Brief News Bunch: ಪತಿಗೇ ರಾಖಿ ಬಿಗಿದ ಮಹರಾಯ್ತಿ, ‘ಬಿಪರ್ ಜಾಯ್’ ಅಬ್ಬರಕ್ಕೆ 16ರ ಬಾಲಕ ಮೃತ್ಯು, ಪ್ರಧಾನಿಯಿಂದ 70,000 ಉದ್ಯೋಗ – ಹಲವು ಸಂಕ್ಷಿಪ್ತ ಸುದ್ದಿ ಗುಚ್ಛ!

ಮೊದಲ ಪತಿಯಿಂದ ದೂರ- 2ನೇ ಪತಿಗೆ ರಾಖಿ ಕಟ್ಟಿದ ಯುವತಿ :

Marriage: ಪ್ರೀತಿಸಿ ಮದುವೆಯಾದ (marriage) ಮಗಳನ್ನು ಗಂಡನಿಂದ ದೂರ ಮಾಡಿ, ಬಲವಂತವಾಗಿ ಹೆತ್ತವರು ಇನ್ನೊಂದು ಮದುವೆ ಮಾಡಿಸಿದ್ದು, ಕೋಪಗೊಂಡ ಯುವತಿ ಎರಡನೇ ಪತಿಗೆ ರಾಖಿ ಕಟ್ಟಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ತರುಣಾ ಶರ್ಮಾ ಎಂಬ ಯುವತಿ ತನ್ನ ಸಹಪಾಠಿ, ಬಾಲ್ಯದ ಗೆಳೆಯ ಸುರೇಂದ್ರ ಸಂಖ್ಲಾ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ.
ವಿಷಯ ತಿಳಿದ ಮನೆಯವರು ಯುವಕ ಬೇರೆ ಸಮುದಾಯಕ್ಕೆ ಸೇರಿದವನಾದ್ದರಿಂದ ಮದುವೆಗೆ ವಿರೋಧಿಸಿ ಇಬ್ಬರನ್ನು ಬೇರ್ಪಡಿಸಲು ಮುಂದಾಗಿದ್ದಾರೆ. ಪೊಲೀಸ್ ಠಾಣೆಗೆ ಇಬ್ಬರನ್ನು ಕರೆತಂದು ಮನೆಯವರು ಅವರನ್ನು ದೂರವಾಗುವಂತೆ ಮಾಡಿದ್ದಾರೆ.

ತರುಣಾಳನ್ನು ಮನೆಯವರು 5 ತಿಂಗಳಿನಿಂದ ಸೆರೆಯಲ್ಲಿಟ್ಟಿದ್ದು, ನಂತರ ಆಕೆಗೆ ಎರಡನೇ ಮದುವೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ.
ಅದರಂತೆ ಜಿತೇಂದ್ರ ಜೋಶಿ ಎಂಬಾತನೊಂದಿಗೆ ಬಲವಂತವಾಗಿ ಮದುವೆಯೂ ಮಾಡಿಸಿದ್ದಾರೆ. ಆದರೆ ಈಕೆ ಮಾಡಿದ್ದೇನು ಗೊತ್ತಾ?
ಮದುವೆಯ ನಂತರ ಎರಡನೇ ಗಂಡನಿಗೆ ಮೊದಲ ಗಂಡನ ಬಗ್ಗೆ ಹೇಳಿ ಆತನ ಕೈಗೆ ರಾಖಿಯನ್ನು ಕಟ್ಟಿದ್ದಾಳೆ. ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲೂ ತನ್ನ ಅಳಲು ತೋಡಿಕೊಂಡಿದ್ದಳು.

‘ಬಿಪರ್ ಜಾಯ್’ ಅಬ್ಬರಕ್ಕೆ 16 ವರ್ಷದ ಬಾಲಕ ಮೃತ್ಯು:

Boy death: ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಬಿಪರ್‌ ಜಾಯ್ ಚಂಡಮಾರುತಕ್ಕೆ 16 ವರ್ಷದ ಬಾಲಕನೋರ್ವ ಮೃತಪಟ್ಟಿರುವ (Boy death) ಘಟನೆ ಮುಂಬೈನ ಜುಹು ಬೀಚ್ ನಲ್ಲಿ ನಡೆದಿದೆ.

