Casting Couch: ನನ್ನನ್ನೇ ‘ಮಂಚಕ್ಕೆ ಬಾ’ ಎಂದಿದ್ದರು ಇನ್ನು ನಟಿಯರ ಗತಿಯೇನು? ಕಾಸ್ಟಿಂಗ್ ಕೌಚ್ ಅನುಭವ ಬಿಚ್ಚಿಟ್ಟ ನಟ ರಾಜೀವ್ ಖಂಡೇಲ್ವಾಲ್ !

Latest national film industry news Rajeev Khandelwal reveals about casting couch in the industry

Rajeev Khandelwal: ಕಾಸ್ಟಿಂಗ್ ಕೌಚ್ (Casting Couch) ಎನ್ನುವುದು ಈಗ ರಹಸ್ಯಮಯ ಪದವಾಗಿ ಉಳಿದಿಲ್ಲ. ಬಣ್ಣದ ಜಗತ್ತಿನಲ್ಲಿ ಪ್ರತಿಭೆಗಳಿಗೆ ಸದಾ ವೇದಿಕೆ ಲಭಿಸಿಯೇ ಲಭಿಸುತ್ತದೆ ಎಂಬ ಮಾತುಗಳ ನಡುವೆಯೇ ನಟಿಯರಾದವರು ನಿರ್ದೇಶಕ (Director), ನಿರ್ಮಾಪಕರಿಗೆ ಬೇಕಾದ ಹಾಗೆ ಸಹಕರಿಸಿದಾಗ ಮಾತ್ರವೇ ಅವಕಾಶ ದೊರೆಯುತ್ತದೆ ಎಂಬ ಮಾತುಗಳನ್ನಾಡುವವರ ಸಂಖ್ಯೆ ಏನೂ ಕಮ್ಮಿ ಇಲ್ಲ. ಈ ಹಿಂದೆ ಕಾಸ್ಟಿಂಗ್ ಕೌಚ್ ಬಗ್ಗೆ ಅನೇಕ ಘಟನೆಗಳು ಚಿತ್ರರಂಗವಿರಲಿ ಅಥವಾ ಟಿವಿ ಧಾರಾವಾಹಿ (Serial) ಕ್ಷೇತ್ರವಿರಲಿ ಸಾಕಷ್ಟು ಕೇಳಿಬಂದಿವೆ.

ಕಾಸ್ಟಿಂಗ್​ ​ ಕೌಚ್​ (cast couching) ಎನ್ನುವುದು ಕೆಲ ವರ್ಷಗಳಿಂದ ಸಿನಿರಂಗದಲ್ಲಿ ಬಹಳ ಸದ್ದು ಮಾಡಿದ ಶಬ್ದ. 2018 ರಲ್ಲಿ ನಟಿ ಶ್ರುತಿ ಹರಿಹರನ್​ ಅವರು ತಮಗೆ ಆಗಿರುವ ಕಹಿ ಘಟನೆಗಳನ್ನು ಹಂಚಿಕೊಂಡ ನಂತರ ‘ ಮೀ ಟೂ ‘ ಎಂಬ ದೊಡ್ಡ ಅಭಿಯಾನವೇ ಶುರುವಾಯಿತು. ಅಲ್ಲಿಂದೀಚೆಗೆ ಹಲವು ನಟಿಯರು ಮುನ್ನೆಲೆಗೆ ಬಂದು ತಮ್ಮ ಮೇಲಾಗಿದ್ದ ಲೈಂಗಿಕ ದೌರ್ಜನ್ಯಗಳ ಕುರಿತು ಒಬ್ಬೊಬ್ಬರಾಗಿ ‘ ನಾನೂ, ನಾನೂ ‘ ಎನ್ನುತ್ತಾ ಬಂದು ಹೇಳಿಕೊಂಡರು. ಅಲ್ಲಿಂದ ಮೀ ಟೂ ಹಾಗೂ ಕಾಸ್ಟಿಂಗ್​ ​ ಕೌಚ್​ ಎನ್ನುವುದು ದೊಡ್ಡ ಸ್ವರೂಪ ಪಡೆದುಕೊಂಡಿತು.

