North Korea: ಆತ್ಮಹತ್ಯೆಯನ್ನೂ ನಿಷೇದಿಸಿದ ಉತ್ತರ ಕೊರಿಯಾ !! ಯಾರಾದರೂ ಸೂಸೈಡ್ ಮಾಡಿಕೊಂಡ್ರೆ ಶಿಕ್ಷೆ ಮಾತ್ರ ಇವರಿಗೆ!!
Latest international news North Korea news Kim Jong orders North Korean people to stop killing themselves after suicide rate rise
Sucide ban in North Korea : ತನ್ನ ವಿಚಿತ್ರ ಕಾನೂನು, ರೂಲ್ಸ್ ಗಳ ಮೂಲಕ ಸದಾ ಸುದ್ಧಿಯಲ್ಲಿರೂ ಉತ್ತರ ಕೊರಿಯಾ(North Korea) ದೇಶವೀಗ ಮತ್ತೆ ಅಂತದೇ ಒಂದು ನಿಯಮವನ್ನು ಜಾರಿಮಾಡೋ ಮೂಲಕ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಹೌದು, ಉತ್ತರ ಕೊರಿಯಾ ಸರ್ವಾಧಿಕಾರಿ(Dictatorship) ತನಗನಿಸಿದ ಕೆಲವು ಹುಚ್ಚುಚ್ಚು ನೀತಿಗಳನ್ನು ಜಾರಿಗೆ ತಂದು ಜನರನ್ನು ಪಚೀತಿಗೆ ಸಿಲುಕಿಸುತ್ತಿರುತ್ತಾನೆ. ಇದೀಗ ಮತ್ತೊಂದು ಅಂತದೇ ಕಾನೂನನ್ನು ಜಾರಿ ಮಾಡಿದ್ದು ಆತ್ಮಹತ್ಯೆ ವಿಚಾರವಾಗಿ ವಿಚಿತ್ರವಾದ ರೂಲ್ಸ್(Rules) ತಂದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ.
ಹೌದು, ಉತ್ತರ ಕೊರಿಯಾದಲ್ಲಿ ದಿನೇ ದಿನೇ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಇದರಿಂದ ಎಚ್ಚೆತ್ತುಕೊಂಡಿರುವ ಕಿಮ್ ಜಾಂಗ್ ಉನ್ ದೇಶದಲ್ಲಿ ಆತ್ಮಹತ್ಯೆ(sucide) ಪ್ರಮಾಣ ಕಡಿಮೆ ಮಾಡಲು ಸ್ಥಳೀಯ ಅಧಿಕಾರಿಗಳಿಗೆ ಆದೇಶವನ್ನು ಹೊರಡಿಸಿದ್ದಾರೆ. ಈ ಕುರಿತು ಆದೇಶ ಹೊರಡಿಸಿರುವ ಕಿಮ್ ಜಾಂಗ್ ಉನ್(Kim Jong un) ಆತ್ಮಹತ್ಯೆ ಮಾಡಿಕೊಳ್ಳುವುದು ಸಮಾಜವಾದದ ವಿರುದ್ಧದ ದೇಶದ್ರೋಹ(Sucide ban in North Korea) ಎಂದು ಹೇಳಿದ್ದಲ್ಲದೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದವರನ್ನು ಹಿಡಿದು ಕೊಲ್ಲುವುದಾಗಿ ಎಚ್ಚರಿಕೆ ನೀಡಿದ್ದಾನೆ.
ಇಷ್ಟೇ ಅಲ್ಲದೆ ಈ ಕುರಿತ ಸಭೆಯಲ್ಲಿ, ತಮ್ಮ ಪ್ರದೇಶದಲ್ಲಿ ಆತ್ಮಹತ್ಯೆಗಳನ್ನು ತಡೆಯಲು ವಿಫಲವಾದ ಸ್ಥಳೀಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವಂತೆ ಆದೇಶಿಸಿದ್ದಾನೆ. ಈ ಬಗ್ಗೆ ಮಾತನಾಡಿದ ಅಧಿಕಾರಿಯೊಬ್ಬರು ‘ಸಾವಿನ ನಿಖರ ಅಂಕಿ ಅಂಶಗಳನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಸರ್ಕಾರವು ಡೇಟಾವನ್ನು ಗೌಪ್ಯವಾಗಿಟ್ಟಿದೆ. ಆದರೆ ಗುಪ್ತಚರ ಇಲಾಖೆಯ ಅಂದಾಜಿನ ಪ್ರಕಾರ, ಉತ್ತರ ಕೊರಿಯಾದಲ್ಲಿ ಆತ್ಮಹತ್ಯೆಗಳು ಹಿಂದಿನ ವರ್ಷಕ್ಕೆ ಹೋಲಿಸಿದರೆ ಸುಮಾರು 40% ರಷ್ಟು ಹೆಚ್ಚಾಗಿದೆ’ ಎಂದು ಹೇಳಿದ್ದಾರೆ.
ಅಂದಹಾಗೆ ವರದಿಯ ಪ್ರಕಾರ, ದೇಶದಲ್ಲಿ ಬಡತನ ಮತ್ತು ಹಸಿವಿನಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಸತ್ತವರ ನಿಖರವಾದ ಅಂಕಿಅಂಶವನ್ನು ಇನ್ನೂ ಬಹಿರಂಗಪಡಿಸಿಲ್ಲ, ಅಂದಾಜಿನ ಪ್ರಕಾರ ಉತ್ತರ ಕೊರಿಯಾದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಆತ್ಮಹತ್ಯೆಗಳ ಸಂಖ್ಯೆಯಲ್ಲಿ ಸುಮಾರು 40 ಪ್ರತಿಶತದಷ್ಟು ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Google Account: ಕೆಲವೇ ದಿನಗಳಲ್ಲಿ ಡಿಲೀಟ್ ಆಗಲಿದೆ ನಿಮ್ಮ gmail ಅಕೌಂಟ್, ತಕ್ಷಣ ಹೀಗೆ ಮಾಡಿ ಅಕೌಂಟ್ ಉಳಿಸಿಕೊಳ್ಳಿ !