Bengaluru: ಬೆಂಗಳೂರಲ್ಲಿ ಕಿಕ್ ಏರಿದ ಎಣ್ಣೆ ಪಾರ್ಟಿ ಎಡವಟ್ಟು.! ಗೆಳೆಯರಿಂದಲೇ ಸ್ನೇಹಿತನಿಗೆ ಚಾಕು ಇರಿತ
A friend was stabbed by a friend at Bengaluru

Bengaluru : ಸಿಲಿಕಾನ್ ಸಿಟಿ ಬೆಂಗಳೂರಿನ( Bengaluru) ಮಹಾಲಕ್ಷ್ಮಿ ಲೇಔಟ್ ನಲ್ಲಿ ನಿನ್ನೆ ತಡರಾತ್ರಿ ಕಂಠಪೂರ್ತಿ ಕುಡಿದು ಪಾರ್ಟಿ ವೇಳೆ ಚಾಕು ಇರಿದ ಘಟನೆ ಬೆಳಕಿಗೆ ಬಂದಿದೆ.

ಜೊತೆಗೆ ಕೆಲಸ ಮಾಡುತ್ತಿದ್ದ ಸ್ನೇಹಿತರರೊಂದಿಗೆ ರಾತ್ರಿ ಮನೆ ಮಹಡಿಯ ಮೇಳೆ ಕಂಠಪೂರ್ತಿ ಕುಡಿದುಕೊಂಡು ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಿದ್ದರು. ಆ ವೇಳೆ ಮಾತಿಗೆ ಮಾತು ಬೆಳೆದು ರಾಮಚಂದ್ರ ಅಲಿಯಾಸ್ ಭಗಾಡೆ ಎಂಬುವರಿಗೆ ಗೆಳೆಯರೇ ಚಾಕು ಇರಿದಿದ್ದಾರೆ. ಚಾಕು ಇರಿತದಿಂದ ಗಂಭೀರ ಗಾಯಗೊಂಡಿದ್ದು, ರಕ್ತ ಸುರಿಯುತ್ತಿದ್ದಂತೆ ವಿಕ್ಟೋರಿಯಾ ಆಸ್ಪತ್ರೆ ದಾಖಲಿಸಿದ್ದಾರೆ, ಕೂಡಲೇ ಚಿಕಿತ್ಸೆ ನೀಡಿದ ಕಾರಣದಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ .
ರಾಮಚಂದ್ರ ಅಲಿಯಾಸ್ ಭಗಾಡೆ ಚಾಕು ಇರಿತಕ್ಕೆ ಒಳಗಾದ ಯುವಕ ಎಂದು ಗುರುತಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾದ ಮೂವರನ್ನು ವಿಚಾರಣೆ ನಡೆಸಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಾಲಾಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.