ಮಳೆ ಹಿನ್ನೆಲೆ ಎಚ್ಚರಿಕೆ ನೀಡಿದ್ದರೂ ಬೀಚ್ ಗೆ ಇಳಿದ ಐವರಲ್ಲಿ ಓರ್ವ ಬಾಲಕ ಮೃತಪಟ್ಟಿದ್ದು, ಇಬ್ಬರು ಬಾಲಕರನ್ನು ರಕ್ಷಿಸಲಾಗಿದೆ. ಉಳಿದಿಬ್ಬರು ನಾಪತ್ತೆಯಾಗಿದ್ದಾರೆ. ಸದ್ಯ ಮೃತ ಬಾಲಕನ ಶವ ಪತ್ತೆಯಾಗಿದೆ. ನಾಪತ್ತೆಯಾದ ಇಬ್ಬರಿಗಾಗಿ ಸೇನಾಪಡೆ ಹೆಲಿಕಾಪ್ಟರ್ ಮೂಲಕ ಶೋಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

70 ಸಾವಿರ ಯುವಕರಿಗೆ ‘ನೇಮಕಾತಿ ಪತ್ರ’ ವಿತರಿಸಿದ ಪ್ರಧಾನಿ ನರೇಂದ್ರ ಮೋದಿ :

Rozgar Mela: ಇಂದು (ಜೂನ್ 13) ದೇಶದ 43 ಸ್ಥಳಗಳಲ್ಲಿ ರೋಜ್ ಗಾರ್ ಮೇಳ (Rozgar Mela) ನಡೆಯಲಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಸರನ್ಸ್ ಮೂಲಕ 70,000 ಯುವಕರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ.

ಕೇಂದ್ರದ ರೋಜ್’ಗಾರ್ ಮೇಳವನ್ನು ಕಳೆದ ವರ್ಷ ಅಕ್ಟೋಬರ್ ನಲ್ಲಿ ಪ್ರಾರಂಭಿಸಲಾಯಿತು. ಅಕ್ಟೋಬರ್ 22 ರಂದು ನಡೆದ ಮೊದಲ ರೋಜಾ‌ ಮೇಳದಲ್ಲಿ 75,000 ಹೊಸ ನೇಮಕಾತಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು. ಇದೀಗ ಇಂದು ಐದನೇ
ರೋಜ್’ಗಾರ್ ಮೇಳ ನಡೆಯಲಿದೆ.

3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ :

Attack by stray dogs: ತೆಲಂಗಾಣದಲ್ಲಿ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ (Attack by stray dogs) ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆ ಪರಿಣಾಮ ಬಾಲಕ ತೀವ್ರಗಾಯಗೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಆತನ ಸ್ಥಿತಿ ಗಂಭೀರವಾಗಿದೆ.

ಬಾಲಕ ಹೊರಗಡೆ ಆಟವಾಡುತ್ತಿದ್ದನು ಈ ವೇಳೆ ಬೀದಿ ನಾಯಿಗಳು ಬಾಲಕನ ಮೇಲೆ ದಾಳಿ ನಡೆಸಿವೆ. ನಾಯಿಗಳ ಕಡಿತಕ್ಕೆ ನೋವು ತಾಳಲಾರದೆ ಬಾಲಕ ಚೀರಾಡಿದ್ದಾನೆ. ಆತನ ಚೀರಾಟ ಕೇಳಿ ಸ್ಥಳೀಯರು ನಾಯಿಗಳನ್ನು ಓಡಿಸಿದ್ದಾರೆ. ದಾಳಿಯ ಪರಿಣಾಮ ಬಾಲಕ ತೀವ್ರ ಗಾಯಗೊಂಡಿದ್ದಾನೆ. ಬಾಲಕನ ತಲೆ ಹಾಗೂ ಹೊಟ್ಟೆಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.

ಇದನ್ನೂ ಓದಿ :ಉಡುಪಿಗೆ KSRTC ಬಸ್ಸು ಸಾಧ್ಯತೆ – ಸಚಿವೆನಳಿನ್’ಗೆ ಪ್ರೈವೇಟ್’ನಲ್ಲೂ ಫ್ರೀ ಟಿಕೆಟ್ ಬೇಕಂತೆ !

Leave A Reply

Your email address will not be published.