PSI Recruitment Scam: ಪಿಎಸ್ ಐ ನೇಮಕಾತಿ ಹಗರಣ : ಕಾಂಗ್ರೆಸ್ ಸರ್ಕಾರದಿಂದ ಪ್ರಕರಣದ ಮರುತನಿಖೆ ; ಹೊರಬರಲಿದೆ ಬಿಜೆಪಿ ನಾಯಕರ ಅಕ್ರಮಗಳು!!

Congress to re investigate Karnataka PSI recruitment scam

Psi Recruitment Scam: ಇದೀಗ ರಾಜ್ಯದಲ್ಲಿ ಕಾಂಗ್ರೆಸ್ (congress) ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಸಿಎಂ ಸಿದ್ದರಾಮಯ್ಯ (CM Siddaramaiah) ಐದು ಗ್ಯಾರಂಟಿಗಳ ಅನುಷ್ಟಾನದ ಚಿಂತನೆಯ ಮಧ್ಯೆ ಇದೀಗ ಕಾಂಗ್ರೆಸ್ ಸರ್ಕಾರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ನೇಮಕಾತಿ ಹಗರಣದ (Psi Recruitment Scam) ಬಗ್ಗೆ ಮರು ತನಿಖೆ ನಡೆಸಲಿದೆ.

ಪಿಎಸ್ ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಡಿಜಿಪಿ ಶ್ರೇಣಿಯ ಅಧಿಕಾರಿ ಸೇರಿದಂತೆ 30ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಈ ಹಗರಣದ ಬಗ್ಗೆ ನಿನ್ನೆ ಪೊಲೀಸ್ ಅಧಿಕಾರಿಗಳ ಜತೆಗಿನ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (dk shivakumar) ಮಾತನಾಡಿದ್ದು, ಇಲಾಖೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪಿಎಸ್ ಐ ಪರೀಕ್ಷೆಗೆ 54,041 ಅಭ್ಯರ್ಥಿಗಳು ಹಾಜರಾಗಿದ್ದರು. 545 ಅಭ್ಯರ್ಥಿಗಳಲ್ಲಿ 300ಕ್ಕೂ ಹೆಚ್ಚು ಅಭ್ಯರ್ಥಿಗಳು ಪಿಎಸ್‌ಐ ಆಗಲು ಅಧಿಕಾರಿಗಳು ಮತ್ತು ಸಚಿವರಿಗೆ 70 ರಿಂದ 80 ಲಕ್ಷ ರೂಪಾಯಿ ಲಂಚ ನೀಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದರು. ಆಗ ಆಡಳಿತದಲ್ಲಿದ್ದ ಬಿಜೆಪಿ ಸಿಐಡಿ ಮುಂದೆ ಸಾಕ್ಷ್ಯಾಧಾರಗಳನ್ನು ನೀಡುವಂತೆ ಕಾಂಗ್ರೆಸ್ ಗೆ ಕೇಳಿತ್ತು. ಇದೀಗ ಕಾಂಗ್ರೇಸ್ ಸರ್ಕಾರ ಹಗರಣದ ಮರುತನಿಖೆಗೆ ಪ್ರಸ್ತಾಪಿಸಿದೆ.

ಹಗರಣದಲ್ಲಿ ಬಿಜೆಪಿಯ ಹಲವು ಪ್ರಮುಖ ನಾಯಕರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆಗೆ ಕಾಂಗ್ರೆಸ್ ನಾಯಕರು ತೀವ್ರವಾಗಿ ಒತ್ತಾಯಿಸಿದ್ದರು. ಹಾಗೇ ಮಾಜಿ ಸಚಿವ ಡಾ. ಸಿ.ಎನ್.ಅಶ್ವತ್ ನಾರಾಯಣ ಅವರ ಭ್ರಷ್ಟಾಚಾರದ ಬಗ್ಗೆ ಆರೋಪಿಸಿದ್ದರು. ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಅವರ ಪಾತ್ರವನ್ನೂ ಉಲ್ಲೇಖಿಸಿದ್ದರು. ಸದ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಎಲ್ಲಾ ಹಗರಣಗಳನ್ನು ಕಾಂಗ್ರೆಸ್ ಸರ್ಕಾರ ತನಿಖೆಗೆ ಒಳಪಡಿಸುತ್ತದೆ ಎಂದು ಸಂಪುಟ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಈ ಹಿಂದೆ ಬಂಧಿತರಾಗಿರುವ ಎಡಿಜಿಪಿ ಅಮೃತ್ ಪಾಲ್ ಇನ್ನೂ ಜೈಲಿನಲ್ಲಿದ್ದಾರೆ. ತನಿಖೆ ಈ ಹಂತದಲ್ಲಿರುವಾಗ ಬಿಜೆಪಿಯ ಪ್ರಬಲ ರಾಜಕಾರಣಿಗಳ ಕೈವಾಡವಿದ್ದು ತನಿಖೆ ಮುಂದುವರಿಸಲಾಗುವುದು ಎಂದಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ಈಗಾಗಲೇ ಎರಡು ಚಾರ್ಜ್ ಶೀಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಇನ್ನೂ ಪ್ರಕರಣದ ತನಿಖೆ ನಡೆಸುತ್ತಿದೆ. ಕಾಂಗ್ರೆಸ್ ನಾಯಕತ್ವವು ತನಿಖೆಯನ್ನು ಚುರುಕುಗೊಳಿಸಿ ಬಿಜೆಪಿ ನಾಯಕರ ಅಕ್ರಮಗಳನ್ನು ಹೊರಗೆ ತರಲಿದೆ ಎಂದು ಹೇಳಿದರು.

ಇದನ್ನೂ ಓದಿ: Rishab Shetty: ಹೊಸ ಉದ್ಯಮಕ್ಕೆ ರಿಷಬ್ ಎಂಟ್ರಿ ; ಹುಟ್ಟೂರಿನ ಹೆಸರಲ್ಲಿ ಹೊಸ ಸಂಸ್ಥೆ ಕಟ್ಟಿದ ಶೆಟ್ರು!!

Leave A Reply

Your email address will not be published.