Home National Odisha: ಅಯ್ಯೋ ಮಗನೇ, ಎಲ್ಲಿದ್ದೀಯೋ…? ಕಣ್ಣಲ್ಲಿ ನೀರು, ಮುಖದಲ್ಲಿ ಆತಂಕ!! ಶವಗಳ ರಾಶಿಯ ನಡುವೆ ಮುಸುಕು...

Odisha: ಅಯ್ಯೋ ಮಗನೇ, ಎಲ್ಲಿದ್ದೀಯೋ…? ಕಣ್ಣಲ್ಲಿ ನೀರು, ಮುಖದಲ್ಲಿ ಆತಂಕ!! ಶವಗಳ ರಾಶಿಯ ನಡುವೆ ಮುಸುಕು ತೆಗೆ ತೆಗೆದು ಮಗನಿಗಾಗಿ ತಂದೆಯ ಹುಡುಕಾಟ

Odisha Train accident
Image source- TV9 kannada

Hindu neighbor gifts plot of land

Hindu neighbour gifts land to Muslim journalist

Odisha Train Accident: ಆ ನಿಶ್ಯಕ್ತ ದೇಹವೊಂದು ಸಾಲಾಗಿ ಮಲಗಿಸಿದ್ದ ಸಾಲು ಸಾಲು ಮುಸುಕು ತೆಗೆದು ಪರಿಶೀಲಿಸುತ್ತಿದೆ. ಪ್ರತಿಯೊಂದು ಬಿಳಿ ಬಟ್ಟೆಯನ್ನು ಸರಿಸಿ ನೋಡಿದಾಗಲೂ ಆತಂಕ. ಕಣ್ಣಂಚಲ್ಲಿ ನೀರಿನ ಹನಿಗಳು. ಇದು ತನ್ನ ಮಗನ ಶವ ಆಗದೆ ಇರಲಿ ಎಂಬ ಆಶಯ. ಶವದ ಮುಖ ಕಂಡಾಗ ಒಂದು ನೆಮ್ಮದಿ. ಇದು ನನ್ನ ಮಗನಲ್ಲ, ಮಗ ಎಲ್ಲೋ ಬದುಕಿದ್ದಾನೆ ಎಂಬ ಆಶಾ ಭಾವನೆ. ದುಃಖ ಕಣ್ಣೀರಿನ ಮಧ್ಯೆಯೇ ಒಂದು ನಿರೀಕ್ಷೆಯ ಭಾವ. ಇದು ತನ್ನ ಮಗನನ್ನು ಪತ್ತೆ ಹಚ್ಚಲು ಪಡಿಪಾಟಲು ಪಡುತ್ತಿರುವ ನಿಶ್ಯಕ್ತ ವೃದ್ದನೊಬ್ಬನ ಕರುಣಾಜನಕ ಕಥೆ.

ಹೌದು, ನಿನ್ನೆ ನಡೆದ ಒಡಿಶಾ(Odisha) ರೈಲು ದುರಂತದಲ್ಲಿ(Odisha Train Accident) ಮಗನನ್ನು ಕಳೆದುಕೊಂಡ ತಂದೆಯು, ತನ್ನ ಮಗನಿಗಾಗಿ ಶವಾಗಾರದಲ್ಲಿ ಹುಡುಕಾಡಿರುವ ವಿಡಿಯೋ ಒಂದು ಎಲ್ಲೆಡೆ ವೈರಲ್ ಆಗಿದೆ. ತಂದೆಯೊಬ್ಬರು ಶವದ ರಾಶಿಯಲ್ಲಿ ತನ್ನ ಮಗನಿದ್ದಾನೆಯೇ ಎಂದು ಹುಡುಕಾಡುತ್ತಿದ್ದಾರೆ. ರೈಲು ಅಪಘಾತದಿಂದ ಪ್ರಾಣ ಕಳೆದುಕೊಂಡ ತನ್ನ ಮಗನನ್ನು ಅಲ್ಲಿದ್ದ ಮೃತದೇಹಗಳ ಮುಚ್ಚಿದ ಮುಸುಕು ತೆಗೆದು ತೆಗೆದು ಹುಡುಕುತ್ತಿದ್ದಾರೆ. ಇದು ಶುಕ್ರವಾರ(Friday) ಸಂಜೆ ಸರಿಸುಮಾರು 7 ಗಂಟೆಗೆ ನಡೆದ ವಿನಾಶಕಾರಿ ಘಟನೆಯ ನಂತರದ ಒಂದು ನೋಟ.

ಅಲ್ಲಿ 12841 ಶಾಲಿಮಾರ್-ಕೋರೊಮಂಡಲ್(Shalimar-Kormangal) ಎಕ್ಸ್‌ಪ್ರೆಸ್ ಒಡಿಶಾದ ಬಾಲಸೋರ್(Balasore) ಜಿಲ್ಲೆಯ ಬಹನಾಗ ಬಜಾರ್ ನಿಲ್ದಾಣದಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಿಂದ ಘರ್ಷಣೆಯು ಸುಮಾರು 288 ಜೀವಗಳು ಬಲಿಯಾಗಿವೆ, ಸುಮಾರು 900 ಜನರು ಗಾಯಗೊಂಡಿದ್ದಾರೆ. ಆರಂಭದಲ್ಲಿ ಕೋರಮಂಡಲ್‌ ಶಾಲಿಮಾರ್‌(Kormandal Shalimar) ಎಕ್ಸ್‌ ಪ್ರೆಸ್‌ ರೈಲು ಒಡಿಶಾದ ಬಾಲಸೋರ್‌ ನಲ್ಲಿ ಹಳಿ ತಪ್ಪಿತ್ತು. ಅದರ ಪರಿಣಾಮ ಹಲವು ಬೋಗಿಗಳು ಸರಕು ಸಾಗಣೆ ರೈಲಿನ ಬೋಗಿಗಳು ಮೇಲೆ ಬಿದ್ದು ಡಿಕ್ಕಿ ಹೊಡೆದಿತ್ತು. ಈ ವೇಳೆಯಲ್ಲೇ ಯಶವಂತಪುರ್-ಹೌರಾ (Yashwanthpur-Houra) ಸೂಪರ್‌ ಫಾಸ್ಟ್‌ ರೈಲು ಈಗಾಗಲೇ ಬಿದ್ದ ಬೋಗಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಕೆಲವೇ ನಿಮಿಷಗಳಲ್ಲಿ ಪ್ರಯಾಣಿಕರು ಕೊನೆಯುಸಿರೆಳೆದಿದ್ದರು.

ಈಗ ಒಡಿಶಾ ರೈಲು ದುರಂತಕ್ಕೆ ನಿರ್ಲಕ್ಷ್ಯ ಕಾರಣವೇ ಆಥವಾ ತಾಂತ್ರಿಕ ದೋಷವೇ? ಎನ್ನುವ ಚರ್ಚೆ ಕಾರಣವಾಗಿದೆ. ಒರಿಸ್ಸಾದ ಬಹನಾಗಾ ಬಜಾರ್‌ ನಿಲ್ದಾಣದ ಸಮೀಪ ರಾತ್ರಿ 7.20 ರ ಸುಮಾರಿಗೆ ಈ ಭೀಕರ ಅವಘಡ ಸಂಭವಿಸಿದೆ. ಒಡಿಶಾದ ಈ ಮಹಾ ರೈಲು ದುರಂತಕ್ಕೆ ರೈಲು ಹಳಿಗಳಲ್ಲಿನ ದೋಷವೇ ಕಾರಣವಿರಬಹುದು ಎಂದು ಪ್ರಾಥಮಿಕವಾಗಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಹಳಿಗಳು ದೋಷಯುಕ್ತವಾಗಿದ್ದಿರಬಹುದು ಶಂಕಿಸಲಾಗಿದೆ. ಅಲ್ಲದೆ ಮಾನವ ಕರ್ತವ್ಯ ಲೋಪ ಕೂಡಾ ಕಾರಣ ಇರಬಹುದು ಎನ್ನಲಾಗಿದೆ. ಆದರೆ, ತನಿಖೆಯ ನಂತರವಷ್ಟೆ ದುರಂತಕ್ಕೆ ನಿಖರ ಕಾರಣವೇನೆಂದು ತಿಳಿಯಲಿದೆ.

ಇದನ್ನೂ ಓದಿ: Uttar pradesh: ಹಿಂದೂ ಎಂದು ನಂಬಿಸಿ ಪ್ರೇಮಿಸಿದ! ಬಲವಂತವಾಗಿ ಮತಾಂತರಗೊಳಿಸಿ, ಅಪ್ಪನೊಂದಿಗೆ ಮಲಗೆಂದು ವಿಕೃತಿ ಮೆರೆದ ಮುಸ್ಲಿಂ ಕಾಮುಕ!