Honey Bees Theft: ಅಬ್ಬಬ್ಬಾ!! 10 ಲಕ್ಷಕ್ಕೂ ಅಧಿಕ ಜೇನುನೊಣಗಳ ಕಳ್ಳತನ ; ಯಾಕಾಗಿ?!

Honey Bees Theft in UK

Honey Bees Theft: ಜನರು ಕಷ್ಟಪಟ್ಟು ಸಾಕಿದ ಜೇನು ನೊಣಗಳನ್ನು ಕಳ್ಳತನ ಮಾಡಿರುವ ಘಟನೆ ಯುಕೆಯಲ್ಲಿ (UK) ನಡೆದಿದೆ. ಈ ಕಳ್ಳರು 2011 ರಿಂದ ಇಲ್ಲಿಯವರೆಗೆ 10 ಲಕ್ಷಕ್ಕೂ ಹೆಚ್ಚು ಜೇನುನೊಣಗಳನ್ನು ಅಪಹರಣ (Honey Bees Theft) ಮಾಡಿದ್ದಾರೆ. ಅದರಲ್ಲೂ ರಾಣಿ ಜೇನುಗಳನ್ನು ಹೆಚ್ಚು ಗುರಿಯಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಖದೀಮರು 135 ಜೇನು ಗೂಡುಗಳನ್ನು ಸಹ ಕದ್ದಿದ್ದಾರೆ.

 

ಜೇನು ಸಾಕಾಣಿಕೆ ಮಾಡುತ್ತಿದ್ದ ರೈತರು ಕಳ್ಳರ ಕಾಟಕ್ಕೆ ಬೇಸತ್ತು ಹೋಗಿದ್ದಾರೆ. ಕೆಲವರು ವರ್ಷಗಟ್ಟಲೆ ಸಾಕಾಣೆ ಮಾಡುತ್ತಿದ್ದ ತಮ್ಮ ವ್ಯಾಪಾರವನ್ನೇ ನಿಲ್ಲಿಸಿದ್ದಾರೆ. ಹಲವು ರೈತರಿಗೆ ಕಳ್ಳರ ಕಾಟದಿಂದ ಜೇನುತುಪ್ಪ ರೆಡಿ ಮಾಡಲು ಸಾಧ್ಯವಾಗದೆ ನಷ್ಟ ಉಂಟಾಗಿದೆ. ತಮ್ಮ ಜೀವನೋಪಾಯಕ್ಕೆ ರೈತರು ಜೇನು ಕೃಷಿ ಅವಲಂಬಿಸಿದರೆ ಈ ಕಳ್ಳರು ಅದನ್ನು ಕಿತ್ತುಕೊಳ್ಳುತ್ತಿದ್ದಾರೆ.

ಗೈ ವಿಲಿಯಮ್ಸ್ (60) ಎಂಬವರು ಈ ಬಗ್ಗೆ ಮಾತನಾಡಿದ್ದು, ಕಳೆದ ಇಪ್ಪತ್ತು ವರ್ಷಗಳಲ್ಲಿ ಅವರು ಸಾಕಿರುವ ಹಲವು ರಾಣಿ ಜೇನುನೊಣಗಳನ್ನು ಕಳವು ಮಾಡಲಾಗಿದೆ. ಕಳ್ಳರು ರಾಣಿ ಜೇನುಗಳನ್ನು ಹೆಚ್ಚು ಗುರಿಯಾಗಿಸಿಕೊಂಡಿದ್ದಾರೆ. ಯಾಕೆಂದರೆ, ರಾಣಿ ಜೇನುನೊಣ ಕಣ್ಮರೆಯಾದ ತಕ್ಷಣ, ಉಳಿದ ಜೇನುನೊಣಗಳು ಸಹ ಒಟ್ಟಿಗೆ ಕಣ್ಮರೆಯಾಗುತ್ತವೆ ಎಂದು ಹೇಳಿದರು.

ಖದೀಮರು ಜೇನು ನೊಣಗಳನ್ನು (Honey Bees) ಅಪಹರಿಸಿ ಅದರಿಂದ ಜೇನು ಸಂಗ್ರಹಿಸುತ್ತಾರೆ. ತಮಗೆ ಬೇಕಾದಷ್ಟು ಜೇನು ಸಂಗ್ರಹಿಸಬಹುದು. ಅದಕ್ಕಾಗಿಯೇ ಜೇನು ನೋಣದೊಡನೆ ಜೇನು ಗೂಡುಗಳನ್ನು ಕಳವು ಮಾಡಿದ್ದಾರೆ. ಆದರೆ, ಈವರೆಗೂ ಪೊಲೀಸರಿಗೆ ಕಳ್ಳರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಹಲವು ವರ್ಷಗಳಿಂದ ತನಿಖೆ ನಡೆಯುತ್ತಲೇ ಇದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Bageshwar Baba: ಹಿಂದೂ ಒಂದಾದರೆ ಪಾಕಿಸ್ತಾನವನ್ನು ಕೂಡಾ ಹಿಂದೂ ರಾಷ್ಟ್ರ ಮಾಡಬಹುದು – Bageshwar Baba ಹೇಳಿಕೆ!

Leave A Reply

Your email address will not be published.