Puttur: ಬಸ್ಸು-ಬೈಕ್‌ ಅಪಘಾತ; ಇಬ್ಬರು ವಿದ್ಯಾರ್ಥಿಗಳಿಗೆ ತೀವ್ರ ಗಾಯ

Puttur: ಪುತ್ತೂರಿನ ಹೊರವಲಯ ದಾರಂದಕುಕ್ಕು ಕೊಲ್ಯದಲ್ಲಿ ಜ.08 ರಂದು ಬೈಕ್‌ ಮತ್ತು ಬಸ್‌ ನಡುವೆ ಡಿಕ್ಕಿ ಸಂಭವಿಸಿದ್ದು, ಬೈಕ್‌ನಲ್ಲಿದ್ದ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ಬೆಳಿಗ್ಗೆ ನಡೆದಿದೆ.

ಬೆಳ್ಳಿಪ್ಪಾಡಿ ನಿವಾಸಿಗಳಾಗಿರುವ ಸುಳ್ಯ ಕೆವಿಜಿ ಪಾಲಿಟೆಕ್ನಿಕ್‌ ವಿದ್ಯಾರ್ಥಿ ಬೈಕ್‌ ಸವಾರ ನಿಶಾಂತ್‌ ಮತ್ತು ಹಿಂಬದಿ ಸವಾರ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿ ಕಾರ್ತಿಕ್‌ ಎಂಬುವವರು ಗಾಯಗೊಂಡ ವಿದ್ಯಾರ್ಥಿಗಳು.

ಬೈಕ್‌ನಲ್ಲಿ ಪೂತ್ತೂರಿಗೆ ಬರುತ್ತಿದ್ದ ಸಂದರ್ಭದಲ್ಲಿ ವಿರುದ್ಧ ದಿಕ್ಕಿನ ಕಡೆಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್‌ ನಡುವೆ ಡಿಕ್ಕಿ ಸಂಭವಿಸಿದ್ದು, ಗಾಯಾಳುಗಳನ್ನು ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದೊಯ್ಯಲಾಗಿರುವ ಕುರಿತು ವರದಿಯಾಗಿದೆ.

Comments are closed.