Japanees Beauty Tips: ಬಯಲಾಗಿದೆ ಜಪಾನೀ ಚಿರಯೌವನದ ಗುಟ್ಟು: ಪ್ರಾಯ 50 ಆದ್ರೂ 20 ರಂತೆ ಸದಾ ಇರ್ತೀರ, ಜಸ್ಟ್ ಹೀಗೆ ಮಾಡಿ ಸಾಕು !

Beauty tips Japanese intresting facts about Beauty Japanese beauty secrets you need to know

Japanees Beauty Tips: ಜಪಾನಿಯರು ವೃದ್ಧಾಪ್ಯದಲ್ಲಿಯೂ ಯುವಕರಂತೆ ಕಾಣುತ್ತಾರೆ. ಇದರ ಹಿಂದಿರೋ ಕೆಲವು ರಹಸ್ಯಗಳನ್ನು ನಾವು ಸಹ ತಿಳಿದುಕೊಳ್ಳಲೇ ಬೇಕು. ಜಪಾನಿಗಳು
ದೀರ್ಘಾಯುಷಿಗಳಾಗಿ ಇರಲು ಅವರ ಆರೋಗ್ಯಕರ ಜೀವನ ಶೈಲಿ ಕಾರಣ ಆಗಿದೆ.

ಪ್ರಾಯ 50 ಆದ್ರೂ 20 ರಂತೆ ಸದಾ ಕಾಣುವ ಜಪನೀಯರು ತಾರುಣ್ಯ ಉಳಿಸಿಕೊಳ್ಳಲು ಅವರಿಗೆ ಹೇಗೆ ಸಾಧ್ಯವಾಯಿತು? ಸಾಮಾನ್ಯವಾಗಿ ಇಂತಹ ಗುಟ್ಟುಗಳನ್ನು ಯಾರೂ ಹೇಳುವುದಿಲ್ಲ. ಆದರೆ ಹೊಸಕನ್ನಡ ತಂಡ ಜಪಾನೀಯರ ಸೌಂದರ್ಯ (Japanees beauty Tips) ಗುಟ್ಟನ್ನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳಲಿದೆ.

ಹೌದು, ಜಪಾನೀಯರ ಪ್ರಕಾರ ಆಹಾರದಲ್ಲಿ ಕಟ್ಟುನಿಟ್ಟಾಗಿ ಮಿತಿಗಳನ್ನು ಅನುಸರಿಸುವುದು ಸೌಂದರ್ಯದ ಮೊದಲ ಲಕ್ಷಣವಾಗಿದೆ. ಇವರು ತಮ್ಮ ಆಹಾರದಲ್ಲಿ ಹೆಚ್ಚು ಹೆಚ್ಚಾಗಿ ಹಣ್ಣು, ಮೀನು ಮತ್ತು ಹಸಿರು ತರಕಾರಿಗಳನ್ನೇ ಸೇವಿಸುತ್ತಾರೆ. ಇದರಿಂದ ಇವರ ಚರ್ಮಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟುಗಳು ಲಭಿಸುತ್ತವೆ. ವಿಶೇಷವಾಗಿ ವಿಟಮಿನ್ ಇ ಮತ್ತು ಒಮೆಗಾ ೩ ಕೊಬ್ಬಿನ ಆಮ್ಲವಿರುವ ಆಹಾರಗಳನ್ನೇ ಅವರು ಹೆಚ್ಚು ಸೇವಿಸುತ್ತಾರೆ. ಇದು ಇವರ ಹೊಳೆಯುವ ಮತ್ತು ಬೆಳ್ಳಗಿನ ಚರ್ಮಕ್ಕೆ ತಳಪಾಯವಾಗಿದೆ.

ಇನ್ನು ಜಪಾನ್‌ನಲ್ಲಿ ಜನರು ಆಹಾರದ ರುಚಿಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅದು ತಮ್ಮ ಹೊಟ್ಟೆಯನ್ನು ತುಂಬುವ ಸಾಧನವೆಂದು ಪರಿಗಣಿಸುತ್ತಾರೆ. ಅವರು ಯಾವಾಗಲೂ 100 ಪ್ರತಿಶತ ತಿನ್ನುವುದಿಲ್ಲ. ಪೂರ್ತಿ ಹೊಟ್ಟೆ ತುಂಬುವಷ್ಟು ತಿನ್ನದೆ, ಶೇ.70ರಷ್ಟು ಮಾತ್ರ ಸೇವಿಸುತ್ತಾರೆ.
ಚಹಾಕ್ಕೆ ಪ್ರಾಮುಖ್ಯತೆ.

