Randeep Singh Surjewala: ಸಿಎಂ ಹುದ್ದೆಯ ಬಗ್ಗೆ ಅಂತಿಮ ನಿರ್ಧಾರ ಆಗಿಲ್ಲ, ಸುಳ್ಳು ಊಹಾಪೋಹಗಳಿಗೆ ಕಿವಿಗೊಡಬೇಡಿ : ಸುರ್ಜೇವಾಲ ಕಿಡಿ

Share the Article

Randeep Singh Surjewala:  ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಹೆಸರು ಅಧಿಕೃತವಾಗಿಲ್ಲ, ಯಾವುದೇ ಊಹಾಪೋಹಗಳಿಗೆ ಕಿವಿಕೊಡಬೇಡಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ (Randeep Singh Surjewala) ಸುರ್ಜೇವಾಲ ಹೇಳಿದ್ದಾರೆ.

ದೆಹಲಿಯ ಮಲ್ಲಿಕಾರ್ಜುನ ಖರ್ಗೆ ನಿವಾಸದ ಬಳಿ ಮಾಧ್ಯಮಗಳೊಂದಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡುತ್ತಾ, ಸಿಎಂ ಸ್ಥಾನದ ಬಗ್ಗೆ ಅಂತಿಮ ನಿರ್ಧಾರ ಆಗಿಲ್ಲ, ಮಲ್ಲಿಕಾರ್ಜುನ ಖರ್ಗೆ ಅವರೇ ಸಿಎಂ ಆಯ್ಕೆ ಮಾಡುತ್ತಾರೆ. ಶಾಸಕರು ಸರ್ವ ಸಮ್ಮತವಾಗಿ ಖರ್ಗೆಗೆ ಅಧಿಕಾರ ಕೊಟ್ಟಿದ್ದಾರೆ. ಸಿಎಂ ಆಯ್ಕೆ ಬಗ್ಗೆ ಈವರೆಗೆ ಅಂತಿಮ ನಿರ್ಧಾರ ಆಗಿಲ್ಲ. ಅವಿರೋಧವಾಗಿ ಸಿಎಲ್‌ಪಿ ನಾಯಕ ಆಯ್ಕೆಗೆ ಯತ್ನಿಸ್ತಿದ್ದಾರೆ. ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ, 48ರಿಂದ72 ಗಂಟೆ ಒಳಗೆ ಹೊಸ ಸಂಪುಟ ರಚಿಸ್ತೇವೆ ಎಂದಿದ್ದಾರೆ.

ಮೇ.10ರಂದು ಕರ್ನಾಟಕ ವಿಧಾನ ಸಭೆ ಚುನಾವಣೆ ನಡೆದಿದ್ದು, ಮೇ 13ರಂದು ಫಲಿತಾಂಶ ಹೊರ ಬಂದಿದ್ದು, ಕಾಂಗ್ರೆಸ್‌ ಭಾರೀ ಬಹು ಮತದೊಂದಿಗೆ ಗೆಲುವನ್ನು ಸಾಧಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ ಹೆಸರು ಅಧಿಕೃತವಾಗಿ ಘೋಷಣೆ ಸಾಧ್ಯತೆ ಸುದ್ದಿ ಹರಿದಾಡಿದ ಬೆನ್ನಲ್ಲೆ ಪ್ರಬಲ ನಾಯಕ ಡಿಕೆಶಿವಕುಮಾರ್‌ ಬಿಗ್‌ ಫೈಟ್‌ ಮುಂದುವರಿದೆ. ಅಲ್ಲದೇ ರಾಹುಲ್‌ ಮನವಿಗೂ ಡಿಕೆಶಿವಕುಮಾರ್‌ ಬಗ್ಗಲಿಲ್ಲ ಎಂಬುದನ್ನು ತಿಳಿಯಬಹುದಾಗಿದೆ.

 

ಇದನ್ನು ಓದಿ: DK Shivakumar: ಸಿಎಂ ಸ್ಥಾನ ನನಗೆ ಕೊಡದಿದ್ರೆ ಮಲ್ಲಿಕಾರ್ಜುನ್‌ ಖರ್ಗೆಗೆ ನೀಡಿ: ರಾಹುಲ್‌ ಮಾತಿಗೂ ಒಪ್ಪದ ಡಿಕೆಶಿ

Leave A Reply

Your email address will not be published.