A slum girl to model for a beauty brand: ಐಷಾರಾಮಿ ಬ್ಯೂಟಿ ಬ್ರ್ಯಾಂಡ್‌ಗೆ ಮಾಡೆಲ್‌ ಆದ್ಲು 14 ರ ಸ್ಲಮ್‌ ಹುಡುಗಿ! ಇದು ಕೆಸರಲ್ಲಿ ಅರಳಿದ ಕಮಲದ ಇಂಟ್ರೆಸ್ಟಿಂಗ್ ಸ್ಟೋರಿ!

14 year old Mumbai slum girl chosen of luxury beauty brand forest essential

Slum girl beauty brand : ಕೋಟ್ಯಾಂತರ ರೂಪಾಯಿಗಳನ್ನು ಹೂಡಿಕೆ ಮಾಡೋ ಐಷಾರಾಮಿ ಬ್ರಾಂಡ್ಗಳು(Brands) ತಮ್ಮ ಪ್ರಚಾರಕ್ಕಾಗಿ ಸ್ಟಾರ್​​ ನಟ, ನಟಿಯರನ್ನು ಮಾಡೆಲ್‌ಗಳಾಗಿ ನೇಮಿಸಿಕೊಳ್ಳುತ್ತವೆ. ಆದರೆ ಇಲ್ಲೊಂದು ಬ್ರಾಂಡ್, ಕೊಳೆಗೇರಿಯಿಂದ(ಸ್ಲಮ್‌) ಬಂದ ಹುಡುಗಿಯನ್ನು ಮಾಡೆಲ್​(Slum girl beauty brand ) ಆಗಿ ಮಾಡಿರುವುದು ಸಖತ್​ ಸುದ್ದಿಯಲ್ಲಿದೆ.

ಹೌದು, ಮುಂಬೈನ(Mumbai) ಧಾರಾವಿ ಕೊಳೆಗೇರಿಯಿಂದ(Dharavi Slum) ಬಂದ ಹದಿನಾಲ್ಕರ ಹರೆಯದ ಮಲೀಶಾ ಖರ್ವಾ(Malisha Kharva) ಎಂಬ ಬಾಲಕಿ ಜನಪ್ರಿಯ ಬ್ಯೂಟಿ ಬ್ರಾಂಡ್‌ನಲ್ಲಿ ಮಿಂಚುತ್ತಿದ್ದಾರೆ. ಪ್ರತಷ್ಠಿತ ಬ್ಯೂಟಿ ಬ್ರಾಂಡ್‌ ಫಾರೆಸ್ಟ್‌ ಎಸೆನ್ಷಿಯಲ್ಸ್‌ನ(Forest Essentials) ’ಯುವತಿ ಕಲೆಕ್ಷನ್‌’ ಜಾಹೀರಾತಿನಲ್ಲಿ ಮಲೀಶಾ ಖರ್ವಾ ಕಾಣಿಸಿಕೊಂಡಿದ್ದಾರೆ.

ಅಂದಹಾಗೆ ಇತ್ತೀಚೆಗೆ ನೀವು ಎಲ್ಲಿಂದ ಬಂದಿದ್ದರೂ ಪರವಾಗಿಲ್ಲ, ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಿ ಎಂದು 2014 ರಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದು, ಭಾಷಣ ಮಾಡುವ ಸಂದರ್ಭದಲ್ಲಿ ನಟಿ ಲುಪಿತಾ ನ್ಯಾಂಗ್ ಹೇಳಿದ್ದರು. ಇಂತಹ ಒಂದು ಕನಸನ್ನು 14 ವರ್ಷದ ಕೊಳಗೇರಿ ಹುಡುಗಿ ಮಲೀಶಾ ಖಾರ್ವಾ ನನಸಾಗಿಸಿದ್ದಾರೆ.

ಹಾಲಿವುಡ್(Hollywood) ನಟ ರಾಬರ್ಟ್ ಹಾಫ್ಮನ್(Robert Hafman)ಅವರು 2020 ರಲ್ಲಿ ಮುಂಬೈನಲ್ಲಿ ಮ್ಯೂಸಿಕ್ ವೀಡಿಯೋವನ್ನು ಚಿತ್ರೀಕರಿಸುವಾಗ ಮಲೀಶಾ ಅವರನ್ನು ಪತ್ತೆಹಚ್ಚಿದರು ಈ ಹಾಲಿವುಡ್ ತಾರೆ ಆಕೆಗೆ ಆರ್ಥಿಕವಾಗಿ ಸಹಾಯ ಮಾಡಲು ಗೋ ಫಂಡ್ ಮಿ ಎಂಬ ಪುಟವನ್ನು ಸಹ ಸ್ಥಾಪಿಸಿದ್ದರು. ನಂತರ ಮಲೀಶಾ ಪ್ರಸಿದ್ಧಿಯನ್ನು ಗಳಿಸಿ, ಪ್ರಸ್ತುತ ಆಕೆ ಇನ್ಸ್ಟಾಗ್ರಾಮ್ ನಲ್ಲಿ 2.5 ಲಕ್ಷ ಫಾಲೋವರ್ಸ್​ ಹೊಂದಿದ್ದಾಳೆ. ಹಲವಾರು ಮಾಡೆಲಿಂಗ್ ಗಿಗ್ಸ್ ಗಳಲ್ಲಿ ಕಾಣಿಸಿಕೊಂಡಿದ್ದಾಳೆ ಹಾಗೂ ಲೈವ್ ಯುವರ್ ಫೇರಿಟೇಲ್ ಎಂಬ ಕಿರು ಚಿತ್ರದಲ್ಲೂ ಅಭಿನಯಿಸಿದ್ದಾರೆ. ಆಕೆಯನ್ನು ಪ್ರಿನ್ಸೆಸ್ ಆಫ್ ದಿ ಸ್ಲಮ್’ ಎಂದು ಕರೆಯುತ್ತಾರೆ. ಪ್ರಸ್ತುತ ಮಲೀಶಾ ಐಷಾರಾಮಿ ಬ್ಯೂಟಿ ಬ್ರಾಂಡ್ ‘ಫಾರೆಸ್ಟ್ ಎಸೆನ್ಷಿಯಲ್’ ನ ಹೊಸ ಅಭಿಯಾನವಾದ ‘ಯುವತಿ ಸೆಲೆಕ್ಷನ್’ ಹೊಸ ಮುಖವಾಗಿ ಕಾಣಿಸಿಕೊಂಡಿದ್ದಾಳೆ.

