Viral video: ಫ್ಯಾಮಿಲಿ ವಾಟ್ಸಾಪ್ ಗ್ರೂಪ್​​​ನಲ್ಲಿ ಅಪ್ಪ- ಅಮ್ಮ ಇರೋದನ್ನು ಮರೆತು ಎಣ್ಣೆ ಪಾರ್ಟಿ ಫೋಟೋ ಶೇರ್ ಮಾಡಿದ ಯುವಕ! ನಂತರ ಆದದ್ದೇನು?

A young man shared a beer photo on his family's WhatsApp group see parents reaction video viral

Viral video: ಈ ವಾಟ್ಸಪ್ ಗ್ರೂಪ್(WhatsApp group)ಗಳು ಸೃಷ್ಟಿಸೋ ಅವಾಂತರಗಳು ಒಂದೆರಡಲ್ಲ ಮರ್ರೆ. ಆದರಲ್ಲೂ ಈ ಫ್ಯಾಮಿಲಿ ಗ್ರೂಪ್(Family groups)ಗಳ ತೊಂದರೆಯಂತೂ ಹುಡುಗ-ಹುಡುಗಿಯರಿಗೆ ತಪ್ಪಿದ್ದಲ್ಲ. ಫ್ಯಾಮಿಲಿಯವರೆಲ್ಲರೂ ಒಂದೆಡೆ ಸೇರಿ ಕಾದು ಕುಳಿತಿರೋ ಈ ಗ್ರೂಪ್ ಗಳಲ್ಲಿ ಯಾರು ಏನೇ ಮಾಡಿದರೂ ಸಿಕ್ಕಿಬೀಳುತ್ತಾರೆ. ಅಂತೆಯೇ ಇಲ್ಲೊಂದೆಡೆ ಒಬ್ಬ ಯುವಕ ಈ ಫ್ಯಾಮಿಲಿಗ್ರೂಪಿನಿಂದಲೇ ತನ್ನ ಅಪ್ಪ ಅಮ್ಮನ ಕೈಗೆ ತಗಲಾಕೊಂಡಿದ್ದಾನೆ.

 

ಹೌದು, ಯುವಕನೊಬ್ಬ ಆಕಸ್ಮಾತಾಗಿ ತನ್ನ ಕುಟುಂಬದ ವಾಟ್ಸಾಪ್ ಗ್ರೂಪ್​​​ಗೆ ಬಿಯರ್ ಬಾಟಲಿಯ(Beer bottel) ಫೋಟೊ ಕಳುಹಿಸಿ ಪಜೀತಿಗೆ ಸಿಲುಕಿದ್ದಾನೆ. ಈ ಘಟನೆಯ ಕುರಿತ ವಾಟ್ಸ್ಆಪ್ ಸ್ಕ್ರೀನ್ ಶಾಟ್​​ನ್ನು ಆತನ ಸಹೋದರಿ ಸಾನಿಯಾ ಧವನ್(Saniya dhavan) ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಆ ಪೋಸ್ಟ್ ಸಿಕ್ಕಾಪಟ್ಟೆ ವೈರಲ್(viral video) ಆಗಿದೆ.

ಅಂದಹಾಗೆ ಕಳೆದ ಶುಕ್ರವಾರ ಐಪಿಎಲ್​​​(IPL)ನಲ್ಲಿ ಮುಂಬೈ ಇಂಡಿಯನ್ಸ್(Mumbai indians)ಪಂದ್ಯದ ಉತ್ಸಾಹದಲ್ಲಿ, ಯುವಕ ಕುಟುಂಬದ ವಾಟ್ಸ್ಆಪ್ ಗ್ರೂಪಿಗೆ ಕೈಯಲ್ಲಿ ಬಿಯರ್ ಬಾಟಲ್ ಹಿಡಿದ ಫೋಟೋವನ್ನು ಕಳುಹಿಸಿದನು. ಜೊತೆಗೆ ‘ಮುಂಬೈ ಗೆಲುವಿಗಾಗಿ…. ಹೋಗೋಣ’ ಎಂದು ಬರೆದುಕೊಂಡಿದ್ದಾನೆ.

ಬೀಯರ್ ಬಾಟಲಿಯ ಫೋಟೋವನ್ನು ಹಂಚಿಕೊಂಡಿದ್ದಕ್ಕೆ ಕೋಪಗೊಂಡು ತಕ್ಷಣ ವಾಟ್ಸ್ಆಪ್ ಗ್ರೂಪಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಆತನ ತಂದೆ ‘ಏನಿದು’ ಎಂದು ಪ್ರಶ್ನಿಸಿದ್ದಾರೆ. ತಾಯಿ ‘ನೀನು ಬಿಯರ್ ಕುಡಿದಿದ್ದೀಯಾ’ ಎಂದು ಕೇಳಿದ್ದಾರೆ. ಮತ್ತೊಂದೆಡೆ ಸಾನಿಯಾ ತನ್ನ ಸಹೋದರನಿಗೆ ಮೆಸೇಜ್ ಮಾಡಿ ಗ್ರೂಪ್​​​ಗೆ ಕಳುಹಿಸಿದ ಬೀಯರ್ ಫೋಟೋವನ್ನು ತಕ್ಷಣ ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದಾಳೆ. ಆದರೆ ಅವರ ಪೋಷಕರು ಆ ಫೋಟೊವನ್ನು ಆಗಲೇ ನೋಡಿ ಬಿಟ್ಟಿದ್ದರು.

ಇನ್ನು ಟ್ವಿಟರ್ ನಲ್ಲಿ ವೈರಲ್ ಆದ ಈ ಪೋಸ್ಟ್ 1.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 20.8 ಸಾವಿರ ಲೈಕ್ಸ್​​​ಗಳನ್ನು ಪಡೆದುಕೊಂಡಿದೆ. ಅಲ್ಲದೆ ಅನೇಕರು ಈ ವಿಡಿಯೋಗೆ ಬಗೆ ಬಗೆಯಾಗಿ ಕಮೆಂಟಿಸುತ್ತಿದ್ದಾರೆ. ಒಬ್ಬ ಬಳಕೆದಾರರು ‘ಆ ಯುವಕ ಇನ್ನೂ ಬದುಕಿದ್ದಾನಾ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ನಾನು ಕೂಡಾ ಇದೇ ರೀತಿ ಒಮ್ಮೆ ಕಾಲೇಜು ವಾಟ್ಸಾಪ್ ಗ್ರೂಪಿನಲ್ಲಿ ನನ್ನ ಸ್ನೇಹಿತ ಸಿಗರೇಟ್ ಸೇದುವ ಫೋಟೊವನ್ನು ಹಂಚಿಕೊಂಡು ಪಜೀತಿಗೆ ಸಿಲುಕಿದ್ದೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:  WHO: ಮಾಂಸಾಹಾರ ಪ್ರಿಯರೇ ಎಚ್ಚರ!! ಇನ್ನು ಅತಿಯಾಗಿ ಚಿಕನ್ ಸೇವಿಸಿದ್ರೆ ನೀವು ವಿಶ್ವದ ಅತಿದೊಡ್ಡ ಕಾಯಿಲೆಗೆ ತುತ್ತಾಗ್ಬೋದು!!

Leave A Reply

Your email address will not be published.