Baijnath singh: ಅಬ್ಬಬ್ಬಾ.. ಕಾಂಗ್ರೆಸ್ ಸೇರ್ಪಡೆಗಾಗಿ 300ಕಿಮೀ ನಿಂದ, 400 ಕಾರುಗಳ ಬೆಂಗಾವಲಲ್ಲಿ ಬಂದ ಬಿಜೆಪಿ ನಾಯಕ!! ಕಾರುಗಳ ಸೈರನ್ ಗೆ ತಂಡಾ ಹೊಡೆದ ಜನ!!

Latest national political news Madhya Pradesh BJP leader Baijnath Singh returns to congress in 400 car convoy with sirens

Baijnath singh : ಸಿನಿಮಾಗಳಲ್ಲಿ ವಿಲನ್(Vilan) ಅಥವಾ ಹೀರೋ(Hero) ಪ್ರವೇಶದ ವೇಳೆ ಒಂದರ ಹಿಂದೆ ನೂರಾರು ಕಾರುಗಳು ರೊಯ್ಯನೆ ಸಾಗುವುದನ್ನು ನೋಡಿರುತ್ತೀರಿ. ಅಲ್ಲದೆ ವಾಸ್ತವದಲ್ಲಿ ಪಿಎಂ(PM), ಸಿಎಂ(CM) ಬರುವಾಗಲೂ ಹತ್ತಾರು ಕಾರುಗಳು ಬರುವುದನ್ನು ಕಂಡಿರಬಹುದು. ಆದರೆ ಒಬ್ಬ ವ್ಯಕ್ತಿ ಒಂದು ಪಕ್ಷ ಸೇರಲು ನೂರಾರು ಕಾರುಗಳಲ್ಲಿ ಬರುವುದನ್ನೇನಾದರೂ ನೋಡಿದ್ದೀರಾ? ನೋಡುವುದು ಬಿಡಿ ಊಹೆ ಕೂಡ ಮಾಡಿರಲಿಕ್ಕಿಲ್ಲ. ಆದ್ರೆ ಇಲ್ಲೊಂದೆಡೆ ಬರೋಬ್ಬರಿ 400 ಕಾರುಗಳು ಬೆಂಗಾವಲಾಗಿ ತೆರಳಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.

ಹೌದು, 2020ರಲ್ಲಿ ಮಧ್ಯಪ್ರದೇಶ(Madhyapradesh) ಕಾಂಗ್ರೆಸ್‌ನಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ(Jyotiraditya sindhya) ನೇತೃತ್ವದಲ್ಲಿ ಬಂಡಾಯ ಎದ್ದಿತ್ತು. ಆಗ ಅವರೊಂದಿಗೆ ಶಿವಪುರಿಯ(Shivapuri) ಪ್ರಭಾವಿ ನಾಯಕ ಬೈಜನಾಥ್ ಸಿಂಗ್(Baijnath singh ) ಕೂಡ ಬಿಜೆಪಿ ಸೇರಿಕೊಂಡಿದ್ದರು. ಈಗ ಬೈಜನಾಥ್ ಅವರು ಮರಳಿ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಆದರೆ ಅವರು ತಮ್ಮ ‘ಮರಳಿ ಮನೆಗೆ’ ಕಾರ್ಯಕ್ರಮವನ್ನು ನಡೆಸಿದ ರೀತಿ ಚರ್ಚೆಗೆ ಗ್ರಾಸವಾಗಿದೆ.

ಯಾಕೆಂದರೆ ಮಧ್ಯಪ್ರದೇಶದ ಶಿವಪುರಿಯಿಂದ ಭೋಪಾಲ್‌ಗೆ(Bhopal) ಸುಮಾರು 300 ಕಿಮೀ ಅಂತರವನ್ನು ಅವರು ಕ್ರಮಿಸುವಾಗ ಬರೋಬ್ಬರಿ 400 ಕಾರುಗಳು ಬೆಂಗಾವಲಾಗಿ ತೆರಳಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.

