Mallikarjun Kharge: ಎಚ್ಚೆತ್ತ ಜಾತಿ ಸಂಘಟನೆಗಳು, ಖರ್ಗೆಗೆ ‘ ಲಿಂಗಾಯಿತ ಸಿಎಂ ‘.ಬೇಡಿಕೆ ಇತ್ತು ವೀರಶೈವ ಮಹಾಸಭಾ ಪತ್ರ; ದಲಿತರನ್ನೇ ಸಿಎಂ ಮಾಡಿ ಎಂದು ಬೀದಿಗಿಳಿದ ಜಿ ಪರಮೇಶ್ವರ್ ಬೆಂಬಲಿಗರು !

Lingayats should be CM' Wrote letter to AICC President Mallikarjun Kharge

Mallikarjun Kharge: ಮುಂದಿನ ಮುಖ ಕರ್ನಾಟಕದ ಮುಖ್ಯಮಂತ್ರಿ ಯಾರು ಎನ್ನುವ ಬಗ್ಗೆ ದೆಹಲಿಯಲ್ಲಿ ದೊಡ್ಡಮಟ್ಟದ ಚರ್ಚೆಗಳು ಮತ್ತು ಬೆಳವಣಿಗೆಗಳು ನಡೆಯುತ್ತಿವೆ. ಈಗಾಗಲೇ ದೆಹಲಿ ತಲುಪಿರುವ ಡಿಕೆ ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಖರ್ಗೆ ಜೊತೆ ಸಂಜೆ 6:30ಕ್ಕೆ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಲಿದ್ದಾರೆ.

ತದನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಲ್ಲಿಕಾರ್ಜುನ ಖರ್ಗೆಯವರನ್ನು (Mallikarjun Kharge) ಭೇಟಿಯಾಗಿ ತಮ್ಮ ವಾದ ಹೇಳಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಪಕ್ಷವನ್ನು ಅಧಿಕಾರಕ್ಕೆ ತನ್ನಿ, ನಿಮ್ಮನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಹೈಕಮಾಂಡ್ ಡಿಕೆ ಶಿವಕುಮಾರ್ ಅವರಿಗೆ ಹೇಳಿದ್ದಾರೆ ಎನ್ನುವ ಮಾತು ಇದೀಗ ಬಹಿರಂಗವಾಗಿದೆ. ನೀವು ಹೇಳಿದಂತೆ ನಡೆದುಕೊಳ್ಳಿ, ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎನ್ನುವುದು ಡಿಕೆ ಶಿವಕುಮಾರ್ ಅವರ ಖಡಕ್ ಒತ್ತಾಯ. ಪಕ್ಷ ಅಧಿಕಾರಕ್ಕೆ ಬಂದರೆ ಪಕ್ಷದ ಅಧ್ಯಕ್ಷರನ್ನು ಮುಖ್ಯಮಂತ್ರಿ ಯನ್ನಾಗಿ ಮಾಡುವುದು ಕಾಂಗ್ರೆಸ್ಸಿನ ರೂಢಿ. ನನ್ನನ್ನೇ ಮುಖ್ಯಮಂತ್ರಿ ಮಾಡಿ ಎನ್ನುವುದು ಡಿಕೆ ಶಿವಕುಮಾರ್ ಅವರ ಇನ್ನೊಂದು ಸ್ಟ್ರಾಂಗ್ ಪಾಯಿಂಟ್.

ಅತ್ತ ಸಿದ್ದರಾಮಯ್ಯನವರು ತಮ್ಮ ರಾಜಕೀಯ ಅನುಭವ ತಾವು ಈವರೆಗೆ ನೀಡಿದ ಹಲವು ಜನಪ್ರಿಯ ಯೋಜನೆಗಳ ಪ್ರಭಾವ ಮತ್ತು ಈಗ ತಮಗಿರುವ ಶಾಸಕರ ಸಂಖ್ಯಾಬಲ ಈ ಮೂರು ಬಲಿಷ್ಠ ಅಂಶಗಳೊಂದಿಗೆ ತಾವೇ ಸಿಎಂ ಆಗುವುದಾಗಿ ಪಟ್ಟಾಗಿ ಕುಳಿತು ಬಿಟ್ಟಿದ್ದಾರೆ. ಈ ಮಧ್ಯೆ ಮಠಾಧೀಶರುಗಳು ಎಚ್ಚೆತ್ತುಕೊಂಡಿದ್ದಾರೆ. ಒಕ್ಕಲಿಗ ಡಿಕೆ ಶಿವಕುಮಾರ್ ಪರ ಒಕ್ಕಲಿಗ ಸಂಘಟನೆಗಳು ಬೆಂಬಲ ಕೊಟ್ಟು ಬಲಪ್ರದರ್ಶನಕ್ಕೆ ಹೊರಟಿಯಾದ ವಿಷಯ ಈಗಾಗಲೇ ನಿಮಗೆ ಗೊತ್ತು. ಈ ಮಧ್ಯ ಲಿಂಗಾಯಿತ ಮಹಾಸಭಾ ಲಿಂಗಾಯಿತರ ಸಮುದಾಯದವರನ್ನೇ ಮುಖ್ಯಮಂತ್ರಿ ಯನ್ನಾಗಿ ಮಾಡಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದೆ.

