IBPS Job Notification 2023: IBPS ನಿಂದ 8,600 ವಿವಿಧ ಬ್ಯಾಂಕ್ ಹುದ್ದೆಗಳಿಗೆ ನೇಮಕಾತಿ, ಇಂದಿನಿಂದಲೇ ಅರ್ಜಿ ಪ್ರಕ್ರಿಯೆ

ibps rrb notification 2023 apply online for po clerk post IBPS Job Notification 2023

IBPS Job Notification 2023: ಬ್ಯಾಂಕಿಂಗ್‌ ಹುದ್ದೆ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ. ಬ್ಯಾಂಕಿಂಗ್‌ ಸಿಬ್ಬಂದಿ ನೇಮಕಾತಿ ಸಂಸ್ಥೆಯು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ವಿವಿಧ ಶ್ರೇಣಿಯ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. 43ಗ್ರಾಮೀಣ ಬ್ಯಾಂಕ್‌ಗಳಲ್ಲಿ (ಆರ್‌ಆರ್‌ಬಿ)(IBPS Job Notification 2023) ಖಾಲಿ ಇರುವ ಆಫೀಸ್‌ ಅಸಿಸ್ಟೆಂಟ್‌ (ಮಲ್ಟಿಪರ್ಪಸ್‌) ಮತ್ತು ಆಫೀಸರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹೆಚ್ಚಿನ ಮಾಹಿತಿಯನ್ನು IBPS RRB Notification 2023 ನಲ್ಲಿ ನೀಡಲಾಗಿದೆ.

ಐಬಿಪಿಎಸ್ ಆರ್‌ಆರ್‌ಬಿ ಹುದ್ದೆಗಳ ನೇಮಕಾತಿಗೆ ಜೂನ್ 1 ರಿಂದ ಅರ್ಜಿ ಸ್ವೀಕಾರ ಆರಂಭವಾಗಿದ್ದು, ಜೂನ್ 21 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಗ್ರೂಪ್‌ ಎ (ಸ್ಕೇಲ್‌ -1, 2, 3), ಗ್ರೂಪ್‌ ಬಿ ಹುದ್ದೆಗಳಿಗೆ ಆಗಸ್ಟ್‌ – ಸೆಪ್ಟೆಂಬರ್‌ಗಳಲ್ಲಿ ಆನ್‌ಲೈನ್‌ ಪರೀಕ್ಷೆ ನಡೆಸಲಾಗುತ್ತದೆ, ನವೆಂಬರ್ ತಿಂಗಳಲ್ಲಿ ನಬಾರ್ಡ್‌ ಮತ್ತು ಐಬಿಪಿಎಸ್‌ ಜತೆಗೂಡಿ ಸಂದರ್ಶನ ಪ್ರಕ್ರಿಯೆ ನಡೆಸಲಿವೆ.

ಆನ್‌ಲೈನ್‌ ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ : 01-06-2023
ಆನ್‌ಲೈನ್‌ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 21-06-2023
ಪರೀಕ್ಷೆ ಪೂರ್ವಭಾವಿ ತರಬೇತಿ ದಿನಾಂಕ : ಜುಲೈ 17-22, 2023.
ಅಪ್ಲಿಕೇಶನ್‌ ಶುಲ್ಕ : ಎಸ್‌ಸಿ / ಎಸ್‌ಟಿ / PWD ಅಭ್ಯರ್ಥಿಗಳಿಗೆ ರೂ.175, ಇತರೆ ಅಭ್ಯರ್ಥಿಗಳಿಗೆ ರೂ.850.
ಪೂರ್ವಭಾವಿ ಪರೀಕ್ಷೆ ದಿನಾಂಕ : ಆಗಸ್ಟ್‌ 2023
ಆನ್‌ಲೈನ್‌ ಪ್ರಿಲಿಮ್ಸ್‌ ಪರೀಕ್ಷೆ ಫಲಿತಾಂಶ : ಆಗಸ್ಟ್‌ / ಸೆಪ್ಟೆಂಬರ್, 2023
ಮುಖ್ಯ ಪರೀಕ್ಷೆ ದಿನಾಂಕ : ಸೆಪ್ಟೆಂಬರ್ 2023

ಹುದ್ದೆಗಳ ವಿವರ:
ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪೋಸ್ ): 5538
ಆಫೀಸರ್ ಸ್ಕೇಲ್‌-1: 2485
ಆಫೀಸರ್ ಸ್ಕೇಲ್‌-2 (ಮಾರ್ಕೆಟಿಂಗ್ ಮ್ಯಾನೇಜರ್): 03
ಆಫೀಸರ್ ಸ್ಕೇಲ್‌-2 (ಅಗ್ರಿಕಲ್ಚರ್ ಆಫೀಸರ್): 59
ಆಫೀಸರ್ ಸ್ಕೇಲ್‌-2 (ಜೆನೆರಲ್ ಬ್ಯಾಂಕಿಂಗ್ ಆಫೀಸರ್): 315
ಆಫೀಸರ್ ಸ್ಕೇಲ್‌-2(ಟ್ರೆಸರಿ ಮ್ಯಾನೇಜರ್) : 08
ಆಫೀಸರ್ ಸ್ಕೇಲ್‌-2 (Law): 24
ಆಫೀಸರ್ ಸ್ಕೇಲ್‌-2 (CA): 21
ಆಫೀಸರ್ ಸ್ಕೇಲ್‌-2 (IT): 68
ಆಫೀಸರ್ ಸ್ಕೇಲ್‌-3: 73

ವಿದ್ಯಾರ್ಹತೆ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿಸಿದ ವಿಷಯದಲ್ಲಿ ಪದವಿ / ಸ್ನಾತಕೋತ್ತರ ಪದವಿ ಪಾಸ್ ಮಾಡಿರಬೇಕು. ಜತೆಗೆ ಕೆಲವೊಂದು ಹುದ್ದೆಗೆ ಎಂಬಿಎ, ಸಿಎ ತೇರ್ಗಡೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ: ಆಫೀಸರ್ ಸ್ಕೇಲ್ -1 : ಕನಿಷ್ಠ 18 ರಿಂದ ಗರಿಷ್ಠ 30 ವರ್ಷ
ಆಫೀಸರ್ ಸ್ಕೇಲ್‌ – 2 : ಕನಿಷ್ಠ 21 ರಿಂದ ಗರಿಷ್ಠ 32 ವರ್ಷ ವಯಸ್ಸು
ಆಫೀಸರ್ ಸ್ಕೇಲ್ – 3 : ಕನಿಷ್ಠ 21 ರಿಂದ ಗರಿಷ್ಠ 40 ವರ್ಷ ವಯಸ್ಸು
ಆಫೀಸ್ ಅಸಿಸ್ಟಂಟ್ : ಕನಿಷ್ಠ 18 ರಿಂದ ಗರಿಷ್ಠ 28 ವರ್ಷ ವಯಸ್ಸು
ಒಬಿಸಿ’ಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ಅಭ್ಯರ್ಥಿಗಳು ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Leave A Reply

Your email address will not be published.