Shivamogga: ಶಿವಮೊಗ್ಗದಲ್ಲಿ ಯುವಕ-ಯುವತಿಯ ಕಾಮದಾಟ : ಎಬಿವಿಪಿ ಅಧ್ಯಕ್ಷ ಅರೆಸ್ಟ್

Shivamogga news Thirthahalli student union leader arrested for girls obscene videos viral

Shivamogga : ತೀರ್ಥಹಳ್ಳಿ (Shivamogga) ಪ್ರತಿಷ್ಠ ಕಾಲೇಜಿನ ಯುವಕ-ಯುವತಿಯ ಕಾಮದಾಟ ಕುರಿತ ವಿಡಿಯೋ ವೈರಲ್‌ ಕೇಸ್‌ ಸಂಬಂಧಿಸಿ ಎಬಿವಿಪಿ ಅಧ್ಯಕ್ಷ ಅರೆಸ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ.

ಬಂಧಿತ ಎಬಿವಿಪಿ ಅಧ್ಯಕ್ಷ ತೀರ್ಥಹಳ್ಳಿಯ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದನು. ಜತೆಗೆ ಎಬಿವಿಪಿ ಸಂಘಟನೆಯಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದನು. ತೀರ್ಥಹಳ್ಳಿ ಪ್ರತಿಷ್ಠಿತ ಕಾಲೇಜಿನ ಯುವಕ-ಯುವತಿಯ ಜತೆ ಈತ ಸಲುಕೆಯಿಂದ ಇರುತ್ತಿದ್ದನು. ಇದೀಗ ಈ ಕುರಿತ ಅಶ್ಲೀಲ ‌ವಿಡಿಯೋ, ಪೋಟೋ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿರುವ ಸಂಬಂಧಿಸಿ ವಿದ್ಯಾರ್ಥಿ ನಾಯಕನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಅಶ್ಲೀಲ ‌ವಿಡಿಯೋ, ಪೋಟೋ ವೈರಲ್‌ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆ 67 (E) ಅಡಿ ಶಿಕ್ಷಾರ್ಹ ಅಪರಾಧ. ಈ ಆರೋಪ ಸಾಬೀತಾದರೆ 5 ವರ್ಷದವರೆಗೆ ಜೈಲು ಮತ್ತು ದಂಡ ವಿಧಿಸಲಾಗುತ್ತದೆ ಶಿವಮೊಗ್ಗ ಸಿಇಎನ್‌ ಪೊಲೀಸ್‌ ಠಾಣೆ ಪ್ರಕಟಣೆಯನ್ನು ತಿಳಿಸಿದೆ.

ಅಲ್ಲದೇ ಈ ವಿಚಾರ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಯಾವುದೇ ಸಂಘಟನೆಯ ಮುಖಂಡನೇ ಆಗಿರಲಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲೇಬೇಕು. ಮುಂದಿನ ದಿನಗಳಲ್ಲಿ ಶಾಲಾ ಶಿಕ್ಷಕರ ಜತೆ ಸಭೆ ನಡೆಸಿ ಮುಂದಿನ ತೀರ್ಮನ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ ಘೋರ ದುರಂತ : ಶ್ರೀನಿವಾಸ ಸಾಗರ ಜಲಾಶಯಕ್ಕೆ ಈಜಲು ತೆರಳಿದ ಯುವಕ ನೀರು ಪಾಲು

Leave A Reply

Your email address will not be published.