” ಲಿಂಗಾಯಿತ ಸಮುದಾಯ ಕಾಂಗ್ರೆಸ್ ಅನ್ನು ಬೆಂಬಲಿಸಿದ ಕಾರಣದಿಂದ ಇಷ್ಟೆಲ್ಲಾ ಸಂಖ್ಯೆಯ ಅಭ್ಯರ್ಥಿಗಳು ಕಾಂಗ್ರೆಸ್ ನಿಂದ ಗೆದ್ದು ಬಂದಿದ್ದಾರೆ. ಅಂಕಿ ಸಂಖ್ಯೆಗಳು ಅವುಗಳ ಬಗ್ಗೆ ಈಗಾಗಲೇ ತಿಳಿಸಿವೆ. ರಾಜ್ಯದ ಬಹು ಸಂಖ್ಯಾತ ಲಿಂಗಾಯಿತರು ಕಾಂಗ್ರೆಸ್ ಕೈ ಹಿಡಿದ ಕಾರಣದಿಂದ ಇವತ್ತು ನೀವು ಅಧಿಕಾರ ಹಿಡಿಯುವ ಮಾತಾಡುತ್ತಿದ್ದೀರಿ. ಆದುದರಿಂದ ಲಿಂಗಾಯಿತರನ್ನೇ ಸಿಎಂ ಮಾಡಬೇಕು’ ಎಂದು ಲಿಂಗಾಯತ ಮಹಾಸಭಾ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದು ವಿನಂತಿಸಿದೆ.

ಈ ನಡುವೆ ದಲಿತರನ್ನು ಸಿಎಂ ಮಾಡಿ ಎನ್ನುವ ಕೂಗು ಎದ್ದಿದೆ. ಕಳೆದ ಬಾರಿ 2001ರಲ್ಲಿ ಜಿ ಪರಮೇಶ್ವರ್ ಅವರು ಎಐಸಿಸಿ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅವರ ಮುಂದಾಳತ್ವದಲ್ಲಿ ಚುನಾವಣೆ ನಡೆದು ಕಾಂಗ್ರೆಸ್ ಸಂಖ್ಯೆಯ ಶಾಸಕರನ್ನು ಪಡೆದಿತ್ತು.ಆ ಸಮಯದಲ್ಲಿ ದುರದೃಷ್ಟವಶಾತ್ ಜಿ ಪರಮೇಶ್ವರ್ ಅವರು ಸೋತು ಹೋಗಿದ್ದರು ( ಅಥವಾ ಅವರನ್ನು ಸೋಲಿಸಲಾಗಿತ್ತು. ಸಿದ್ದರಾಮಯ್ಯನವರು ಒಳಸಂಚು ಮಾಡಿ ಜಿ ಪರಮೇಶ್ವರ್ ಅವರನ್ನು ಸೋಲಿಸಿದ್ದಾರೆ ಎನ್ನುವುದು ಒಂದು ನಂಬಿಕೆ). ಆದುದರಿಂದ ಪರಮೇಶ್ವರ ಅವರಿಗೆ ಕಳೆದ ಬಾರಿ ಮುಖ್ಯಮಂತ್ರಿ ಪಟ್ಟದಿಂದ ಪಟ್ಟ ಸಿಕ್ಕಿರಲಿಲ್ಲ. ಈ ಬಾರಿಯಾದರೂ ಅವರನ್ನು ಮುಖ್ಯಮಂತ್ರಿ ಮಾಡಿ, ದಲಿತರಿಗೆ ಒಳ್ಳೆಯ ಸಂದೇಶ ಕಳುಹಿಸಿ. ದಲಿತರು ಯಾವತ್ತಿಗೂ ಕಾಂಗ್ರೆಸ್ಸಿನ ಪರಮನೆಂಟ್ ಮತದಾರರು, ಎಂದು ದಲಿತ ಪರ ಸಂಘಟನೆಗಳು ತುಮಕೂರಿನಲ್ಲಿ ಅಬ್ಬರಿಸಿದ್ದಾರೆ.

 

ಇದನ್ನು ಓದಿ: Beauty Tips: ಈ ಟಿಪ್ಸ್​ ಫಾಲೋ ಮಾಡಿದ್ರೆ, ಎಂದಿಗೂ ಯಂಗ್​ ಆಗಿರ್ತೀರ! 

Leave A Reply

Your email address will not be published.