ಅಂದಹಾಗೆ ವೈಜನಾಥ್‌ ಸಿಂಗ್‌ ಯಾದವ್‌ ಅ ವರಿದ್ದ ಕಾರು 300 ಕಿ.ಮೀ ಸಂಚರಿಸುವವರೆಗೂ 400 ವಾಹನಗಳು ಹಿಂಬಾಲಿಸಿವೆ. ಎಲ್ಲ ವಾಹನಗಳೂ ಸೈರನ್‌ ಬಾರಿಸುತ್ತ ಬಂದಿದ್ದು, ತೆಲುಗು ಸಿನಿಮಾದ ದೃಶ್ಯವನ್ನೇ ನೆನಪಿಸುವಂತಿತ್ತು. ಇನ್ನು, ದಾರಿಯುದ್ದಕ್ಕೂ ವಾಹನಗಳು ಹಾಗೂ ಸೈರನ್‌ ಸದ್ದು ಕೇಳಿದ ಜನ ಬೇಸತ್ತುಹೋಗಿದ್ದಾರೆ. ಮಧ್ಯಪ್ರದೇಶದ ಶಿವಪುರಿಯಿಂದ ಬೆಂಗಾವಲಿನೊಂದಿಗೆ ವೈಜನಾಥ್‌ ಸಿಂಗ್‌ ಯಾದವ್‌ ಅವರು ಭೋಪಾಲ್‌ಗೆ ತೆರಳಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಇದೀಗ ಈ ವಿಡಿಯೋ ವೈರಲ್​ ಆಗಿದ್ದು ನೆಟ್ಟಿಗರು ಬಾಲಿವುಡ್​ ಚಿತ್ರದ ದೃಶ್ಯವನ್ನು ಕಣ್ತುಂಬಿಕೊಂಡಂತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಅಂದಹಾಗೆ ವಿಧಾನಸಭಾ ಚುನಾವಣೆಗೆ(Assembly election) ಬೈಜನಾಥ್ ಸಿಂಗ್ ಬಿಜೆಪಿ(BJP) ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ ಟಿಕೆಟ್‌ ಸಿಗುವ ಭರವಸೆ ಇಲ್ಲದ ಕಾರಣ ಅವರು ಮತ್ತೆ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಿರಿಯ ಕಾಂಗ್ರೆಸ್ ನಾಯಕರಾದ ಕಮಲ್ ನಾಥ್ ಮತ್ತು ದಿಗ್ವಿಜಯ ಸಿಂಗ್, ಪಕ್ಷಕ್ಕೆ ಮರಳಿದ ಬೈಜನಾಥ್ ಸಿಂಗ್ ಅವರನ್ನು ಸ್ವಾಗತಿಸಿದರು. ಬೈಜನಾಥ್ ಸಿಂಗ್ ಜೊತೆಗೆ ಬಿಜೆಪಿಯ 15 ಜಿಲ್ಲಾ ಮಟ್ಟದ ನಾಯಕರು ಕೂಡಾ ಕಾಂಗ್ರೆಸ್ ಸೇರಿದ್ದಾರೆ.

ಇನ್ನು ತಮ್ಮ ಪಕ್ಷ ಬದಲಾವಣೆಯನ್ನು ಗುರುತಿಸಲು, ಬೈಜನಾಥ್ ಸಿಂಗ್ ಶಿವಪುರಿಯಿಂದ ಭೋಪಾಲ್‌ನಲ್ಲಿರುವ ಕಾಂಗ್ರೆಸ್ ಕಚೇರಿಗೆ 400 ಕಾರುಗಳ ಬೆಂಗಾವಲು ಪಡೆಯನ್ನು ಕರೆದೊಯ್ದರು. ಹಲವಾರು ಕಾರುಗಳು ಸೈರನ್ ಹಾಕಿಕೊಂಡು ಹೋಗುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಜನರು ವೀಡಿಯೊಗಳನ್ನು ಚಿತ್ರೀಕರಿಸುವುದು ಮತ್ತು ಕಾರುಗಳಿಗೆ ಕೈ ಬೀಸುವುದು ಕಂಡುಬರುತ್ತದೆ.

ಸೋಷಿಯಲ್ ಮೀಡಿಯಾಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರು ಸೈರನ್‌ಗಳ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾನೂನಿನ ಪ್ರಕಾರ, ತುರ್ತು ಸೇವೆಗಳನ್ನು ಒದಗಿಸುವ ವಾಹನಗಳಿಗೆ ಮಾತ್ರ ರಸ್ತೆಯಲ್ಲಿ ಸೈರನ್ ಬಳಸಲು ಅನುಮತಿ ಇದೆ. ಇವುಗಳಲ್ಲಿ ಆಂಬ್ಯುಲೆನ್ಸ್‌, ಅಗ್ನಿಶಾಮಕ ದಳ ಮತ್ತು ಕೆಲವು ಸಂದರ್ಭಗಳಲ್ಲಿ ಪೊಲೀಸರು ಸೇರಿದ್ದಾರೆ. ಇನ್ನು, ಇದಕ್ಕೆ ಕಿಡಿ ಕಾರಿರುವ ಬಿಜೆಪಿ, ಸೈರನ್‌ಗಳ ಬಳಕೆ ಕಾಂಗ್ರೆಸ್‌ನ ಊಳಿಗಮಾನ್ಯ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಕಿಡಿ ಕಾರಿದೆ.

ಇದನ್ನೂ ಓದಿ: Tamanna bhatiya: ಲಿಪ್ ಲಾಕ್ ಮಾತ್ರವಲ್ಲ ‘ಅದಕ್ಕೂ’ ನಾನ್ ರೆಡಿ ಎಂದ ತಮನ್ನಾ!! ಮಿಲ್ಕಿ ಬ್ಯೂಟಿಯ ಹಸಿಬಿಸಿ ವಿಡಿಯೋ ವೈರಲ್!!

Leave A Reply

Your email address will not be published.