Babita Phogat: ಬ್ರಿಜ್ ಭೂಷಣ್ ವಿರೋಧಿ ಕುಸ್ತಿ ಹೋರಾಟಗಾರರಿಗೆ ಭಾರೀ ಹಿನ್ನಡೆ, ಸಾಕ್ಷಿ ಕಾಂಗ್ರೆಸ್ ಕೈಗೊಂಬೆ ಎಂದ ಬಬಿತಾ ಪೊಗಟ್ !

Latest national news wrestler protest Sakshi Malik Congress puppet the time has come to reveal the real motive says Babita Phogat

Babita Phogat: ಭಾರತದ ಕುಸ್ತಿ ಫೆಡರೇಶನ್​ನ ನಿರ್ಗಮಿತ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್(Brij Bhushan Sharan Singh) ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಬಂಧನಕ್ಕೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಕುಸ್ತಿಪಟುಗಳ(Wrestlers Protest) ಮಧ್ಯೆ ಇದೀಗ ಕಿತ್ತಾಟವೊಂದು ಆರಂಭವಾಗಿದೆ. ಕುಸ್ತಿಪಟುಗಳು ತಮ್ಮ ತಮ್ಮಲ್ಲೇ ಭಿನ್ನಾಭಿಪ್ರಾಯ ಹೊಂದಿ ರಾಜಕೀಯ ಆರೋಪಗಳನ್ನು ಮಾಡಿಕೊಳ್ಳುತ್ತಿದ್ದು, ಎಲ್ಲರೂ ಅಚ್ಚರಿಪಡುವಂತೆ ಮಾಡಿದೆ.

 

ಹೌದು, ಬ್ರಿಜ್ ಭೂಷಣ್ ಸಿಂಗ್(Brij Bhushan Sharan Singh) ವಿರುದ್ಧ ಹೋರಾಟ ನಡೆಸುತ್ತಿರುವ ಕುಸ್ತಿಪಟುಗಳ(Wrestlers Protest) ಮಧ್ಯೆ ಇದೀಗ ರಾಜಕೀಯ ಕಿತ್ತಾಟವೊಂದು ಆರಂಭವಾಗಿದೆ. ಮಾಜಿ ಕಾಮನ್​ವೆಲ್ತ್​ ಗೇಮ್​ ಚಿನ್ನದ ಪದಕ ವಿಜೇತೆ, ಬಿಜೆಪಿ ಪಕ್ಷದ ಕಾರ್ಯಕರ್ತೆ ಬಬಿತಾ ಫೋಗಟ್(Babita Phogat) ಅವರು ಟ್ವೀಟ್​ವೊಂದನ್ನು ಮಾಡಿ ಸಾಕ್ಷಿ ಮಲಿಕ್(sakshi malik) ಅವರು “ಕಾಂಗ್ರೆಸ್​ನ ಕೈಗೊಂಬೆ” ಎಂದು ಆರೋಪಿಸಿದ್ದಾರೆ. ಈ ಮೂಲಕ ಬ್ರಿಜ್ ಭೂಷಣ್ ವಿರೋಧಿ ಕುಸ್ತಿ ಹೋರಾಟಗಾರರಿಗೆ ಭಾರೀ ಹಿನ್ನಡೆ ಆದಂತಾಗಿದೆ.

ಈ ಕುರಿತು ಟ್ವೀಟ್​ ಮಾಡಿರುವ ಬಬಿತಾ ಅವರು “ನನ್ನ ಸಹೋದರಿ ಸಾಕ್ಷಿ ಮತ್ತು ಅವಳ ಗಂಡನ ವಿಡಿಯೋ ನೋಡುವಾಗ ನನಗೆ ತುಂಬಾ ಬೇಸರವಾಯಿತು. ಜತೆಗೆ ನಗು ಕೂಡಾ ಬಂತು. ಈ ವಿಡಿಯೊದಲ್ಲಿ ಸಾಕ್ಷಿ ಮಲಿಕ್(Sakshi mallik) ತೋರಿಸಿದ ಅನುಮತಿ ಪತ್ರದಲ್ಲಿ ನನ್ನ ಸಹಿ ಇಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಗೌರವಾನ್ವಿತ ಪ್ರಧಾನಿ ಮೋದಿ ಮತ್ತು ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ನಂಬಿಕೆ ಇದೆ. ಖಂಡಿತವಾಗಿಯೂ ಸತ್ಯ ಹೊರಬರುತ್ತದೆ. ಒಬ್ಬ ಮಹಿಳಾ ಆಟಗಾರ್ತಿಯಾಗಿ ನಾನು ದೇಶದ ಎಲ್ಲ ಆಟಗಾರ್ತಿಯರ ಜತೆಗಿರುತ್ತೇನೆ, ಮುಂದೆಯೂ ಕೂಡ ಇರುತ್ತೇನೆ. ಆದರೆ ಸಾಕ್ಷಿ ಅವರು ಈ ಪ್ರಕರಣದಲ್ಲಿ ಕಾಂಗ್ರೆಸ್​ನ ಕೈಗೊಂಬೆಯಾಗಿದ್ದಾರೆ ಎಂದು ನನಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ” ಎಂದು ಹೇಳಿದ್ದಾರೆ.