ಕಾಸ್ಟಿಂಗ್​ ​ ಕೌಚ್​ ನಟಿಯರ ಮೇಲೆ ಮಾತ್ರವಲ್ಲದೆ, ನಟರು ಕೂಡ ಇದನ್ನು ಎದುರಿಸಿದ್ದಾರೆ. ಇತ್ತೀಚೆಗೆ ಖ್ಯಾತ ನಟ, ‘ಉದರಿಯಾನ್’ ಹಿಂದಿ ಧಾರಾವಾಹಿ ಮೂಲಕ​ ಹೀರೋ (Hero) ಎನಿಸಿಕೊಂಡಿರುವ ನಟ ಅಂಕಿತ್​ ಗುಪ್ತಾ ತಮಗಾಗಿರುವ ಕಹಿ ಅನುಭವಗಳನ್ನು ತೆರೆದಿಟ್ಟಿದ್ದರು. ಅಲ್ಲದೆ, ನಾಯಕನಟ ಮತ್ತು ಬಿಜೆಪಿ ಸಂಸದ ರವಿ ಕಿಶನ್​ ಅವರು (Ravi Kishan) ತಮ್ಮ ಕಾಸ್ಟಿಂಗ್​ ​ ಕೌಚ್​ ಅನುಭವವನ್ನು ಶೇರ್​ ಮಾಡಿದ್ದರು.

ಇದೀಗ ಬಾಲಿವುಡ್‌ (Bollywood) ಹೀರೋ ರಾಜೀವ್ ಖಂಡೇಲ್ವಾಲ್ (Rajeev Khandelwal) ಅವರು ಈ ಹಿಂದೆ ತಾವು ಎದುರಿಸಿದ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಚಾನ್ಸ್‌ಗಾಗಿ ‘ಮಂಚಕ್ಕೆ ಬಾ’ ಎಂದಿರೋ ಘಟನೆ ಬಗ್ಗೆ ಯುವ ನಟ ರಾಜೀವ್ ಹಂಚಿಕೊಂಡಿದ್ದಾರೆ.

ನಿರ್ದೇಶಕರೊಬ್ಬರು ತಮ್ಮನ್ನು ಮಂಚಕ್ಕೆ ಕರೆದಿದ್ದರು. ಸಾರಿ ಬಾಸ್, ನೀವು ಹೇಳಿದ ಹಾಗೆ ನಾನು ಮಾಡಲಾರೆ ಎಂದು ಹೇಳಿ ಅವರು ಮಾತನಾಡುತ್ತಿದ್ದ ಅಸಭ್ಯ ಮಾತುಗಳಿಗೆ ಅವರಿಗೆ ಬೈದು ಅಲ್ಲಿಂದ ಹೊರಗೆ ಬಂದೆ. ನನಗೆ ಅದೊಂದು ಕೆಟ್ಟ ಅನುಭವ ಎಂದು ರಾಜೀವ್ ಈ ಹಿಂದೆ ತಮಗಾದ ಅನುಭವದ ಬಗ್ಗೆ ಹೇಳಿಕೊಂಡರು. ಆದರೆ, ಆ ನಿರ್ದೇಶಕರ ಹೆಸರು ಮಾತ್ರ ಹೇಳಲಿಲ್ಲ.

