Home latest Shocking News: ಟಿಕ್ ಟಾಕ್ ನೋಡಿ ಮೊಟ್ಟೆ ಬೇಯಿಸಲು ವಿಫಲಯತ್ನ; ಸ್ಫೋಟಗೊಂಡ ಮೊಟ್ಟೆ, ಒಡೆದು ಹೋದ...

Shocking News: ಟಿಕ್ ಟಾಕ್ ನೋಡಿ ಮೊಟ್ಟೆ ಬೇಯಿಸಲು ವಿಫಲಯತ್ನ; ಸ್ಫೋಟಗೊಂಡ ಮೊಟ್ಟೆ, ಒಡೆದು ಹೋದ ಮುಖ!

Shocking News
Image source: vijayavani

Hindu neighbor gifts plot of land

Hindu neighbour gifts land to Muslim journalist

Shocking News: ಟಿಕ್​ಟಾಕ್​ (tiktok) ವಿಡಿಯೋ ನೋಡಿ ಮೊಟ್ಟೆ ಬೇಯಿಸಲು ಹೋಗಿ ಯುವತಿಯೋರ್ವಳು ತನ್ನ ಮುಖವನ್ನು ವಿರೂಪಗೊಳಿಸಿದ್ದಾಳೆ. ಹೌದು, ಶಾಫಿಯಾ ಬಶೀರ್ (37 ವ.) ಎಂಬಾಕೆ ಟಿಕ್​ಟಾಕ್ ನಲ್ಲಿ ವೈರಲ್ ಆಗಿದ್ದ ಮೊಟ್ಟೆ ಬೇಯಿಸುವ ವಿಡಿಯೋ ನೋಡಿ, ಅದೇ ರೀತಿ ಮಾಡಲು ಪ್ರಯತ್ನಪಟ್ಟು ಮೊಟ್ಟೆ ಸ್ಫೋಟಗೊಂಡು ಮುಖ ಸುಟ್ಟುಕೊಂಡಿದ್ದಾಳೆ (Shocking News).

ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ನಾನಾ ತರಹದ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಅಡುಗೆ ಸಂಬಂಧಿಸಿದ ವಿಡಿಯೋಗಳು ಸಾಕಷ್ಟಿರುತ್ತದೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ನಾವು ನೋಡುವ ಎಲ್ಲಾ ಘಟನೆ, ವಿಷಯಗಳು ಸತ್ಯವಲ್ಲ ಎಂಬುದು ಗಮನದಲ್ಲಿರಬೇಕಾದ ವಿಷಯ. ಇಂದಿನ ದಿನದಲ್ಲಿ ಲೈಕ್ಸ್, ಕಾಮೆಂಟ್’ಗಾಗಿ ಎಂತೆಂತಹ ವಿಡಿಯೋಗಳು ಹರಿದಾಡುತ್ತಿರುತ್ತದೆ.

Image source: vijayavani

ಇದೀಗ ಸಂತ್ರಸ್ತ ಮಹಿಳೆಯು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ಮೊಟ್ಟೆಯ ವಿಡಿಯೋ ನೋಡಿ ಮುಖವೇ ಸುಟ್ಟುಕೊಂಡಿದ್ದಾಳೆ. ಅಷ್ಟಕ್ಕೂ ಆಕೆ ಮಾಡಿದ್ದಾದರೂ ಏನು? ಇಲ್ಲಿದೆ ನೋಡಿ ಮಾಹಿತಿ. ಮಹಿಳೆ ಕೆಲ ಮೊಟ್ಟೆಗಳನ್ನು ಕುದಿಯುವ ನೀರಿಗೆ ಹಾಕಿದ್ದಾಳೆ. ನಂತರ ನಂತರ ಅದನ್ನು ಮೈಕ್ರೋವೇವ್​ನಲ್ಲಿ ಒಂದೆರಡು ನಿಮಿಷಗಳ ಕಾಲ ಇಟ್ಟು, ತಣ್ಣನೆಯ ಚಮಚದಿಂದ ಮೊಟ್ಟೆಯನ್ನು ಹೊರ ತೆಗೆಯಲು ಪ್ರಯತ್ನಿಸಿದ್ದಾಳೆ. ಆದರೆ, ಈ ವೇಳೆ ಮೊಟ್ಟೆ ಸ್ಫೋಟಗೊಂಡಿದೆ. ಪರಿಣಾಮ ಆಕೆಯ ಮುಖದ ಬಲಭಾಗ ಸುಟ್ಟು ಹೋಗಿದೆ.

ತಕ್ಷಣವೇ ಆಕೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆ ನಂತರ ಇದೀಗ ಮುಖವು ವಾಸಿಯಾಗಿದೆ. ಯಾವುದೇ ಗಾಯದ ಗುರುತುಗಳಿಲ್ಲ ಎಂದು ಬಶೀರ್ ಹೇಳಿದ್ದಾರೆ. ಅಲ್ಲದೆ, ಜನರಿಗೆ ಸಂದೇಶವನ್ನೂ ತಿಳಿಸಿದ್ದಾರೆ. ಇದು ತನ್ನ ಜೀವನದ ‘ಅತ್ಯಂತ ಅಸಹನೀಯ’ ನೋವು. ಈ ರೀತಿಯ ಪ್ರಯತ್ನ ಯಾರು ಕೂಡ ಮಾಡಬೇಡಿ. ಸೋಷಿಯಲ್ ಮೀಡಿಯಾದಲ್ಲಿ ನೋಡಿ ಯಾವುದೇ ಪ್ರಯೋಗ ಮಾಡಲು ಹೋಗಬೇಡಿ ಎಂದು ಸಲಹೆ ನೀಡಿದ್ದಾರೆ.

 

ಇದನ್ನು ಓದಿ: Child Death: ಬಾತ್ ರೂಮಿನಲ್ಲಿದ್ದ ಬಕೆಟ್’ಗೆ ತಲೆಕೆಳಗಾಗಿ ಬಿದ್ದ 10 ತಿಂಗಳ ಮಗು ಸಾವು !