ಅಲ್ಲದೆ ನಿಮ್ಮ ಉದ್ದೇಶಗಳ ಬಗ್ಗೆ ದೇಶದ ಜನರಿಗೆ ಸ್ಪಷ್ಟನೆ ಸಿಗುತ್ತಿದೆ. ಹೊಸ ಸಂಸತ್(New Parliament) ಉದ್ಘಾಟನೆ ಸಂದರ್ಭ ನೀವು ನಡೆಸಿರುವ ಪ್ರತಿಭಟನೆ ಮತ್ತು ಗಂಗಾ ನದಿಯಲ್ಲಿ ಪದಕಗಳನ್ನು ವಿಸರ್ಜಿಸುವ ಬೆದರಿಕೆ ಹಾಕಿದ್ದು ದೇಶಕ್ಕೆ ಮುಜುಗರ ಉಂಟುಮಾಡಿದೆ. ನೀವು ಕಾಂಗ್ರೆಸ್‌ನ ಕೈಗೊಂಬೆಗಳು ಎಂಬುದು ಈಗ ದೇಶದ ಜನರಿಗೆ ಮನದಟ್ಟಾಗುತ್ತಿದೆ. ನಿಮ್ಮ ನಿಜವಾದ ಉದ್ದೇಶ ಏನು ಎಂಬುದನ್ನು ಬಹಿರಂಗಪಡಿಸಬೇಕಾದ ಸಮಯ ಬಂದಿದೆ ಎಂದು ಬಬಿತಾ ಫೋಗಟ್ ತಿರುಗೇಟು ನೀಡಿದ್ದಾರೆ.

ಅಂದಹಾಗೆ ರಾಜಕೀಯ ಪ್ರೇರಿತವೆಂದು ಭಾರೀ ಟೀಕೆಗೆ ಗುರಿಯಾಗಿದ್ದ ತಮ್ಮ ಹೋರಾಟದ ಬಗ್ಗೆ ಶನಿವಾರ ಕುಸ್ತಿಪಟುಗಳು ಸ್ಪಷ್ಟನೆ ನೀಡಿದ್ದರು. ನಮ್ಮ ಹೋರಾಟ ರಾಜಕೀಯ ಪ್ರೇರಿತವಲ್ಲ. ಕೇಂದ್ರ ಸರ್ಕಾರದ(Central Government) ವಿರುದ್ಧವೂ ಅಲ್ಲ. ನಮ್ಮ ಹೋರಾಟ ಬ್ರಿಜ್ ಭೂಷಣ್ ವಿರುದ್ಧ ಮಾತ್ರ ಎಂದು ಒಲಿಂಪಿಕ್ಸ್(Olympics) ಪದಕ ವಿಜೇತೆ ಸಾಕ್ಷಿ ಮಲಿಕ್ ಹಾಗೂ ಅವರ ಪತಿ ಸತ್ಯವರ್ತ್ ಕಡಿಯಾನ್ ಹೇಳಿದ್ದರು.

ಈ ಬಗ್ಗೆ 11 ನಿಮಿಷಗಳ ಸುದೀರ್ಘ ವೀಡಿಯೋ ಹಂಚಿಕೊಂಡಿದ್ದ ಸಾಕ್ಷಿ ಮಲಿಕ್ ತಮ್ಮ ಹೋರಾಟದ ಬಗ್ಗೆ ಸ್ಪಷ್ಟನೆ ನೀಡುತ್ತಾ, ನಮ್ಮ ಹೋರಾಟದ ಬಗ್ಗೆ ವದಂತಿಗಳನ್ನು ಹರಡಲಾಗುತ್ತಿದೆ. ನಮ್ಮ ಹೋರಾಟ ರಾಜಕೀಯ ಪ್ರೇರಿತವಲ್ಲ. ಕಳೆದ ಜನವರಿಯಲ್ಲಿ ನಾವು ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಇಳಿದಾಗ ಇಬ್ಬರು ಬಿಜೆಪಿ ನಾಯಕರನ್ನೇ ಕೋರಿ ಪೊಲೀಸರಿಂದ ಅನುಮತಿ ಪಡೆದುಕೊಂಡಿದ್ದೆವು. ನಾವು ಪ್ರತಿಭಟನೆಗೆ ನಡೆಸಲು ಇಬ್ಬರು ಬಿಜೆಪಿ ನಾಯಕರಿಂದ ಪೂರ್ವಾನುಮತಿ ಪಡೆದಿದ್ದೇವೆ, ಅದಕ್ಕೆ ನಮ್ಮ ಬಳಿ ಪುರಾವೆಗಳಿವೆ ಎಂದು ದಾಖಲೆಯನ್ನು 11 ನಿಮಿಷದ ವಿಡಿಯೋದಲ್ಲಿ ತೋರಿಸಿದ್ದರು. ಆದರೆ ಈ ವೇಳೆ ಬಬಿತಾ ಅವರು ಸ್ಪಷ್ಟನೆ ನೀಡುವ ವೇಳೆ ಸಾಕ್ಷಿ ಅವರನ್ನು ಕಾಂಗ್ರೆಸ್​ನ ಕೈಗೊಂಬೆ ಎಂದು ಹೇಳಿದ್ದು ಭಾರೀ ಚರ್ಚೆ ಗೆ ಗ್ರಾಸವಾಗಿದೆ. ಯಾವುದು ಸತ್ಯ, ಯಾವುದು ಸುಳ್ಳು ಎಂಬುದು ಇನ್ನು ಅರಿಯಬೇಕಷ್ಟೆ.

ಇದನ್ನೂ ಓದಿ: Adhar card photo issues : ಅಶ್ಲೀಲ ಪದವಿರುವ ಬಟ್ಟೆ ಹಾಕಿ ಆಧಾರ್ ಕಾರ್ಡ್ ಫೋಟೋ ಅಪ್ಲೋಡ್ ಮಾಡಿಸಿದ ಯುವತಿ!! ತಮ್ಮದೇ ಶೈಲಿಯಲ್ಲಿ ಕಮೆಂಟಿಸಿದ ನೆಟ್ಟಿಗರು!!

Leave A Reply

Your email address will not be published.