Yuzvendra Chahal: ಧನಶ್ರೀ ವರ್ಮಾರಿಂದ ವಿಚ್ಛೇದನದ ಬಗ್ಗೆ ಯುಜ್ವೇಂದ್ರ ಚಹಾಲ್ ಮೊದಲ ಪ್ರತಿಕ್ರಿಯೆ!

Share the Article

Yuzvendra Chahal ಕ್ರಿಕೆಟಿಗ ಯುಜ್ವೇಂದ್ರ ಚಹಾಲ್‌, ಧನಶ್ರೀ ವರ್ಮಾ ವಿಚ್ಛೇದನದ ಕುರಿತು ಹೊಸ ಸುದ್ದಿಯೊಂದು ಹೊರಬಿದ್ದಿದೆ. ಇಬ್ಬರೂ ಕೂಡಾ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದಾರೆ. ಧನಶ್ರೀ ವಿಚ್ಛೇದನದ ನಂತರ ಯುಜ್ವೇಂದ್ರ ಚಹಾಲ್ ಅವರ ಮೊದಲ ಪ್ರತಿಕ್ರಿಯೆ ಬೆಳಕಿಗೆ ಬಂದಿದೆ.

ಯುಜ್ವೇಂದ್ರ ಚಾಹಲ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದಾರೆ. ಇದು ಧನಶ್ರೀಯಿಂದ ವಿಚ್ಛೇದನದ ಸುದ್ದಿಗೆ ಲಿಂಕ್ ಆಗಿದೆ. ಪೋಸ್ಟ್‌ನಲ್ಲಿ ಈ ರೀತಿ ಬರೆಯಲಾಗಿದೆ – ‘ಮೌನವು ಆಳವಾದ ಧ್ವನಿ, ಅದನ್ನು ಎಲ್ಲಾ ಗದ್ದಲದಿಂದ ಕೇಳುವವರಿಗೆ.’

ಈ ಹಿಂದೆಯೂ ಸಹ, ಯುಜ್ವೇಂದ್ರ ಚಹಾಲ್ ಅವರು ಕಷ್ಟಪಟ್ಟು ಕೆಲಸ ಮಾಡುವ ಬಗ್ಗೆ ಮತ್ತು ತನ್ನ ಹೆತ್ತವರ ಬಗ್ಗೆ ಹೆಮ್ಮೆ ಪಡುವ ಬಗ್ಗೆ ಪೋಸ್ಟ್ ಮಾಡಿದ್ದರು. ಧನಶ್ರೀಯಿಂದ ವಿಚ್ಛೇದನದ ಸುದ್ದಿಯ ನಡುವೆ, ಯುಜ್ವೇಂದ್ರ ಚಹಾಲ್ ಇತ್ತೀಚೆಗೆ ನಿಗೂಢ ಹುಡುಗಿಯೊಂದಿಗೆ ಕಾಣಿಸಿಕೊಂಡರು. ದಿ ನ್ಯೂ ಇಂಡಿಯಾ ಹಂಚಿಕೊಂಡ ವೀಡಿಯೊದಲ್ಲಿ, ಯುಜುವೇಂದ್ರ ಹುಡುಗಿಯೊಂದಿಗೆ ಹೋಟೆಲ್‌ನಿಂದ ಹೊರಡುತ್ತಿರುವ ವೀಡಿಯೋ ವೈರಲ್‌ ಆಗಿತ್ತು. ಈ ವೇಳೆ ಕ್ರಿಕೆಟಿಗ ಕೂಡ ಕ್ಯಾಮರಾ ನೋಡಿ ಮುಖ ಮರೆಸಿಕೊಂಡಿದ್ದಾರೆ.

ಧನಶ್ರೀ ವರ್ಮಾ ಅವರು ಮುಂಬರುವ ಸಂಗೀತ ವೀಡಿಯೊ ಜುಟ್ಟಿ ಕಸೂರಿ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಹಾಗಾಗಿ ಧನಶ್ರೀ ತಮ್ಮ ವಿಚ್ಛೇದನದ ಸುದ್ದಿಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಧನಶ್ರೀ ಮತ್ತು ಯುಜುವೇಂದ್ರ ವಿಚ್ಛೇದನದ ಸುದ್ದಿ ಬರುತ್ತಿರುವುದು ಇದೇ ಮೊದಲಲ್ಲ. 2023 ರಲ್ಲಿ, ಧನಶ್ರೀ ತನ್ನ ಇನ್‌ಸ್ಟಾಗ್ರಾಮ್ ತನ್ನ ಗಂಡನ ಉಪನಾಮ ‘ಚಹಲ್’ ಅನ್ನು ತೆಗೆದುಹಾಕಿದಾಗ, ಅವರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ವರದಿಯಾಗಿತ್ತು. ಆದರೆ, ಈ ಸುದ್ದಿಗಳು ಕೇವಲ ವದಂತಿ ಎಂದು ಯುಜುವೇಂದ್ರ ಹೇಳಿದ್ದರು.

Comments are closed.