Shocking news: ಒಂದೇ ಕಾಲೇಜಲ್ಲಿ ಕಲಿತ 65 ಹುಡುಗಿಯರಿಗೆ ಯೂಸ್ ಮಾಡಿದ ಕಾಂಡೋಮ್, ಲೈಂಗಿಕತೆಯ ಲೆಟರ್ ಕಳಿಸಿ ವಿಕೃತಿ! ಯಾರು ಕಳಿಸಿದ್ದು ಗೊತ್ತಾ?

Over 60 women in Australia received used condoms in mails with handwritten message

Womens received used condoms : ಒಂದೇ ಕಾಲೇಜಿನಲ್ಲಿ(Collage) ಕಲಿತ 65ಕ್ಕೂ ಹೆಚ್ಚು ಮಹಿಳೆಯರ ಮನೆಗೆ ಬಳಸಿದ ಕಾಂಡೋಮ್(Womens received used condoms ) ಕಳುಹಿಸಿದ ಅಘಾತಕಾರಿ ಘಟನೆಯೊಂದು ನಡೆದಿದ್ದು, ಇದರ ಜೊತೆಗೆ ಎಚ್ಚರಿಕೆ ಪತ್ರವನ್ನು ಕಳುಹಿಸಲಾಗಿದೆ. ಇದೀಗ ಈ ಆರೋಪಿಗಾಗಿ ಪೊಲೀಸರು(Police) ಹುಡುಕಾಟ ತೀವ್ರಗೊಂಡಿದೆ.

ಹೌದು, ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡಿದ್ದ ಸುಮಾರು 65 ಮಹಿಳೆಯರಿಗೆ ಬಳಸಿದ ಕಾಂಡೋಮ್ ಹಾಗೂ ಮೇಲ್‌ನಿಂದ ಬೆದರಿಕೆ ಸಂದೇಶ ಪತ್ರವನ್ನ ಕಳುಹಿಸಿರುವ ಘಟನೆ ಆಸ್ಟ್ರೇಲಿಯಾದ(Australia) ಮೆಲ್ಬೋರ್ನ್‌ನಲ್ಲಿ(Melborne) ನಡೆದಿದೆ. 1990ರ ದಶಕದ ಉತ್ತರಾರ್ಧದಲ್ಲಿ ಮೆಲ್ಬೋರ್ನ್ ಬಳಿಯ ಕ್ಯಾಥೋಲಿಕ್ ಹೈಸ್ಕೂಲ್(Catholic High school) ಕಿಲ್ಬ್ರೆಡಾ ಕಾಲೇಜ್(Kilbreda college) ಮೆಂಟೋನ್‌ನಲ್ಲಿ ವ್ಯಾಸಂಗ ಮಾಡಿದ ಸುಮಾರು 65 ಮಹಿಳೆಯರು ಕಳೆದ 2 ತಿಂಗಳಲ್ಲಿ ವಿಚಿತ್ರ ಮೇಲ್ ಸಂದೇಶವನ್ನ ಸ್ವೀಕರಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬರೋಬ್ಬರಿ 24 ವರ್ಷದ ಬಳಿಕ ಕ್ಯಾಥೋಲಿಕ್ ಕಾಲೇಜಿನಲ್ಲಿ ಕಲಿತ ಹಲವು ಹಳೇ ವಿದ್ಯಾರ್ಥಿಗಳಿಗೆ ಆಘಾತ ಎದುರಾಗಿದೆ. ಬೆಳ್ಳಂಬೆಳಗ್ಗೆ ಬಂದಿರುವ ಪಾರ್ಸೆಲ್(Parsel) ತೆರೆದು ನೋಡಿದರೆ, ಬಳಸಿರುವ ಕಾಂಡೋಮ್ ಜೊತೆಗೊಂದು ಬೆದರಿಕೆ ಪತ್ರ. ಆರಂಭಿಕ ಹಂತದಲ್ಲಿ ಒಂದಿಬ್ಬರು ಮಹಿಳೆಯರು ಈ ಕುರಿತು ದೂರು ನೀಡಿದ್ದಾರೆ. ಇದೀಗ ಒಟ್ಟು 65 ಮಹಿಳೆಯರು ಠಾಣೆ ಮೆಟ್ಟಿಲೇರಿದ ಘಟನೆ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆದಿದೆ. 1999ರಲ್ಲಿ ಕಿಲ್‌ಬ್ರೆಡಾ ಕಾಲೇಜ್ ಮೆಂಟೊನ್‌ನಿಂದ ವಿದ್ಯಭ್ಯಾಸ ಮುಗಿಸಿ ಹೊರಬಂದ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಬಳಸಿದ ಕಾಂಡೋಮ್ ಕಳುಹಿಸಲಾಗಿದೆ. ಇದೀಗ ಸತತ ದೂರಿನ ಬೆನ್ನಲ್ಲೇ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಇದೊಂದು ಉದ್ದೇಶಿತ ಕೃತ್ಯ ಎಂದು ಕರೆಯಲಾಗಿದ್ದು, ಈ ಘಟನೆ ಹಿಂದಿರುವ ವ್ಯಕ್ತಿಯನ್ನ ಪತ್ತೆಮಾಡಲು ಆಸ್ಟ್ರೇಲಿಯಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. 1999ರ ಶಾಲೆಯ ದಾಖಲಾತಿ ಪುಸ್ತಕದಿಂದ ಮಹಿಳೆಯರ ವಿಳಾಸ ಪಡೆದಿರುವುದಾಗಿ ವಿಕ್ಟೋರಿಯಾ ಪೊಲೀಸ್ ಡಿಟೆಕ್ಟಿವ್ ಸೀನಿಯರ್ ಸಾರ್ಜೆಂಟ್ ಗ್ರಾಂಟ್ ಲೂಯಿಸ್ ತಿಳಿಸಿದ್ದಾರೆ. ಈ ರೀತಿ ಬಳಸಿದ ಕಾಂಡೋಮ್ ಹಾಗೂ ಬೆದರಿಕೆ ಪತ್ರ ಕಳುಹಿಸಲು ಕಾರಣವೇನು? 1999ರ ಬ್ಯಾಚ್‌ನ ಯಾರಾದರೂ ಮಾಡಿರಬುಹುದೇ ಅನ್ನೋ ಅನುಮಾನ ಪೊಲೀಸರನ್ನು ಕಾಡುತ್ತಿದೆ. ಈಗಾಗಲೇ ಕಾಲೇಜು ಹಾಗೂ ಶಾಲೆಗೆ ತೆರಳಿ ಒಂದು ಸುತ್ತಿನ ತನಿಖೆ ನಡೆಸಲಾಗಿದೆ.