ಅದಲ್ಲದೆ ಜಪಾನಿನ ಸಮುದಾಯವು ಚಹಾಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಿದೆ. ಅವರು ದಿನಕ್ಕೆ ಹಲವಾರು ಬಾರಿ ಚಹಾವನ್ನು ಕುಡಿಯುತ್ತಾರೆ. ಈ ಚಹಾವು ಎಂಟಿ-ಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ, ಇದು ಶಕ್ತಿಯನ್ನು ನೀಡುವುದರ ಜೊತೆಗೆ ದೇಹವನ್ನು ಸ್ವತಂತ್ರ ರಾಡಿಕಲ್‌ಗಳಿಂದ ಮಾಡುತ್ತದೆ.

ಜಪಾನ್ ಮಹಿಳೆಯರು ಸಾಂಪ್ರಾದಾಯಿಕ ವಿಧಾನವೊಂದನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ. ‘ದ್ರವಲೇಪದ ಮುಖವಾಡ’ ಎಂಬ ಅರ್ಥವಿರುವ ಈ ವಿಧಾನದಲ್ಲಿ ಇವರು ತೆಳ್ಳಗಿನ ಮಸ್ಲಿನ್ ಅಥವಾ ಹತ್ತಿಯ ಬಟ್ಟೆಯನ್ನು ಟೋನರ್ ಗುಣವಿರುವ ದ್ರವದಲ್ಲಿ ಅದ್ದಿ ಚರ್ಮದ ಮೇಲೆ ಹತ್ತು ನಿಮಿಷಗಳಾದರೂ ಇರಿಸಿಕೊಳ್ಳುತ್ತಾರೆ. ಇದರಿಂದ ಚರ್ಮದ ಸೆಳೆತ ಹೆಚ್ಚುವ ಮತ್ತು ವೃದ್ದಾಪ್ಯದ ಚಿಹ್ನೆಗಳು ಮೂಡುವ ಸಾಧ್ಯತೆ ಕಡಿಮೆಯಾಗುತ್ತದೆ.

ಜಪಾನಿನಲ್ಲಿ ಬೇಯಿಸುವ ಸಾಕಷ್ಟು ಆಹಾರಗಳು ವಿಶಿಷ್ಟವಾಗಿದೆ. ಅವರು ಕಡಿಮೆ ಎಣ್ಣೆಯನ್ನು ಬಳಸಿ ತಿನಿಸುಗಳನ್ನು ತಯಾರಿಸುತ್ತಾರೆ. ಉಗಿಯಲ್ಲಿ ಬೇಯಿಸುವುದು, ಕುದಿಸುವುದು, ಹುರಿಯುವುದು ಮತ್ತು ಹುದುಗುವ ತಿನಿಸುಗಳು ಹೆಚ್ಚಾಗಿವೆ. ಈ ರೀತಿ ಬೇಯಿಸಿದ ಆಹಾರದಿಂದ ಹೆಚ್ಚುವರಿ ಕೊಬ್ಬು ದೇಹದಲ್ಲಿ ಸಂಗ್ರಹವಾಗುವುದಿಲ್ಲ.

ಧ್ಯಾನವನ್ನು ಅನುಸರಿಸುವುದು ಜಪಾನೀಯರ ಸಂಸ್ಕೃತಿಯ ಒಂದು ಭಾಗವಾಗಿದೆ. ಚಿಕ್ಕ ಮಕ್ಕಳಿಂದ ತೊಡಗಿ ವೃದ್ಧರವರೆಗೂ, ಪುರುಷರೂ ಮಹಿಳೆಯರೂ ಕಡ್ಡಾಯವಾಗಿ ಧ್ಯಾನದಲ್ಲಿ ನಿರತರಾಗುತ್ತಾರೆ. ಬಹುಷಃ ಇವರ ನೆಮ್ಮದಿ ಹಾಗೂ ಆರೋಗ್ಯಕ್ಕೆ ಇದು ಪ್ರಮುಖ ಕಾರಣವಿರಬಹುದು.

ಒಂದು ಸಂಶೋಧನೆಯ ಪ್ರಕಾರ ಪ್ರತಿ ಜಾಪಾನಿ ನಾಗರಿಕನೂ ಪ್ರತಿದಿನ ಕೊಂಚವಾದರೂ ನಡೆದೇ ನಡೆಯುತ್ತಾರೆ. ನಡೆಯುವುದರಿಂದ ಮನಸ್ಸಿನ ಒತ್ತಡ ಕಡಿಮೆಯಾಗುವುದು ಮಾತ್ರವಲ್ಲ, ಸ್ಥೂಲಕಾಯ ಆವರಿಸದೇ ಇರಲೂ ನೆರವಾಗುತ್ತದೆ

ಇದನ್ನೂ ಓದಿ: ATM ಇಲ್ಲದಿದ್ರೂ, ಕೈ ಬೀಸಿಕೊಂಡು ಹೋಗಿ ‘ಆಧಾರ್ ಪಾವತಿ ವ್ಯವಸ್ಥೆ ‘ ಮೂಲಕ ಬ್ಯಾಂಕಿಂಗ್ ಮಾಡಬಹುದು, ಹೇಗೆ ಅಂತೀರಾ ?

Leave A Reply

Your email address will not be published.