ತಮ್ಮ ಬ್ರಾಂಡ್‌ನಲ್ಲಿ ಮಲೀಶಾ ಖರ್ವಾ ಕಾಣಿಸಿಕೊಂಡಿರುವುದಕ್ಕೆ ಬ್ಯೂಟಿ ಬ್ರಾಂಡ್‌ ’ಫಾರೆಸ್ಟ್ ಎಸೆನ್ಷಿಯಲ್ಸ್‌’ ಸಂತಸ ವ್ಯಕ್ತಪಡಿಸಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ(Instagram) ಪೋಸ್ಟ್‌ವೊಂದನ್ನು ಹಂಚಿಕೊಂಡಿದೆ. ’ಕಂಡ ಕನಸು ಅವಳ ಕಣ್ಣೆದುರೆ ನನಸಾಗಿದಕ್ಕೆ ಆಕೆ ಖುಷಿಯಾಗಿದ್ದು, ಆಕೆಯ ಕಣ್ಣುಗಳು ಅದಕ್ಕೆ ಸಾಕ್ಷಿಯಾಗಿವೆ. ಡ್ರೀಮ್ ಕಮ್‌ ಟ್ರೂ ಎಂಬ ವಾಕ್ಯಕ್ಕೆ ಮಲೀಶಾ ಖರ್ವಾ ಕಥೆ ಸ್ಪೂರ್ತಿಯಾಗಲಿದೆ’ ಎಂದು ಬರೆದುಕೊಂಡಿದೆ.

ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದು, 5 ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋ ವೀಕ್ಷಿಸಿದ್ದಾರೆ. 4 ಲಕ್ಷಕ್ಕೂ ಅಧಿಕ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕರು ಮಲೀಶಾಳನ್ನು ಹೊಗಳಿದ್ದಾರೆ. ಅವಳು ತನ್ನ ಯಶಸ್ಸನ್ನು ಸವಿಯುವುದನ್ನು ನೋಡುವುದಕ್ಕೆ ಖುಷಿಯಾಗುತ್ತಿದೆ. ಆಕೆಗೆ ಭವಿಷ್ಯದಲ್ಲಿ ಹೆಚ್ಚಿನ ಅವಕಾಶ ಹಾಗೂ ಆಶೀರ್ವಾದ ಯಶಸ್ಸು ಸಿಗಲಿ ಎಂದು ಒಬ್ಬರು ವೀಕ್ಷಕರು ಬರೆದಿದ್ದಾರೆ. ಇದನ್ನು ನೋಡಿ ತುಂಬಾ ಸಂತೋಷವಾಯಿತು ಮತ್ತುಈಕೆಯನ್ನು ಮಾಡೆಲ್ ಆಗಿಸಿದ ಬ್ರ್ಯಾಂಡ್‌ಗೆ ಚಪ್ಪಾಳೆ. ನಮ್ಮ ದೇಶದಲ್ಲಿ ಕಂದು ಬಣ್ಣದ ಹುಡುಗಿಯರನ್ನು ಸೌಂದರ್ಯ ಬ್ರಾಂಡ್‌ಗಳನ್ನು ಪ್ರಚಾರ ಮಾಡಲು ಎಂದಿಗೂ ಪರಿಗಣಿಸುತ್ತಿರಲಿಲ್ಲ, ಈಗ ಸಮಯ ಬದಲಾಗಿದೆ ಅವಳು ತುಂಬಾ ಸುಂದರವಾಗಿದ್ದಾಳೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

 

ಅಲ್ಲದೆ ಫಾರೆಸ್ಟ್ ಎಸೆನ್ಷಿಯಲ್​​​ನ ಸಂಸ್ಥಾಪಕಿ ಮತ್ತು ಮುಖ್ಯ ವ್ಯವಸ್ಥಾಪನ ನಿರ್ದೇಶಕಿ ಮೀರಾ ಕುಲಕರ್ಣಿ ವೋಗ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ, ‘ನಾವು ಯುವತಿ ಕಲೆಕ್ಷನ್ ಮೂಲಕ ಮಲೀಶಾ ಅವರ ಕನಸನ್ನು ಬೆಂಬಲಿಸುವುದು ಮಾತ್ರವಲ್ಲದೆ ಯುವ ಮನಸ್ಸುಗಳನ್ನು ಸಶಕ್ತಗೊಳಿಸಲು ಪ್ರಾಜೆಕ್ಟ್ ಪಾಠಶಾಲೆಗೆ ಕೊಡುಗೆ ನೀಡುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ:Sanjana Galrani: ಮೆಕ್ಕಾ ಮದೀನಾ ಭೇಟಿಯ ಫೋಟೋಗಳನ್ನು ಹಂಚಿಕೊಂಡ ಸಂಜನಾ ಗಲ್ರಾನಿ!

Leave A Reply

Your email address will not be published.