Andhra Pradesh: ಪತಿಯ ಶವಸಂಸ್ಕಾರವನ್ನು ಮನೆಯಲ್ಲಿಯೇ ಮಾಡಿದ ಪತ್ನಿ ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!!
Wife cremated husband at home in Andhra Pradesh


Andhra Pradesh: ವ್ಯಕ್ತಿ ಸಾವನ್ನಪ್ಪಿದ (death) ನಂತರ ಹಲವು ಜನರು ಸೇರಿ ಆತನ ಅಂತಿಮ ಸಂಸ್ಕಾರ ನಡೆಸಲಾಗುತ್ತದೆ. ಆದರೆ, ಇಲ್ಲೊಬ್ಬ ಮಹಿಳೆ ಸಾವನ್ನಪ್ಪಿರುವ ಗಂಡನ ಶವಸಂಸ್ಕಾರ ಹೇಗೆ ಮಾಡಿದ್ದಾಳೆ ಗೊತ್ತಾ? ಅನಾರೋಗ್ಯದಿಂದ ಸಾವನ್ನಪ್ಪಿದ ಪತಿಯ ಶವಸಂಸ್ಕಾರವನ್ನು ಪತ್ನಿಯು ಮನೆಯಲ್ಲಿಯೇ ಮಾಡಿರುವ ಆಘಾತಕಾರಿ ಘಟನೆ (Shocking News) ಆಂಧ್ರ ಪ್ರದೇಶದ (Andhra Pradesh) ಕರ್ನೂಲ್ ನಲ್ಲಿ ನಡೆದಿದೆ.

ಮೃತನನ್ನು ಕರ್ನೂಲ್ ಜಿಲ್ಲೆಯ ಪಟಿಕೊಂಡ ಪಟ್ಟಣದ ಪೋತುಗಂಟಿ ಲಲಿತಾ ಎಂಬವರ ಪತ್ನಿ ಹರಿಕೃಷ್ಣ ಪ್ರಸಾದ್ ಎನ್ನಲಾಗಿದೆ. ಹರಿಕೃಷ್ಣ ಪ್ರಸಾದ್ ಮೆಡಿಕಲ್ ಶಾಪ್ ನಡೆಸುತ್ತಿದ್ದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇದೀಗ ಪತಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಇಬ್ಬರು ಪುತ್ರರು
ದೂರದ ಊರಿನಲ್ಲಿ ಕೆಲಸದಲ್ಲಿರುವ ಕಾರಣ ಮೃತ ತಂದೆಯನ್ನು ನೋಡಲು ಮನೆಗೆ ಬಂದಿಲ್ಲ. ಸಂಸ್ಕಾರ ಮಾಡಿಲ್ಲ. ಹಾಗಾಗಿ ಮಹಿಳೆ
ರಟ್ಟಿನ ಡಬ್ಬಿಗಳನ್ನು ಹಾಕಿ ಪತಿಯ ಮೃತ ದೇಹಕ್ಕೆ ಬೆಂಕಿ ಹಚ್ಚಿ, ಅಂತ್ಯಸಂಸ್ಕಾರ ಮಾಡಿದ್ದಾರೆ.
ವಿಪರ್ಯಾಸವೆಂದರೆ ಇಂದಿನ ದಿನದಲ್ಲಿ ಮಕ್ಕಳು ಹೆತ್ತವರ ಬಳಿ ಆಸ್ತಿಗಾಗಿ ಮಾತ್ರ ಬರುತ್ತಿದ್ದಾರೆ. ಹಾಗೆಯೇ ಇವರ ಮಕ್ಕಳು ಕೂಡ
ಆಸ್ತಿಗಾಗಿ ಮಾತ್ರವೇ ಬಳಿ ಬರುತ್ತಿದ್ದರು. ಇನ್ನು ಸಾವಿನ ವಿಚಾರ ತಿಳಿದರೆ ಕೇಳಬೇಕಾ. ತಂದೆಯ ಸಾವಿನ ದುಃಖಕ್ಕಿಂತ ಆಸ್ತಿಯಲ್ಲಿ ಎಷ್ಟು ಪಾಲು ಸಿಗುತ್ತದೆ ಎಂದು ನೋಡುತ್ತಾರೆ. ಈ ಭಯದಿಂದಲೇ ಮಕ್ಕಳು ಮನೆಗೆ ಬಂದು ಜಗಳವಾಡುತ್ತಾರೆ ಎಂದೇ ಪತಿಯ ಅಂತ್ಯ ಸಂಸ್ಕಾರವನ್ನು ಪತ್ನಿ ಈ ರೀತಿ ಮಾಡಿದ್ದಾಳೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ.
ಇದನ್ನು ಓದಿ: Udupi: ವಿದ್ಯೆಯಲ್ಲಿ ಗೆದ್ದು, ಜೀವನದಲ್ಲಿ ಸೋತ ಯುವತಿ; ತಕ್ಷಣ ಉದ್ಯೋಗ ಸಿಗಲಿಲ್ಲ ಎಂದು ವರ್ಷದೊಳಗೆ ಯುವತಿ ಆತ್ಮಹತ್ಯೆ