ಇದೇ ವೇಳೆ ಪುರುಷರಿಗೇ ಹೀಗಾದರೆ ಇನ್ನು ನಟಿಯರ ಗತಿಯೇನು? ಎಂದು ಅವರು ಪ್ರಶ್ನಿಸಿದ್ದಾರೆ. ಮಹಿಳೆಯರು ಅಂತಹ ಸಂದರ್ಭಗಳನ್ನು ಪುರುಷರಂತೆ ನಿಭಾಯಿಸಲು ಸಾಧ್ಯವಿಲ್ಲ. ಪುರುಷರು ಇದನ್ನು ಧೈರ್ಯದಿಂದ ಎದುರಿಸಬಹುದು. ಆದರೆ, ಕೆಲವೊಮ್ಮೆ ನಟಿಯರು ಅಂತಹ ಸಂದರ್ಭಗಳಿಗೆ ಮಣಿಯಲೇ ಬೇಕಾಗುತ್ತದೆ. ಅವರಿಗೆ ಬೇರೆ ವಿಧಿ ಇರುವುದಿಲ್ಲ. ತಾವು ಅನುಭವಿಸಿದ ನೋವನ್ನು ಅವರು ಹೊರಗೆ ಹೇಳುವುದಿಲ್ಲ ಎಂದರು.

ಈಗ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಿಂದೆ ಚಿತ್ರರಂಗದಲ್ಲಿ ಪುರುಷರ ಪ್ರಾಬಲ್ಯದಿಂದ ಹುಡುಗಿಯರು ತೊಂದರೆ ಅನುಭವಿಸುತ್ತಿದ್ದರು. ಆದರೆ, ಈಗ ಹಾಗಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ ಎಂದಿದ್ದಾರೆ. ಅಲ್ಲದೆ, ಚಿತ್ರರಂಗದಲ್ಲಿ ಮಹಿಳೆಯರ ರಕ್ಷಣೆಯ ಬಗ್ಗೆಯೇ ಸದಾ ಮಾತನಾಡುತ್ತಾರೆ. ಪುರುಷರ ರಕ್ಷಣೆಯ ಬಗ್ಗೆ ಯಾರಿಗೂ ಕಾಳಜಿಯಿಲ್ಲ ಎಂದೂ ರಾಜೀವ್ ಹೇಳಿದ್ದಾರೆ.

ಸಾಕಷ್ಟು ಹಿಂದಿ ಸಿನಿಮಾಗಳಲ್ಲಿ ಕಿರುತೆರೆ ಕಾರ್ಯಕ್ರಮಗಳಲ್ಲಿ ರಾಜೀವ್ ಕೆಲಸ ಮಾಡಿದ್ದಾರೆ. ಕಿರುತೆರೆ ನಿರೂಪಕನಾಗಿ ಗಾಯಕನಾಗಿಯೂ ಗುರ್ತಿಸಿಕೊಂಡಿದ್ದಾರೆ. ನಟನಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಆಮೀರ್, ಸೈತಾನ್, ವಿಲ್ ಯು ಮ್ಯಾರಿ, ಫೀವರ್, ಪ್ರಣಾಮ್, ಸಲಾಂ ವೆಂಕಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ರಾಜೀಲ್ ಖಂಡೇಲ್ವಾಲ್ ನಟಿಸಿದ್ದಾರೆ. 90ರ ದಶಕದ ಕೊನೆಗೆ ಕಿರುತೆರೆ ಬಂದ ಇವರು ಕೆಲ ಧಾರಾವಾಹಿಗಳಲ್ಲಿ ನಟಿಸಿದರು. ನಂತರ ಸಚ್‌ಕೆ ಸಾಮ್ನಾ, ಸೂಪರ್ ಕಾರ್ಸ್, ಝಜ್‌ಬಾತ್ ರೀತಿಯ ಟಾಕ್‌ಶೋ, ರಿಯಾಲಿಟಿ ಶೋಗಳ ನಿರೂಪಕರಾಗಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: The Kerala Story : ಒಟಿಟಿ ಸಂಸ್ಥೆಗಳು ‘ದಿ ಕೇರಳ ಸ್ಟೋರಿ’ ಸಿನಿಮಾ ಖರೀದಿಸುತ್ತಿಲ್ಲ ; ಇದರ ಹಿಂದಿದೆಯೇ ಷಡ್ಯಂತ್ರ?- ಚಿತ್ರತಂಡ ಏನು ಹೇಳಿತು ?!

Leave A Reply

Your email address will not be published.