BBMP: ಅಕಾಲಿಕ ಮಳೆ ಅವಘಡ ತಪ್ಪಿಸಲು BBMP ಮಾಸ್ಟರ್‌ ಪ್ಲಾನ್‌.! ತಾತ್ಕಾಲಿಕ ಮಾನ್ಸೂನ್ ಕಂಟ್ರೋಲ್ ರೂಮ್ ಸ್ಥಾಪನೆ

BBMP master plan to avoid untimely rain disaster

BBMP: ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಅಕಾಲಿಕ ಮಳೆ ಸುರಿಯುತ್ತಿದ್ದಂತೆ ಅವಘಡಗಳು ಹೆಚ್ಚಾಗುತ್ತಿದ್ದು, ನಿಯಂತ್ರಣಕ್ಕೆ ತಾತ್ಕಾಲಿಕ ಮಾನ್ಸೂನ್ ಕಂಟ್ರೋಲ್ ರೂಮ್ ಸ್ಥಾಪನೆಗೆ ಮುಂದಾಗಿದೆ. ಕಳೆದ ಹಲವು ದಿನಗಳಿಂದ ಬೆಂಗಳೂರು ನಗರದಲ್ಲಿ ದಿಢೀರ್‌ ಮಳೆ ಶುರುವಾಗಿದ್ದು, ಮಳೆಯಿಂದಾಗಿ ಭಾರೀ ಅವಘಡ ಶುರುವಾಗಿದೆ.

ಮರಗಳು ಧರೆಗುರುಳಿದ್ದು, ಅಲ್ಲದೇ ಅಂಡರ್‌ ಪಾಸ್‌ ಮುಳುಗಡೆ, ಹೀಗೆ ಹತ್ತಾರು ಸಮಸ್ಯೆಗಳಿಂದ ಜನರು ತತ್ತರಿಸಿಹೋಗಿದ್ದಾರೆ. ಈ ನಿಟ್ಟಿನಲ್ಲಿ ನಿಲ್ಲದ ಅವಾಂತರಕ್ಕೆ ಬಿಬಿಎಂಪಿ ತಲೆಕೆಡಿಸಿಕೊಂಡಿದ್ದು, ಅಕಾಲಿಕ ಮಳೆ ಅವಘಡ ತಪ್ಪಿಸಲು BBMP ನಗರದಲ್ಲಿ ತಾತ್ಕಾಲಿಕ ಮಾನ್ಸೂನ್ ಕಂಟ್ರೋಲ್ ರೂಮ್‌ ತೆರೆದಿದೆ. ಅಲ್ಲದೇ ಪಾಲಿಕೆ ಉಪವಿಭಾಗ ಮಟ್ಟದಲ್ಲಿ 63 ತಾತ್ಕಾಲಿಕ ಮಾನ್ಸೂನ್ ಕಂಟ್ರೋಲ್ ರೂಮ್​ ಸ್ಥಾಪಿಸಲು ಸಿದ್ದತೆ ಮಾಡಿದ್ದು, ಕಂಟ್ರೋಲ್ ರೂಂಗಳ ಸ್ಥಾಪನೆಗೆ ಟೆಂಡರ್ ಕರೆದಿದ್ದು, ಪ್ರತಿ ನಿಯಂತ್ರಣ ಕೊಠಡಿಗೆ ಸುಮಾರು 1.25 ಲಕ್ಷ ರೂ. ವೆಚ್ಚವಾಗಲಿದೆ.

ಅಲ್ಲದೇ ಕೊಠಡಿಯಲ್ಲಿ ಮಳೆಗಾಲಕ್ಕೆ ಬೇಕಾದ ಎಲ್ಲ ಉಪಕರಣಗಳಾದ ಮರ ಕಡಿಯುವುದು, ತುರ್ತು ಸಹಾಯಕ್ಕಾಗಿ ಜಾಕೇಟ್‌ಗಳು, 10 ಎಚ್‌ಪಿ ನೀರಿನ ಪಂಪ್‌ಗಳು ಇರುವ ಕೊಠಡಿಗಳನ್ನು ನಿರ್ಮಾಣಕ್ಕೆ ಮುಂದಾಗಿದೆ. ಜೂನ್ 1ಕ್ಕೆ ಈ ಕೊಠಡಿಗಳು ಕಾರ್ಯಾರಂಭವಾಗುವ ಸಾಧ್ಯತೆಯಿದೆ ಬಿಬಿಎಂಪಿ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:Girl Death: ಮನೆ ಮಹಡಿ ಮೇಲೆ ಆಟವಾಡುತ್ತಿದ್ದಾಗ ಬಾಲಕಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಸಾವು!

 

Leave A Reply

Your email address will not be published.