DK Shivakumar: ಬೆಂಗಳೂರು :ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ(DK Shivakumar) ಬಿಗಿ ಪಟ್ಟು ಮುಂದುವರಿದ್ದು , ನನಗೆ ಕೊಡದಿದ್ದರೆ ಮಲ್ಲಿಕಾರ್ಜುನ್ ಖರ್ಗೆಗೆ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇ.10ರಂದು ಕರ್ನಾಟಕ ವಿಧಾನ ಸಭೆ ಚುನಾವಣೆ ನಡೆದಿದ್ದು, ಮೇ 13ರಂದು ಫಲಿತಾಂಶ ಹೊರ ಬಂದಿದ್ದು, ಕಾಂಗ್ರೆಸ್ ಭಾರೀ ಬಹು ಮತದೊಂದಿಗೆ ಗೆಲುವನ್ನು ಸಾಧಿಸಿದ್ದು, ಈ ಬೆನ್ನಲ್ಲೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹೆಸರು ಅಧಿಕೃತವಾಗಿ ಘೋಷಣೆ ಸಾಧ್ಯತೆ ಸುದ್ದಿ ಹರಿದಾಡಿದ ಬೆನ್ನಲ್ಲೇ ಪ್ರಬಲ ನಾಯಕ ಡಿಕೆಶಿವಕುಮಾರ್ ಪೈಪೋಟಿ ಮುಂದುವರಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಮಾತನಾಡಿ, ನನಗೆ ಕೊಡದಿದ್ದರೆ ಮಲ್ಲಿಕಾರ್ಜುನ್ ಖರ್ಗೆಗೆ ನೀಡಿ ಎಂದು ರಾಹುಲ್ ಮನವೊಲಿಕೆಗೂ ಡಿಕೆಶಿವಕುಮಾರ್ ಒಪ್ಪಲಿಲ್ಲ ಎಂದು ಮೇಲ್ನೊಟಕ್ಕೆ ತಿಳಿದು ಬಂದಿದೆ.
ಇದನ್ನು ಓದಿ: Siddaramaiah: ಬೆಂಗಳೂರಲ್ಲಿ ಸಿದ್ದು ಪ್ರಮಾಣವಚನಕ್ಕೆ ಸಿದ್ದತೆ : ಕಠೀರವ ಕ್ರೀಡಾಂಗಣದಲ್ಲಿ 50 ಸಾವಿರ ಜನರಿಗೆ ವ್ಯವಸ್ಥೆ