Lung Transplantation: ಶಹಬ್ಬಾಸ್‌ ..! ಬೆಂಗಳೂರಲ್ಲಿ 57 ವರ್ಷದ ರೋಗಿಗೆ ವಿಶಿಷ್ಟ ಶ್ವಾಸಕೋಶದ ಕಸಿ ಯಶಸ್ವಿ.!

patient underwent a unique lung Transplantation in Bangalore

Lung Transplantation: ಬೆಂಗಳೂರು : ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ವಿಶಿಷ್ಟವಾದ ಶ್ವಾಸಕೋಶದ ಕಸಿಯನ್ನು ಬೆಂಗಳೂರಿನ ಅಪೊಲೊ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರ ವಿಭಾಗ ವೈದ್ಯರು ಮಾಡಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರಿನ 57 ವರ್ಷದ ಮೀನಾಕ್ಷಿ ಎಂಬುವವರು ಉಸಿರಾಟದ ತೊಂದರೆಯಿಂದಾಗಿ ಎರಡು ವರ್ಷಗಳ ಹಿಂದೆ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಶ್ವಾಸಕೋಶದ (Lung Transplantation) ಗಟ್ಟಿಯಾಗುವಿಕೆಯಿಂದ ಇಂಟರ್‌ಸ್ಟಿಶಿಯಲ್ ಶ್ವಾಸಕೋಶದ ಕಾಯಿಲೆ (ಐಎಲ್‌ಡಿ) ಇದೆ ಎಂದು ಗುರುತಿಸಲಾಯಿತು. ಸ್ಥಿತಿಯ ತೀವ್ರತೆಯನ್ನು ಕಂಡು ವೈದ್ಯರು ವಿಶಿಷ್ಟವಾದ ಶ್ವಾಸಕೋಶದ ಕಸಿಯನ್ನು ಮಾಡೋದಕ್ಕೆ ಮುಂದಾದರು.

ರೋಗಿಯು ಪೂರ್ವ-ವಿಧಾನ ಪರೀಕ್ಷೆಗಳಿಗೆ ಒಳಗಾಗಿದ್ದರು, ಇವರಿಗೆ ದಾನಿಗಳ ಶ್ವಾಸಕೋಶ ಹೊಂದಾಣಿಕೆ ಆಗುತ್ತದೆ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕಿತ್ತು ನಂತರ ಶ್ವಾಸಕೋಶದ ಕಸಿ ನಡೆಸಲು ಮುಂದಾಗಬೇಕಾಗಿದೆ ಎಂದು ಅಪೊಲೊ ಆಸ್ಪತ್ರೆಗಳ ಪಲ್ಮನಾಲಜಿ ಮತ್ತು ಇಂಟರ್ವೆನ್ಷನಲ್ ಹಿರಿಯ ಸಲಹೆಗಾರ ಡಾ ರವೀಂದ್ರ ಮೆಹ್ತಾ ತಿಳಿಸಿದ್ದಾರೆ.

 

ಇದನ್ನು ಓದಿ: Lung Transplantation: ಶಹಬ್ಬಾಸ್‌ ..! ಬೆಂಗಳೂರಲ್ಲಿ 57 ವರ್ಷದ ರೋಗಿಗೆ ವಿಶಿಷ್ಟ ಶ್ವಾಸಕೋಶದ ಕಸಿ ಯಶಸ್ವಿ.! 

Leave A Reply

Your email address will not be published.