Home latest Chroming: ಬ್ಲೂ ವೇಲ್ ಚಾಲೆಂಜ್ ಥರಾನೇ ಹೊಸ ‘ಕ್ರೋಮಿಂಗ್ ‘ ಚಾಲೆಂಜ್ – 13 ರ...

Chroming: ಬ್ಲೂ ವೇಲ್ ಚಾಲೆಂಜ್ ಥರಾನೇ ಹೊಸ ‘ಕ್ರೋಮಿಂಗ್ ‘ ಚಾಲೆಂಜ್ – 13 ರ ಬಾಲಕಿ ಬಲಿ, ಏನಿದು ಕ್ರೊಮಿಂಗ್ ?!

Chroming Social Media Trend
image source: suvarna nws

Hindu neighbor gifts plot of land

Hindu neighbour gifts land to Muslim journalist

Chroming Social Media Trend: ಕ್ರೋಮಿಂಗ್ ಅನ್ನೋದು ಆಸ್ಟ್ರೇಲಿಯಾದಲ್ಲಿ ಹುಟ್ಟಿ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಗಮನ ಸೆಳೆದಿದೆ ಮತ್ತು ದುರದೃಷ್ಟವಶಾತ್ ಇತರ ದೇಶಗಳಿಗೆ ಹರಡಿದೆ. ಈ ಪದಾರ್ಥಗಳನ್ನು ಉಸಿರಾಡುವ ಕ್ರಿಯೆಯು ಶ್ವಾಸಕೋಶಗಳು, ಹೃದಯ ಮತ್ತು ಮೆದುಳಿಗೆ ಹಾನಿ ಸೇರಿದಂತೆ ದೇಹಕ್ಕೆ ತೀವ್ರವಾದ ಪರಿಣಾಮಗಳನ್ನು ಉಂಟುಮಾಡಬಹುದು. ಇದು ಒಳಗೊಂಡಿರುವ ರಾಸಾಯನಿಕಗಳು ವಿಷಕಾರಿ ಮತ್ತು ಗಂಭೀರವಾದ ಆರೋಗ್ಯ ಅಪಾಯಗಳು, ವ್ಯಸನ ಮತ್ತು ಸಾವಿಗೆ ಕಾರಣವಾಗಬಲ್ಲದು .

ಇದೀಗ ಆಸ್ಟ್ರೇಲಿಯಾದಲ್ಲಿ 13 ವರ್ಷದ ಬಾಲಕಿ ಎಸ್ರಾ ಹೇಯ್ನೆಸ್‌, ಈ ಸೋಶಿಯಲ್‌ ಮೀಡಿಯಾ ಟ್ರೆಂಡ್‌ಗೆ (Chroming Social Media Trend) ಬಲಿಯಾಗಿದ್ದಾಳೆ. ಜನರ ಪ್ರಾಣಕ್ಕೆ ಕಂಟಕವಾಗಿರುವ ಈ ಸೋಶಿಯಲ್‌ ಮೀಡಿಯಾ ಟ್ರೆಂಡ್‌ಅನ್ನು ‘ಕ್ರೋಮಿಂಗ್‌’ ಎನ್ನುವ ಹೆಸರಿನಿಂದ ಕರೆಯಲಾಗುತ್ತಿದೆ. ನೀವು ಬ್ಲೂವೆಲ್ ಕೇಳಿರಬಹುದು ಹಾಗೆಯೇ ಕ್ರೋಮಿಂಗ್‌ ಕೂಡಾ ತಲೆ ಎತ್ತಿದೆ.

ಹೌದು, ಕ್ರೋಮಿಂಗ್‌ ನಲ್ಲಿ ಡಿಯೋಡ್ರೆಂಟ್‌ ಕ್ಯಾನ್‌ಅನ್ನು ಈ ಚಾಲೆಂಜ್‌ನಲ್ಲಿ ಭಾಗವಹಿಸಲು ಬಳಸಿದ್ದ ಬಾಲಕಿ, ಹೃದಯಸ್ತಂಭನದಿಂದ ಸಾವು ಕಂಡಿದ್ದಾಳೆ. ಆಕೆಯ ಮೆದುಳು ಕೂಡ ಸಂಪೂರ್ಣವಾಗಿ ಹಾನಿಯಾಗಿದ್ದು, ಚಿಕಿತ್ಸೆಗೆ ಸ್ವಲ್ಪವೂ ಸಹಕರಿಸದ ರೀತಿಯಲ್ಲಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಈ ಚಾಲೆಂಜ್‌ನ ಪ್ರಮುಖ ಅಂಶ ಏನೆಂದರೆ, ವಿಷಕಾರಿ ಆಗಿರುವ ವಸ್ತುಗಳನ್ನು ಉಸಿರಾಡಬೇಕು. ಇದು ಮತ್ತು ಏರಿಸುವಂಥ ಉತ್ಪನ್ನಗಳಾಗಿರಬೇಕು. ಮೆಟಾಲಿಕ್‌ ಪೇಂಟ್‌, ಪೆಟ್ರೋಕೆಮಿಕಲ್ಸ್‌, ಸ್ಲೋವಲೆಂಟ್ಸ್‌, ಡಿಯೋಡ್ರೆಂಟ್‌ ಹಾಗೂ ಕೆಮಿಕಲ್ಸ್‌ಗಳನ್ನು ಉಸಿರಾಡಬೇಕು. ಉದ್ದೇಶಪೂರ್ವಕವಾಗಿ ಇವುಗಳನ್ನು ಉಸಿರಾಡಿದರೆ, ಅಥವಾ ಮಿತಿಮೀರಿಯಾಗಿ ಇವುಗಳ ಉಸಿರಾಟ ಮಾಡಿದರೆ ದೇಹದ ಮೇಲೆ ಪರಿಣಾಮ ಬೀರುತ್ತದೆ.

