Lucknow: ಹಾವನ್ನು ಬಾಯಲ್ಲಿ ಹಾಕಿ ಕಡಿದು ತಿಂದರೂ ಬದುಕಿ ಬಂದ 3 ವರ್ಷದ ಮಗು

child put a snake in his mouth and ate it survived in Lucknow

Lucknow: ಲಕ್ನೋ: ನಸೀಬ್ ಅಚ್ಚಾ ಹೈ ತೋ ಯಮಾ ಭೀ ಕುಚ್ ನಹಿ ಕರೆಗಾ. ಇದು ಇವತ್ತು ಕೇವಲ ಗಾದೆ ಮಾತಾಗಿ ಉಳಿದಿಲ್ಲ.
ಅದೃಷ್ಟ.ಒಂದು ಗಟ್ಟಿಯಾಗಿದ್ದರೆ ಸಾವಿನ ದವಡೆಯಿಂದ ಎದ್ದು ಬರೋದು ಅಷ್ಟೇನೂ ಕಷ್ಟದ ಕೆಲಸವೇ ಅಲ್ಲ. ಈ ಮಾತಿಗೆ ಸಾಕ್ಷಿ ಎಂಬಂತೆ ಒಂದು ಘಟನೆ (Lucknow) ನಡೆದಿದೆ. ಹಾವನ್ನು ಜಗಿದು ತಿಂದರೂ ಪುಟ್ಟ ಮಗು ಏನು ಪ್ರಾಣಪಾಯವಿಲ್ಲದೆ ಬದುಕಿ ಬಂದಿದ್ದಾನೆ.

ಉತ್ತರ ಪ್ರದೇಶದ ಫರೂಕಾಬಾದ್ ನಲ್ಲಿ ಅಕ್ಷಯ್‌ ಎಂಬ ಮೂರು ವರ್ಷದ ಮಗು ತನ್ನ ಮನೆಯ ಅಂಗಳದಲ್ಲಿ ಆಡುತ್ತಿದ್ದ. ಈ ವೇಳೆ ಪೊದೆಯೊಂದರಿಂದ ಪುಟ್ಟ ಹಾವೊಂದು ಅಂಗಳಕ್ಕೆ ಹರಿದು ಬಂದಿದೆ. ಇದನ್ನು ನೋಡಿದ ಮಗು ಹಾವನ್ನು ಕೈಯಲ್ಲಿ ಹಿಡಿದು, ಅದನ್ನು ಬಾಯಿಯೊಳಗೆ ಹಾಕಿ ಜಗಿಯಲು ಶುರು ಮಾಡಿದ್ದಾನೆ. ಪರಿಣಾಮ, ಆ ಹಾವು ಸತ್ತು ಹೋಗಿದೆ.

ಇದಾದ ಕೆಲ ಸಮಯದ ಬಳಿಕ ಮಗುವಿನ ಬಾಯೊಳಗಿದ್ದ ಹಾವು ಮಗುವಿಗೆ ಕಿರಿಕಿರಿ ಎನಿಸಿ ಆತ ಕಿರುಚಾಡಲು ಶುರು ಮಾಡಿದ್ದಾನೆ. ಕೂಡಲೇ ಮಗುವಿನ ಅಜ್ಜಿ ಬಂದು ಬಾಯಿಯೊಳಗಿದ್ದ ಹಾವನ್ನು ಹೊರಕ್ಕೆ ಎಳೆದು ತೆಗೆದಿದ್ದಾರೆ.
ತಕ್ಷಣ ಭಯಭೀತ ಮನೆಯವರು ಹೆದರಿ ಮಗುವನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಮಗುವನ್ನು ಪರೀಕ್ಷೆ ಮಾಡಿದ್ದು, ಮಗುವಿನ ಪ್ರಾಣಕ್ಕೆ ಏನೂ ಅಪಾಯವಿಲ್ಲ ಎಂದಿದ್ದಾರೆ. ಜೀವಂತ ಹಾವನ್ನೇ ಬಾಯಲ್ಲಿಟ್ಟು ಚೀಪಿದರೂ ಮಗು ಆರೋಗ್ಯವಾಗಿಯೇ ಇದೆ.

 

ಇದನ್ನು ಓದಿ: Odisha: ಒಡಿಶಾ ರೈಲು ದುರಂತ: ಬರೋಬ್ಬರಿ 230 ಕಿ.ಮೀ ಆ್ಯಂಬುಲೆನ್ಸ್‌ನಲ್ಲಿ ಬಂದು, ಶವಗಾರದಲ್ಲಿ ಬಿಸಾಕಿದ್ದ ಮಗನ ಪ್ರಾಣ ಉಳಿಸಿದ ತಂದೆ! 

Leave A Reply

Your email address will not be published.