲಿ ಮದ್ವೆಗೆ ಮುಂಚೆ ಮುಟ್ಲೂ ಬಾರ್ದು, ಕಿಸ್ಸೂ ಕೊಡುವಂತಿಲ್ಲ – ಹೈಕೋರ್ಟ್ ಹೊಸ ಆದೇಶ !

latest news intresting news In Islam can't touch and kiss before marriage High Court order

High Court Order: ಇಂದಿನ ದಿನದಲ್ಲಿ ಮದುವೆಗೂ ಮುನ್ನ ಯುವಕ-ಯುವತಿ ನಡುವೆ ಲೈಂಗಿಕತೆ, ಚುಂಬನ, ಸ್ಪರ್ಶ ಇವೆಲ್ಲಾ ಸಾಮಾನ್ಯವಾಗಿ ಬಿಟ್ಟಿದೆ. ಇಂತಹ ಸಾಕಷ್ಟು ಪ್ರಕರಣಗಳೂ ಬೆಳಕಿಗೆ ಬಂದಿದೆ. ಇದೀಗ ಇಸ್ಲಾಂನಲ್ಲಿ ವಿವಾಹಪೂರ್ವ ಲೈಂಗಿಕತೆ, ಚುಂಬನ, ಸ್ಪರ್ಶದ ಬಗ್ಗೆ ಹೈಕೋರ್ಟ್‌ ಮಹತ್ವದ ಅದೇಶ (High Court Order) ಹೊರಡಿಸಿದೆ.

‘ಇಸ್ಲಾಂನಲ್ಲಿ ವಿವಾಹಪೂರ್ವ ಲೈಂಗಿಕತೆ, ಚುಂಬನ, ಸ್ಪರ್ಶ ಹಾಗೂ ಗುರಿಯಿಟ್ಟು ನೋಡುವ ನೋಟ ಇವೆಲ್ಲದರ ನಿಷೇಧ ಇದೆ’ ಎಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ. ಹಾಗಾಗಿ ಮುಸ್ಲಿಂ ಜೋಡಿಯು ಮದ್ವೆಗೆ ಮುಂಚೆ ಮುಟ್ಲೂ ಬಾರ್ದು, ಕಿಸ್ಸೂ ಕೊಡುವಂತಿಲ್ಲ.

‘ಇಸ್ಲಾಂನಲ್ಲಿ ಅನೈತಿಕ ಸಂಬಂಧ ಹಾಗೂ ವಿವಾಹಪೂರ್ವ ಲೈಂಗಿಕ ಕ್ರಿಯೆ ನಡೆಸುವುದು ನಿಷಿದ್ಧ. ಅಂತೆಯೇ ವಿವಾಹದ ಮುನ್ನವೇ ಚುಂಬನ, ಗುರಾಯಿಸುವುದು ಹಾಗೂ ಸ್ಪರ್ಶಿಸುವುದು ಕೂಡ ಇಸ್ಲಾಂ ಪ್ರಕಾರ ಹರಾಮ್ ಆಗಿದೆ’ ಎಂದು ಕೋರ್ಟ್ ತೀರ್ಪು ನೀಡಿದೆ. ಈ ಮೂಲಕ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿರುವ ಇಸ್ಲಾಂ ಜೋಡಿಗೆ ಪರೋಕ್ಷವಾಗಿ ತೀರ್ಪು ನೀಡಿದೆ. ಇನ್ನು ಮುಂದೆ ಮದುವೆಗೂ ಮುನ್ನ ಇಸ್ಲಾಂ ಜೋಡಿ ಪರಸ್ಪರ ಸ್ಪರ್ಶಿಸುವಂತಿಲ್ಲ.

Leave A Reply

Your email address will not be published.