ಇನ್ನು ಎಸ್ರಾ ಹೇಯ್ನಸ್‌ ಡಿಯೋಡ್ರೆಂಟ್‌ ಚಾಲೆಂಜ್‌ಅನ್ನು ಕ್ರೋಮಿಂಕ್‌ನಲ್ಲಿ ಮಾಡಿದ್ದರು. ರಾತ್ರಿ ಮಲಗುವ ವೇಳೆ ಎಸ್ರಾ ಡಿಯೋಡ್ರೆಂಟ್‌ ಚಾಲೆಂಜ್‌ ಮಾಡಿ ಮಲಗಿದ್ದಳು. ಡಿಯೋಡ್ರೆಂಟ್‌ಅನ್ನು ಉಸಿರಾಡಿದ್ದರಿಂದ ರಾತ್ರಿ ನಿದ್ರೆಯಲ್ಲಿಯೇ ಆಕೆಗೆ ಹೃದಯಸ್ತಂಭನವಾಗಿದೆ.

8 ದಿನಗಳ ಕಾಲ ಆಕೆಯನ್ನು ವೆಂಟಿಲೇಟರ್‌ನಲ್ಲಿ ಇರಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾಳೆ. ಆಕೆಯ ಮೆದುಳಿಗೆ ಎಷ್ಟು ಪ್ರಮಾಣದ ಹಾನಿಯಾಗಿತ್ತೆಂದರೆ, ಚಿಕಿತ್ಸೆ ಮಾಡೋದು ಸಾಧ್ಯವೇ ಇರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಕೊನೆಗೆ ವೆಂಟಿಲೇಟರ್‌ಅನ್ನು ಆಫ್‌ ಮಾಡಿದ ಬೆನ್ನಲ್ಲಿಯೇ ಆಕೆ ಸಾವು ಕಂಡಿದ್ದಾಳೆ.

ಈಕೆಯ ಸಾವು ಆಸ್ಟ್ರೇಲಿಯಾದಲ್ಲಿ ಆಘಾತಕ್ಕೆ ಕಾರಣವಾಗಿದೆ. ಆಕೆಯ ಸಾವಿನ ಕುರಿತು ‘ಸದ್ಯ ನನ್ನ ಮಗಳ ಸಾವಿನೊಂದಿಗೆ ನಾನು ಉಳಿದ ಎಲ್ಲಾ ಮಕ್ಕಳಿಗೂ ಒಂದು ಮಾತನ್ನು ಹೇಳಲು ಬಯಸುತ್ತೇನೆ. ಇಂಥ ಸಿಲ್ಲಿಯಾಗಿರುವ ಟ್ರ್ಯಾಪ್‌ಗಳಿಗೆ ಬಲಿಯಾಗಬೇಡಿ. ಇಷ್ಟುದಿನ ಮನೆಯಲ್ಲಿ ಆಟವಾಡಿಕೊಂಡು ಇರುತ್ತಿದ್ದ ನನ್ನ ಮಗಳು ಈಗ ಇಲ್ಲ ಎಂದುಕೊಳ್ಳೋದು ಹೇಗೆ’ ಎಂದು ಬಾಲಕಿಯ ತಂದೆ ಪೌಲ್‌ ಹೇಯ್ನಸ್‌ ಹೇಳಿದ್ದಾರೆ.

 

ಇದನ್ನು ಓದಿ: Shocking News: ಟಿಕ್ ಟಾಕ್ ನೋಡಿ ಮೊಟ್ಟೆ ಬೇಯಿಸಲು ವಿಫಲಯತ್ನ; ಸ್ಫೋಟಗೊಂಡ ಮೊಟ್ಟೆ, ಒಡೆದು ಹೋದ ಮುಖ!