ಈ ಘಟನೆ ಕುರಿತು ಈಗಾಗಲೇ ಹಲವರನ್ನು ವಿಚಾರಣೆ ಒಳಪಡಿಸಲಾಗಿದೆ. ಆದರೂ ಬಳಸಿದ ಕಾಂಡೋಮ್ ಹಾಗೂ ಬೆದರಿಕೆ ಪತ್ರದ ಹಿಂದಿನ ಉದ್ದೇಶ, ಆರೋಪಿ ಕುರಿತು ಯಾವುದೇ ಸುಳಿಸುವ ಸಿಕ್ಕಿಲ್ಲ. ಇತ್ತ ಮಹಿಳೆಯರು ಆತಂತಕ್ಕೆ ಒಳಗಾಗಿದ್ದಾರೆ. ಈ ರೀತಿಯ ಪಾರ್ಸೆಲ್, ಬೆದರಿಕೆ ಪತ್ರ ಬರುತ್ತೆ ಅನ್ನೋ ಸಣ್ಣ ಸುಳಿವು ಅವರಿಗೆ ಇರಲಿಲ್ಲ.

ಅಂದಹಾಗೆ ಹಲವರ ಮನೆಯಲ್ಲಿ ಕುಟುಂಬದ ಇತರ ಸದಸ್ಯರು ಈ ಪಾರ್ಸೆಲ್ ತೆರೆದು ನೋಡಿದ್ದಾರೆ. ಪಾರ್ಸೆಲ್ ಹಾಗೂ ಬೆದರಿಕೆ ಪತ್ರ ಸ್ವೀಕರಿಸಿರುವ ಮಹಿಳೆಯೊಬ್ಬರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ನನಗೆ ಈ ರೀತಿ ಪಾರ್ಸೆಲ್ ಹಾಗೂ ಬೆದರಿಕೆ ಪತ್ರ ನೋಡಿ ಗಾಬರಿಯಾಗಿತ್ತು. ಕುಟುಂಬದ ಸಲಹೆಯಂತೆ ಪೊಲೀಸರಿಗೆ ದೂರು ನೀಡಿದ್ದೇನೆ. ಇದೇ ವೇಳೆ ಪೊಲೀಸರು ಹಲವು ಘಟನೆ ನಡೆದಿರುವ ಮಾಹಿತಿ ಬಹಿರಂಗ ಪಡಿಸಿದ್ದಾರೆ. ನಮ್ಮ ಮೇಲೆ ದ್ವೇಷ ಸಾಧಿಸಲು ಈ ರೀತಿ ಮಾಡಿರುವ ಸಾಧ್ಯತೆ ಇದೆ. ಈ ರೀತಿಯ ಹಗೆತನ ಸಾಧಿಸಲು ಕಾಲೇಜು ಹಾಗೂ ಶಾಲಾ ದಿನಗಳಲ್ಲಿ ಯಾವುದೇ ಘಟನೆಗಳು ನಡೆದಿಲ್ಲ. ಆದರೂ ಯಾಕೆ ಕಳುಹಿಸಿದ್ದಾರೆ ಅನ್ನೋದು ಅರ್ಥವಾಗಿಲ್ಲ ಎಂದಿದ್ದಾರೆ

ಈ ಕುರಿತು ಮಾತನಾಡಿರುವ ಗ್ರಾಂಟ್ ಲೂಯಿಸ್(Grant Luis), ತನಿಖಾಧಿಕಾರಿಗಳು ಅಪರಾಧಿಗಳನ್ನ ಪತ್ತೆಹಚ್ಚಲು ಡಿಎನ್‌ಎ ಮತ್ತು ಕೈಬರಹದ ವಿಶ್ಲೇಷಣೆ ನಡೆಸುತ್ತಿದ್ದಾರೆ. ಸುಮಾರು 24 ವರ್ಷಗಳ ಹಿಂದೆಯೇ ಮಹಿಳೆಯರ ವಿಳಾಸವನ್ನು ಶಾಲೆಯ ದಾಖಲಾತಿ ಪುಸ್ತಕದಿಂದ ಪಡೆದುಕೊಂಡಿದ್ದಾರೆ. ಮಹಿಳೆಯರಿಗೆ ಕಳುಹಿಸಲಾದ ಪತ್ರಗಳು ಕೆಲವು ಕೈಬರಹ ಮತ್ತು ಕೆಲವು ಟೈಪ್ ಮಾಡಿದವುಗಳಾಗಿವೆ. ಆದ್ರೆ ಎಲ್ಲ ಪತ್ರಗಳೂ ಬೆದರಿಕೆಯ ಲೈಂಗಿಕ ಸಂದೇಶಗಳನ್ನು ಒಳಗೊಂಡಿವೆ ಎಂದು ತಿಳಿಸಿದ್ದಾರೆ. ಅಲ್ಲದೇ, ನಾವು ನಿಮ್ಮನ್ನು ಹುಡುಕೇ ಹುಡುಕುತ್ತೇವೆ. ನೀವು ಇದನ್ನು ಇಲ್ಲಿಗೇ ನಿಲ್ಲಿಸಿದರೆ ಒಳ್ಳೆಯದು ಎಂದು ಪೊಲೀಸರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ:Kodimata Shree: ನೂತನ ಕಾಂಗ್ರೆಸ್ ಸರ್ಕಾರದ ಬಗ್ಗೆ ಅಚ್ಚರಿಯ ಭವಿಷ್ಯ ನುಡಿದ ಕೋಡಿಮಠ ಶ್ರೀ!! ಏನಾಗಲಿದೆ ಗೊತ್ತಾ ಸರ್ಕಾರದ ಭವಿಷ್ಯ?

Leave A Reply

Your email address will not be published.