Patient killed doctor: ಚಿಕಿತ್ಸೆ ನೀಡುತ್ತಿದ್ದ ವೈದ್ಯೆಗೆ ಚಾಕುವಿನಿಂದ ಇರಿದು ಕೊಂದ ರೋಗಿ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
A patient killed the doctor who treated him
Patient killed doctor: ತನ್ನ ಗಾಯ(Injury) ಕ್ಕೆ ಬ್ಯಾಂಡೇಜ್(Bandage) ಮಾಡುತ್ತಿದ್ದ ವೈದ್ಯೆಯನ್ನೇ ಗಾಯಾಳುವೋರ್ವ ಕತ್ತರಿಯಿಂದ ಇರಿದು ಕೊಂದ (Patient killed doctor) ಆಘಾತಕಾರಿ ಘಟನೆ ಕೇರಳ(Kerala)ದ ಕೊಲ್ಲಂ(Kollam) ಜಿಲ್ಲೆಯಲ್ಲಿ ನಡೆದಿದೆ.
ಹೌದು, ವಂದನಾ ದಾಸ್(Vandana Das- 22) ಎಂಬ ವೈದ್ಯೆಯು ಸಂದೀಪ್(Sandeep- 42) ಎಂಬುವವನಿಗೆ ಚಿಕಿತ್ಸೆ ನೀಡುವ ವೇಳೆ, ಆತನೆ ತನ್ನ ಗಾಯಕ್ಕೆ ಬ್ಯಾಂಡೇಜ್ ಮಾಡುತ್ತಿದ್ದ ವೈದ್ಯೆಯನ್ನೇ ಇರಿದು ಕೊಂದಿದ್ದಾನೆ. ವೈದ್ಯೆಯ ಹತ್ಯೆ ವಿಚಾರ ಬೆಳಕಿಗೆ ಬರುತ್ತಿದ್ದಂತೆ ರಾಜ್ಯಾದ್ಯಂತ ಡಾಕ್ಟರ್ಗಳು(Doctors) ಮುಷ್ಕರಕ್ಕೆ ಮುಂದಾಗಿದ್ದು ಮೇ 11ರಂದು ಒಂದು ದಿನದ ಧರಣಿಗೆ ಕರೆ ನೀಡಿದ್ಧಾರೆ.
ಅಂದಹಾಗೆ ತನ್ನ ಕುಟುಂಬದವರೊಂದಿಗೆ ಕಿತ್ತಾಡಿಕೊಂಡಿದ್ದ ಸಂದೀಪ್ (Sandeep) ತನ್ನನ್ನು ರಕ್ಷಿಸುವಂತೆ ಪೊಲೀಸರಿಗೆ ಕರೆ ಮಾಡಿ ತಿಳಿಸಿದ ಈ ವೇಲೆ ಘಟನಾ ಸ್ಥಳಕ್ಕೆ ಪೊಲೀಸರು ಹೋಗಿದ್ದು, ಹೊಡೆದಾಟದಲ್ಲಿ ಗಾಯಗೊಂಡಿದ್ದ ಆತನನ್ನು ಕೊಟ್ಟರಕ್ಕರ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಆತನ ಕಾಲಿಗೆ ಆದ ಗಾಯಕ್ಕೆ ವೈದ್ಯೆ ವಂದನಾ ದಾಸ್ (Vardhana Das) ಡ್ರೆಸ್ಸಿಂಗ್ ಮಾಡುತ್ತಿದ್ದರು. ಆದರೆ ಪಾನಮತ್ತನಾಗಿದ್ದ ಸಂದೀಪ್ ಇದ್ದಕ್ಕಿದ್ದಂತೆ ತನಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯೆಯ ಮೇಲೆ ಕತ್ತರಿಯಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ವೈದ್ಯೆ ವಂದನಾ ಸಾವನ್ನಪ್ಪಿದ್ದಾರೆ.
ಆತ ಇದ್ದಕ್ಕಿದ್ದಂತೆ ರೊಚ್ಚಿಗೆದ್ದು ಹಲ್ಲೆ ಮಾಡಲು ಕಾರಣ ಏನು ಎಂದು ತಿಳಿದು ಬಂದಿಲ್ಲ. ಆತ ಪಾನಮತ್ತನಾಗಿದ್ದು, ಆಸ್ಪತ್ರೆಗೆ ಕರೆತರುತ್ತಿದ್ದಂತೆ ಹಿಂಸಾಚಾರಕ್ಕೆ ತಿರುಗಿದ, ರೋಗಿಗೆ ಬ್ಯಾಂಡೆಜ್ ಮಾಡುವಾಗ ಒಳಗೆ ಬೇರೆ ಯಾರಿಗೂ ಇರಲು ಅನುಮತಿ ಇರದ ಕಾರಣ ಆತನ ಬಳಿ ವೈದ್ಯೆ ಮಾತ್ರ ಇದ್ದರು. ಒಮ್ಮೆಗೆ ಅಲ್ಲಿ ಜೋರಾಗಿ ಸಹಾಯಕ್ಕಾಗಿ ಬೊಬ್ಬೆ ಹೊಡೆದ ಸದ್ದು ಕೇಳಿಸಿತು. ಈ ವೇಳೆ ಸಂದೀಪ್ ಕೈಯಲ್ಲಿ ಚೂರಿ ಹಾಗೂ ಕತ್ತರಿ ಇದ್ದು, ನಾನು ನಿನ್ನನ್ನು ಸಾಯಿಸುತ್ತೇನೆ ಎಂದು ಆತ ಕಿರುಚಾಡುತ್ತಿದ್ದ, ಈ ವೇಳೆ ಪೊಲೀಸರು ಆತನನ್ನು ತಡೆಯಲು ಯತ್ನಿಸಿದಾಗ ಆತ ಅವರ ಮೇಲೂ ಹಲ್ಲೆ ಮಾಡಿದ್ದು, ಇದರಿಂದ ಡಾಕ್ಟರ್ ಮಾತ್ರವಲ್ಲದೇ ಇನ್ನು ನಾಲ್ವರು ಈತನ ಹುಚ್ಚಾಟಕ್ಕೆ ಗಾಯಗೊಂಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(IMA) ಅಧ್ಯಕ್ಷ ಡಾ. ಸುಲ್ಫಿ ನುಹೂ(Dr. Sulfi nuhu) ಕಳೆದ ಕೆಲ ಸಮಯದಿಂದ ವೈದ್ಯರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಸರ್ಕಾರ ಕೂಡ ಕಠಿಣ ಕಾನೂನು ಜಾರಿಗೆ ತರುವ ಮೂಲಕ ಅಪರಾಧಿಗಳಿಗೆ ಶಿಕ್ಷೆ ನೀಡುವುದಾಗಿ ಹೇಳುತ್ತಿದೆ. ಆದರೆ, ಸರ್ಕಾರ ಹೇಳಿದ ಹಾಗೆ ಯಾವುದು ನಡೆಯುತ್ತಿಲ್ಲ. ಕೇರಳದಲ್ಲಿ ಇದೇ ಮೊದಲ ಬಾರಿಗೆ ಕರ್ತವ್ಯದಲ್ಲಿದ್ದ ವೈದ್ಯರೊಬ್ಬರನನ್ನು ಹತ್ಯೆ ಮಾಡಿರುವುದು ಎಂದು ಕಿಡಿಕಾರಿದ್ದಾರೆ.